ಮಕ್ಕಳಿಗೆ ಮೌಲ್ಯಯುತ ಶಿಕ್ಷಣ, ಸಂಸ್ಕಾರ ನೀಡಿ

0
51

ಕಲಬುರಗಿ: ಮಕ್ಕಳಿಗೆ ಕೇವಲ ಪಠ್ಯ ಬೋಧಿಸದೆ ಸಮಾಜದಲ್ಲಿ ಆದರ್ಶಪ್ರಾಯ ಜೀವನ ಸಾಗಿಸುವುದಕ್ಕೆ ಪೂರಕವಾಗಿ ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಡಾ.ಅಂಬೇಡ್ಕರ್ ಸೆಂಟರ್ ಫಾರ್ ಎಕ್ಸಲೆನ್ಸ್ ಮತ್ತು ಅಮರ್ಜಾ, ಮಲಪ್ರಭಾ ಹಾಗೂ ನರ್ಮದಾ ಎಂಬ ಮೂರು ವಸತಿ ನಿಲಯಗಳನ್ನು ಉದ್ಘಾಟಿಸಿ  ಮಾತನಾಡಿದ ಅವರು, ಬಾಹ್ಯ ಜ್ಞಾನಾರ್ಜನೆ ನೀಡುವುದರ ಮೂಲಕ ಮಾನವನಿಂದ ವಿಶ್ವ ಮಾನವನ್ನಾಗಿಸಬೇಕಿದೆ ಎಂದರು.

Contact Your\'s Advertisement; 9902492681

ಐ.ಎ.ಎಸ್., ಐ.ಪಿ.ಎಸ್. ಸೇರಿದಂತೆ ನಾಗರಿಕ ಸೇವಾ ಪರೀಕ್ಷೆ ಬರೆಯಲು ದೂರದ ದೆಹಲಿ, ಹೈದ್ರಾಬಾದ, ಬೆಂಗಳೂರು ಹೋಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿತ್ತು. ಇದನ್ನು ತಪ್ಪಿಸಲೆಂದೆ ನಮ್ಮ ಸರ್ಕಾರ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಯು.ಪಿ.ಎಸ್.ಸಿ, ಬ್ಯಾಂಕಿಂಗ್, ನಾಗರಿಕ ಸೇವಾ ಪರೀಕ್ಷೆ ಬರೆಯಲು ಅನುಕೂಲಕ್ಕಾಗಿ ಇಲ್ಲಿ ಅಂಬೇಡ್ಕರ್  ಸೆಂಟರ್ ಫಾರ್ ಎಕ್ಸಲೆನ್ಸ್ ಸ್ಥಾಪಿಸಿದೆ. ಪ್ರಸ್ತುತ ಸಿ.ಯು.ಕೆ.ನಲ್ಲಿ ತರಬೇತಿಗೆ 84 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರಿಗೆ ವಸತಿ ಸಹಿತ ನುರಿತ ಉಪನ್ಯಾಸಕರಿಂದ ಗುಣಮಟ್ಟದ ತರಬೇತಿ ಆರಮಭಗೊಂಡಿದೆ ಎಂದರು.

ತರಬೇತಿಗೆ ಆಯ್ಕೆಯಾದವರಿಗೆ ಶುಭ ಕೋರಿದ ಸಚಿವರು ಎಕ್ಸ್‍ಲೆನ್ಸ್ ಸೆಂಟರ್ ಉದ್ದೇಶ ಅರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಕೇಂದ್ರಕ್ಕೆ ಕೀರ್ತಿ ತನ್ನಿ ಎಂದರು.

ಅಂದು ಶೋಷಿತ ವರ್ಗ ಸರಸ್ವತಿ ಮುಟ್ಟುವಂತಿರಲಿಲ್ಲ. ಶಿಕ್ಷಣ ಪಡೆಯುವುದು ಕೆಲವರಿಗೆ ಮಾತ್ರ ಸೀಮಿತ ಎಂಬ ಕಾಲಘಟ್ಟದಿಂದ ಅಂಬೇಡ್ಕರ್ ರಚನೆಯ ಸಂವಿಧಾನದ ಪರಿಣಾಮ ಇಂದು ನಾವೆಲ್ಲರು ಎಲ್ಲರಿಗೂ ಶಿಕ್ಷಣದ ಬಗ್ಗೆ ಮಾತಾಡುತ್ತಿದ್ದೇವೆ. ದಕ್ಷಿಣ ಭಾರತದ ಮಕ್ಕಳು ಇಂದಿಗೂ ಐ.ಐ.ಟಿ, ಐ.ಐ.ಎಂ. ಕೋರ್ಸ್‍ಗೆ ಪ್ರವೇಶಾತಿ ಪಡೆಯುತ್ತಿಲ್ಲ. ಹಿಂದೆಲ್ಲ ಎಸ್.ಎಸ್.ಎಲ್.ಸಿ. ಪಾಸಾದರೆ ಇಡೀ ಬೀದಿ ಸಂಭ್ರಮದಲ್ಲಿರತ್ತಿತ್ತು. ಇದೀಗ ಎಂ.ಎ, ಎಂ.ಎಸ್ಸಿ, ಎಂ.ಕಾಂ. ಪಾಸಾದವರು 5000 ರೂ. ಸಂಭಾವನೆಯ ಅತಿಥಿ ಶಿಕ್ಷಕನಾಗಿ ದುಡಿಯಲು ಹೊರಟಿದ್ದಾರೆ. ಹಾಗಾದರೇ ನಮ್ಮ ಶಿಕ್ಷಣ ಯಾವ ಮಟ್ಟದಲ್ಲಿದೆ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಸಂಸ್ಥೆಗಳು, ಇಲ್ಲಿನ ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚು ಗಮನಹರಿಸಬೇಕು ಎಂದರು.

ಉನ್ನತ ಸಂಸ್ತೆಗಳಲ್ಲಿ ಇನ್ನೂ ಮೀಸಲಿಲ್ಲ: ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗ ತಳ ಸಮುದಾಯ ಇತರೆ ಸಮುದಾಯಗಳಂತೆ ಸಮಾನತೆ ಪಡೆಯಲೆಂದೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾನೂನು ಬದ್ಧವಾಗಿ ಮೀಸಲಾತಿ ಸೌಲಭ್ಯ ನೀಡಿದ್ದರೂ ಸಹ ಸುಪ್ರೀಂ ಕೋರ್ಟ್, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ಉನ್ನತ ಸಂಸ್ಥೆಗಳಲ್ಲಿ ಇಂದಿಗೂ ಮೀಸಲಾತಿ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ ಸಚಿವ ಎ.ನಾರಾಯಣಸ್ವಾಮಿ ಅವರು, ಸಂವಿಧಾನ ಮೂಲ ಆಶಯವನ್ನು ಅರ್ಥ ಮಾಡಿಕೊಳ್ಳದ ಯಾವುದೇ ವ್ಯಕ್ತಿ ಅಧಿಕಾರ ಚಲಾಯಿಸಲು ಮತ್ತು ಖುರ್ಚಿ ಮೇಲೇ ಕೂಡಲು ಅರ್ಹನಲ್ಲ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಕಳೆದ ಒಂದು ದಶಕದಿಂದ ಇಲ್ಲಿ ಸಿ.ಯು.ಕೆ. ಕಾರ್ಯನಿರ್ವಹಿಸುತ್ತಿದೆ. ಪ್ರದೇಶದ ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಎಕ್ಸಲೆನ್ಸ್ ಸೆಂಟರ್ ಸ್ಥಾಪಿಸುತ್ತಿರುವುದು ಸಂತಸ ತಂದಿದೆ ಎಂದ ಅವರು ಕ್ಯಾಂಪಸ್‍ನಲ್ಲಿ  ಕೆ.ಕೆ.ಅರ್.ಡಿ.ಬಿ.ಯಿಂದ 2.50 ಕೋಟಿ ರೂ. ವೆಚ್ಚ ಮಾಡಿ 100 ಜನ ಸಾಮಥ್ರ್ಯದ ಬಾಲಕರ ವಸತಿ ನಿಲಯ ನಿರ್ಮಿಸಲಾಗಿದೆ. ಕಲಬುರಗಿ ನಗರದಲ್ಲಿ 80 ಲಕ್ಷ ರೂ. ಅನುದಾನದಿಂದ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ ಕಾರ್ಯ ಸಾಗಿದ್ದು, ಇನ್ನೂ ಅಲ್ಪ ಕೆಲಸ ಉಳಿದಿದೆ. ಕೇಂದ್ರದಿಂದ ಅನುದಾನ ತಂದು ಅದನ್ನು ಪೂರ್ಣಗೊಳಿಸಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡರು.

ಕಾರ್ಯಕ್ರಮ ಸಂಯೋಜಕ ಡಾ. ಸಂಗಮೇಶ ಮಾತನಾಡಿ, ಯು.ಪಿ.ಎಸ್.ಸಿ., ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಸ್.ಸಿ.-ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಸೆಂಟರ್ ಫಾರ್ ಎಕ್ಸಲೆನ್ಸ್ ಕೇಂದ್ರ ಸ್ಥಾಪಿಸಲಾಗಿದೆ. ಜೊತೆಗೆ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ಬರೆಯಲು, ಸಂದರ್ಶನ ನಡೆಸಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಕಳೆದ ಅಕ್ಟೋಬರ್ 1 ರಿಂದಲೇ ತರಬೇತಿ ತರಗತಿಗಳು ಆರಂಭಗೊಂಡಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ 500 ಜನ ಪರೀಕ್ಷೆ ಬರೆದಿದ್ದು, 100 ಜನ ಸಾಮಥ್ರ್ಯದ ಪೈಕಿ 84 ಜನರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದು ಕೇಂದ್ರದ ಕಾರ್ಯಚಟುವಟಿಕೆ ಕುರಿತು ವಿವರಿಸಿದರು.

ಕರ್ನಾಟಕ ಕೆಮದ್ರೀಯ ವಿಶ್ವವಿದ್ಯಾಲಯ ಭೇಟಿ ನೀಡಿದ ಸವಿನೆನಪಿನಲ್ಲಿ ಕ್ಯಾಂಪಸ್ ಆವರಣದಲ್ಲಿ ಸಚಿವ ಎ.ನಾರಾಯಣಸ್ವಾಮಿ ಅವರು ಗಿಡ ನೆಟ್ಟು ನೀರುಣಿಸಿದರು.

ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಎಸ್.ವಿ.ಶೇಷಗಿರಿರಾವ ಅವರು “ಭಾರತದ ನೈಜ ಇತಿಹಾಸ ಮತ್ತು ಸಂಸ್ಕøತಿ” ಕುರಿತು ಬರೆದ ಪುಸ್ತಕವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ಗಣ್ಯರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ, ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ, ವಿಧಾನ ಪರಿಷತ್ ಶಾಸಕ ಡಾ.ಬಿ.ಜಿ.ಪಾಟೀಲ, ಅಲೆಮಾರಿ ಅರೇ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರ ಕುಮಾರ ದಾಮೋದರ ಸೇರಿದಂತೆ ವಿ.ವಿ. ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಇದ್ದರು. ಕುಲಸಚಿವ ಪೆÇ್ರ.ಬಸವರಾಜ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಣೇಶ ಪವಾರ ವಂದಿಸಿದರು. ನಿತಿನ್ ಮತ್ತು ಮಹಿಮಾ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here