ಕಲಬುರಗಿ: ಒಮ್ಮೆ ಗಾಂಧಿಜೀ ಯವರು ಮೂರನೇ ತರಗತಿಯಲ್ಲಿರುವಾಗ ಸತ್ಯ ಹರೀಶ್ಚಂದ್ರ ನಾಟಕವನ್ನು ನೊಡಿ ಪ್ರಭಾವಿತರಾಗಿ ಮಹತ್ಮರಾದರು. ಸಾಗರಗಳು ದೊಡ್ಡವಲ್ಲ, ಬೆಟ್ಟ-ಗುಡ್ಡಗಳು ದೊಡ್ಡವಲ್ಲ: ಅತ್ಯಂತ ದೊಡ್ಡವರು, ಶ್ರೇಷ್ಠರು ಯಾರು ಎಂದರೆ ವಂಶಜೋತಿ, ಬಾಳಕುಡಿಗಳಾದ ಇಂದಿನ ಮಕ್ಕಳೆ. ಮನೆ ಮನೆ ಮೇಲೆ ಧ್ವಜಗಳಿರುವ ಬದಲಿಗೆ ಮಗುವಿನ ಮನ ಮತ್ತು ತೋಳುಗಳಲ್ಲಿ ಧ್ವಜವಿರಲಿ ಎಂದು ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ ಕಾಯಕ ಫೌಂಡೇಶನ್ ಸಂಸ್ಥೆ ಮಕ್ಕಳಿಗಾಗಿ ಹತ್ತು ದಿನಗಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ನಾಟಕದ ಪ್ರದರ್ಶನವನ್ನು ಡೊಲು ಬಾರಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಒಂದು ಕೃತಿ ಒದುವುದರಕ್ಕಿಂತಲೂ ಅದನ್ನ ಮೈ-ಮನವನ್ನು ಬಳಸಿ ಅಭಿನಯಿಸುವುದರ ಮೂಲಕ ಕಲಿತರೆ ಯಾವತ್ತು ಕಲಿತದ್ದು ನೆನಪು ಹೋಗುವುದಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ, ಭಗತ್ ಸಿಂಗ ಸೇರಿದಂತೆ ಅನೇಕ ಸ್ವತಂತ್ರ ಹೋರಾಟಗಾರರನ್ನು ಮಕ್ಕಳಿಗೆ ನೆನಪಿಸಿ ಕೊಟ್ಟು ಮಕ್ಕಳನ್ನು ಹುರಿದುಂಬಿಸಿದರು.
ಮಕ್ಕಳು ಅನೇಕ ಪ್ರಕಾರದ ರಂಗಗಳಲ್ಲಿ ಪಳಗಬೇಕು, ಬೆಳೆಯಬೇಕು ಆ ಮೂಲಕ ಬದಕನ್ನ ಅರ್ಥ ಮಾಡಿಕೊಳ್ಳಬೇಕು ಎಚಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸದ್ದ ಸಂಸ್ಥೆಯ ಮುಖ್ಯಸ್ಥರಾದ ಶಿವರಾಜ ಪಾಟೀಲ್ ಮಾತನಾಡುತ್ತ ಮಕ್ಕಳು ಬರೀ ಅಂಕಗಳ ಬೆನ್ನು ಹತ್ತಿದರೆ ಸಾಲದು ಸಂಸ್ಕಾರ ಕಲಿಯಬೇಕು, ಆ ಸಂಸ್ಕಾರಗಳು ಮಕ್ಕಳಿಗೆ ಬರಬೇಕೆಂದರೆ ಎಲ್ಲಾ ಕಲೆಗಳನ್ನು ಕನಿಷ್ಠ ಪ್ರಾಥಮಿಕವಾಗಿದರೂ ಕಲಿಯಲೇ ಬೇಕು ಎಚಿದರು. ಜಗತ್ತಿನಲ್ಲಿ ಕಲೆ ಗೊತ್ತಿದ್ದವರೆ ವಿಜ್ಞಾನಿಗಳಾದ್ದಾರೆ ಎನ್ನುವು ಮೂಲಕ ಮಕ್ಕಳಿಗೆ ತಿಳಿ ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆಯ ಅದ್ಯಕ್ಷರಾದ ಸಪ್ನಾರೆಡ್ಡಿ ಎಸ್.ಪಾಟೀಲ್, ಹಿರಿಯ ಚಿತ್ರ ಕಲಾವಿದರಾದ ವಿ.ಬಿ ಬಿರಾದಾರ, ಶಿಲ್ಪ ಕಲವಾವಿದರಾದ ಗೌರಿಶಂಕರ ಬಿ.ಜಿ , ನಾಟಕ ನಿರ್ದೇಶಕ ಅಶೋಕ ತೊಟ್ನಳ್ಳಿ ಇದ್ದರು.
ನಂತರ ಶಿಬಿರದಲ್ಲಿ ತಯಾರಾದ ಶ್ರೀನಿವಾಸ ಉಡುಪ ರಚನೆಯ ಅಶೋಕ ತೊಟ್ನಳ್ಳಿ ನಿರ್ದೇಶನದ ಬೆರಳುಗಳು ನಾಟಕ ಪ್ರದರ್ಶನವಾಯಿತು. ಕಾರ್ಯಕಮದ ನಿರುಪಣೆ ಪ್ರಾಣೇಶ ಬಡಿಗೇರ, ಸ್ವಾಗತವನ್ನು ವಿಠಲ್ ಕೊರಿದರು.