ಬಾಬಾ ಸಾಹೇಬರು ನೀಡಿದ ಧಮ್ಮ ಎಲ್ಲ ಕಡೆ ವಿಸ್ತರಿಸಬೇಕು: ರಮಾತಾಯಿ ಅಂಬೇಡ್ಕರ್

0
8
  • ಸುರಪುರ: ಗೋಲ್ಡನ್ ಕೇವ್ ಬುದ್ಧ ವಿಹಾರಕ್ಕೆ ಶಿಲಾ ಮಹಾದ್ವಾರ ಅನಾವರಣ

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ವಿಹಾರಕ್ಕೆ ನೂತನವಾಗಿ ನಿರ್ಮಿಸಲಾಗಿರುವ ಶಿಲಾ ಮಹಾದ್ವಾರದ ಅನಾವರಣ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ವರಜ್ಯೋತಿ ಭಂತೇಜಿಯವರು ಪಂಚಶೀಲ ಪಠಣದೊಂದಿಗೆ ಕಾರ್ಯಕ್ರಮ ನೆರವೇರಿಸಲಾಯಿತು.

ಶಿಲಾ ಮಹಾದ್ವಾರ ಅನಾವರಣಗೊಳಿಸಿದ ಡಾ:ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾತಾಯಿ ಅಂಬೇಡ್ಕರ್ ಅವರು ಮಾತನಾಡಿ, ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರ ಶೀರ್ಘದಲ್ಲಿ ಹೆಚ್ಚು ಅಭಿವೃದ್ಧಿಯಾಗಬೇಕು ಇಲ್ಲಿ ಬೌದ್ಧ ದ್ಯಾನಮಾಡುವ ಕೇಂದ್ರ ಹಾಗೂ ಸಾಮ್ರಾಟ ಅಶೋಕನ ಸಂಶೋಧನಾ ಕೇಂದ್ರ ಮತ್ತು ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರ ಅದ್ಯಾಯನ ಕೇಂದ್ರಗಳು ತಲೆ ಎತ್ತಬೇಕು ಎಲ್ಲಕ್ಕಿಂತ ಮಿಗಿಲಾಗಿ ಬಾಬಾಸಾಹೇಬರು ನಮಗೆ ನೀಡಿದ ಧಮ್ಮವನ್ನು ಎಲ್ಲಕಡೆ ಇನ್ನು ಹೆಚ್ಚು ಹೆಚು ಪಸರಿಸಲು ಮಹಿಳಾ ಉಪಾಸಿಕರವವರು ಮನೆಯಲ್ಲಿ ತಮ್ಮ ಮಕ್ಕಳಿಗೆ ಇದರ ಬಗ್ಗೆ ಸತ್ಯಮಾಹಿತಿಯನ್ನು ನೀಡುವಂತಾಗಬೇಕು.ಈ ಬುದ್ಧ ವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿರುವುದು ನಿಜವಾದ ಉತ್ತಮ ಬೆಳವಣಿಗೆ ಮತ್ತು ಇಂದು ನನ್ನ ಕೈಯಿಂದ ಪೂಜ್ಯ ಬಂತೇಜಿಯವರ ಸಮ್ಮುಖದಲ್ಲಿ ತಮ್ಮೆಲ್ಲರ ಉಪಸ್ಥಿತಿಯಲ್ಲಿ ವಿಹಾರದ ಹೊಸ್ತಿಲು ಪೂಜೆ ಮಾಡಿರುವುದು ನಮ್ಮ ಸೌಬಾಗ್ಯವೆಂದÀರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿಂತಕ ಬುಧ್ಧಘೋಷ್ ದೇವೆಂದ್ರ ಹೆಗ್ಗಡೆ ಮಾತನಾಡಿ, ಅಕ್ಟೋಬರ್ 14 ರಂದು ಬೌದ್ಧ ಧಮ್ಮ ದೀಕ್ಷಾ ಕಾರ್ಯಾಕ್ರದಲ್ಲಿ ಬಾಗವಹಿಸಿದ ಡಾ.ಬಿಆರ್ ಅಂಬೇಡ್ಕರ್ ರವರ ವಂಶದ ಕುಡಿ ಮೊಮ್ಮಗಳಾದ ಆಯುಷ್ಮತಿ ರಮಾತಾಯಿ ಅಂಬೇಡ್ಕರ್ ರವರು ಸುರಪುರ ನಗರಕ್ಕೆ ಪ್ರಪ್ರಥಮಬಾರಿಗೆ ಆಗಮಿಸಿದ ಸವಿನೆನಪಿಗಾಗಿ ಬುದ್ಧ ವಿಹಾರದ ಪೂರ್ವ ನಿಯೋಜಿತ ಶುಭ ಕಾರ್ಯಾವಾದ ಗೋಲ್ಡನ್ ಕೇವ್ ಬುದ್ಧ ವಿಹಾರದ ಮುಖ್ಯದ್ವಾರದ ಕಲ್ಲಿನ ಹೊಸ್ತಿಲನ್ನು ಪೂಜ್ಯ ವರಜ್ಯೋತಿ ಭಂತೇಜಿಯರ ಪಂಚಶೀಲ ಪಠಣದೊಂದಿಗೆ ಬೌದ್ಧ ಧಾರ್ಮಿಕದಂತೆ ಅಳವಡಿಸಲಾಯಿತು.

ಈ ಕಾರ್ಯಾಕ್ರಮದಲ್ಲಿ,ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ,ಮುಖಂಡರಾದ ನಾಗಣ್ಣ ಕಲ್ಲದೇವನಳ್ಳಿ, ರಾಹುಲ್ ಹುಲಿಮನಿ ಭಿಮರಾಯ ಸಿಂದಗೇರಿ, ವೆಂಕಟೇಶ ಸುರಪುರ, ಮಾಳಪ್ಪ ಕಿರದಳ್ಳಿ, ಮರೆಪ್ಪ ತೇಲ್ಕರ್, ರಾಜು ದೊಡ್ಡಮನಿ,ವೀರಭದ್ರ ತಳವಾರಗೇರಾ, ಶಿವಶಂಕರ ಹೊಸಮನಿ, ಮಂಜುನಾಥ ಹೊಸಮನಿ ,ಚಂದಪ್ಪ ಪಂಚಮ್ ಹಣಮಂತ ತೇಲ್ಕರ್ ಪರುಶುರಾಮ್ ಗೋವಾ, ಅವಿನಾಶ್ ಚಿಕ್ಕನಳ್ಳಿ, ನಾಗರಾಜ್ ಬೇವಿನಾಳ, ರಾಮು ತೆಲ್ಕರ್ ಯಲ್ಲಪ್ಪ ರತ್ತಾಳ ಮಂಜುಳಾ ಸುರಪುರ, ಶಿವಮೊಗ್ಗೆಮ್ಮ ಹೊಸಮನಿ, ಭೀಮಂಬಾಯಿ ಕಲ್ಲದೇವನಳ್ಳಿ, ಶಿಲ್ಪಾ ಹುಲಿಮನಿ, ಭಾರತಿ ಸಿಂದಗೇರಿ, ಬಸಮ್ಮ ಹುಲಿಮನಿ, ಸುನಿತಾ ಕಿರದಳ್ಳಿ, ಶೀವಲೀಲಾ ದೇವಿಕೆರಿ, ಯಲ್ಲಮ್ಮ ತೇಲ್ಕರ್, ಖುತ್ಬಜಾ ಕ್ರಾಂತಿ, ಇತರೇ ಮಹಿಳೆಯರು ಮಕ್ಕಳು ಅನೆಕರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here