ಅಂಬಲಗಾದಲ್ಲಿ ರೈತ ನಾಯಕ ಕಾಂ. ದಿ.ಮಾರುತಿ ಮಾನಪಡೆ 2 ನೇ ಪುಣ್ಯ ಸ್ಮರಣೆ ಆಚರಣೆ

0
75

ಕಲಬುರಗಿ: ರೈತ  ನಾಯಕ,  ಈ ನೆಲದ ಜನಪರ ಧ್ವನಿ,  ಹೋರಾಟ ರತ್ನ  ದಿ.ಮಾರುತಿ ಮಾನಪಡೆ ಯವರ 2 ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮಾರುತಿ ಮಾನಪಡೆ ಅಭಿಮಾನಿಗಳ ಸೇವಾ ಸಂಘ ವತಿಯಿಂದ  ಜರುಗಿತು.

ಮಾರುತಿ ಮಾನಪಡೆ ಅವರು ತೊಗರಿ ಬೆಳೆಗೆ ವೈಜ್ಞಾನಿಕ ಬೆಂಬಲ ನಿಗದಿಪಡಿಸಲು ಯಶಸ್ವಿಯಾಗಿದ್ದು  ನಿರಂತರ ಹೋರಾಟದಿಂದ  ಮತ್ತು ತೊಗರಿ ಮಂಡಳಿ ಸ್ಥಾಪನೆ ಮಾನಪಡೆ ಅವರ ಹೋರಾಟದ ಫಲ ಎಂದು ಸುನಿಲ್ ಮಾನಪಡೆ ಪ್ರಾಸ್ತಾವಿಕವಾಗಿ ಮಾತನಾಡಿ  ಹೇಳಿದ್ದರು.

Contact Your\'s Advertisement; 9902492681

ಮಾನಪಡೆ ಅವರು ಗ್ರಾಮ ಪಂಚಾಯತ್ ನೌಕರರ ಸಂಘ  ಸ್ಥಾಪಿಸಿ ಗ್ರಾಮ ಪಂಚಾಯತ್  ನೌಕರರಿಗೆ ಗೌರವಯುತ ಬದುಕು ಬದುಕಲು ಅವಕಾಶ ಮಾಡಿಕೊಂಡ ಶ್ರೇಯಸ್ಸು ಮಾನಪಡೆ ಅವರಿಗೆ ಸಲ್ಲುತ್ತದೆ.  ದೇವದಾಸಿ ಮಹಿಳೆಯರ ಸಂಘ ಸ್ಥಾಪಿಸಿ, ದೇವದಾಸಿ ಮಹಿಳೆಯರ ಹಕ್ಕುಗಳಿಗೆ ಹೋರಾಟ ನಡೆಸಿ, ಸರಕಾರ ಸವಲತ್ತುಗಳನ್ನು ಕೊಡಿಸಲುಲಾಯಿತು  ಹಾಗೂ  ಅವರಿಗಾಗಿ ನಿಗಮ ಸ್ಥಾಪಿಸಲು ಸಾಧ್ಯವಾಯಿತು.

ಮುಂದಿನ  ದಿನಗಳಲ್ಲಿ ಮಾನಪಡೆ ಯವರ ಕುರಿತು ಪುಸ್ತಕ ತರಲು,ಮಾನಪಡೆ ಅವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸುವ  ಮತ್ತು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ  ಕಾರ್ಯಾಗಾರ ಮತ್ತು  ಸ್ಪರ್ಧಾತ್ಮಕ ಪರೀಕ್ಷೆ  ಏರ್ಪಡಿಸಲಾಗುವುದು ಎಂದು ಹೇಳಿದರು.

ಡಾ.  ಮಹಮ್ಮದ್ ಅಜಗರ್ ಚುಲಬುಲ್ ಮಾಜಿ ಅಧ್ಯಕ್ಷರು ಕೂಡಾ , ಕಲಬುರಗಿ ಅವರು ಮಾತನಾಡುತ್ತಾ ಮಾನಪಡೆ ಅವರ ಜೊತೆ ಹಲವಾರು ಹೋರಾಟದಲ್ಲಿ ಜೊತೆಯಾಗಿದೇನೆ. ಅವರ ರಾಜಿ ರಹಿತ ಹೋರಾಟ ನನಗೆ ಸ್ಪೂರ್ತಿ ಯಾಗಿದೆ. CAA NRC ಹೋರಾಟದಲ್ಲಿ ಲಕ್ಷಾಂತರ ಜನರ ನಾಯಕತ್ವ ವಹಿಸಿ ಮೊಟ್ಟಮೊದಲ ಬಾರಿಗೆ ದೇಶವೇ ಕಲಬುರಗಿ ಕಡೆಗೆ ತಿರುಗಿ ನೋಡುವಂತೆ ಮಾಡಿತು. ಇದು ಅವರನ್ನು ಕಳೆದುಕೊಂಡು ಚಳವಳಿ ಬಲಹೀನವಾಗಿದೆ . ವೈಯಕ್ತಿಕ ವಾಗಿ ಒಬ್ಬ ಆದರ್ಶ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ‌ ಎಂದು ಹೇಳಿದರು.

ಚಂದು ಜಾಧವ ಕಾರ್ಮಿಕ ಮುಖಂಡರು , ನಾನು ಅವರ ಒಡನಾಡಿ ಕಾಲೇಜು ದಿನಗಳಿಂದ ಗೆಳಯನಾಗಿದೆ ಯಾವತ್ತೂ ಅವರು ವೈಯಕ್ತಿಕ ಲಾಭಕ್ಕಿಂತ ಜನರ ಸೇವೆ ಮುಖ್ಯ ಎಂದು ಭಾವಿಸಿದರು ಕುಟುಂಬ ಆರ್ಥಿಕ ವಾಗಿ ಕಷ್ಟದಲ್ಲಿ ಇದ್ದರೂ ಜನರಿಗಾಗಿ ಹೋರಾಟ ಅವರ ಧ್ಯೇಯವಾಗಿತ್ತು. ಅವರು ನಾನು ಕೂಡಿ ಬಾಲವಾಡಿ ಶಿಕ್ಷಕಿರ ಸಂಘ ಮತ್ತು ಅಂಗನವಾಡಿ ಹಾಗೂ ಪಂಚಾಯತ್ ನೌಕರರ ಸಂಘ ರಾಜ್ಯದಲ್ಲಿ ಪ್ರಥಮ ಬಾರಿಗೆ  ಕಟ್ಟಿದೇವೆ.  ಜನರ ಹಕ್ಕುಗಳಿಗಾಗಿ ಅವರ ಜೊತೆಗೆ   ಹಲವಾರು ಬಾರಿ  ಜೈಲು ವಾಸು ಅನುಭವಿಸಿದೇನೆ ‌. ಮಾನಪಡೆ ಅವರು ರಾಜ್ಯ ಮಟ್ಟದ ನಾಯಕರಾಗಲು ಅವರ ಗಟ್ಟಿಯಾದ ನಿಲವು ಮತ್ತು ಚಿಂಚನಸೂರ ಜಿಲ್ಲಾ ಪಂಚಾಯತ ಕ್ಷೇತ್ರದ ಜನರ ಬೆಂಬಲವೇ ಕಾರಣ ಎಂದು.

ಶಿವಾನಂದ ಕವಲಗಾ ಗ್ರಾಮ ಪಂಚಾಯತ್ ಮುಖಂಡರು ಮಾತನಾಡುತ್ತಾ  ಲಾಠಿ ಏಟು ತಿಂದಿದ್ದು ಮಾನಪಡೆ  ಸಾಹೆಬ್ರು ಆದರೆ ಅನ್ನ ತಿಂದಿದ್ದು ನಾವು ಎಂದು ಹೇಳಿದರು. ಸುಮಾರು 59 ,000 ಸಾವಿರ ಅಧಿಕ ಗ್ರಾಮ ಪಂಚಾಯತ್ ನೌಕರರಿಗೆ ದಾರಿ ದೀಪವಾಗಿದ್ದರು.

ಗ್ರಾಮ ಪಂಚಾಯತ್ ನೌಕರರಿಗೆ ಪಿತಾಮಹ ಆದ ಮಾನಪಡೆ  ಅವರು ಪ್ರಯತ್ನದಿಂದಾಗಿ  ನೌಕರರು ಬಡ್ತಿ ಪಡೆಯಲು  , ಕಾಲಕಾಲಕ್ಕೆ ವೇತನ ಹೆಚ್ಚಳವನ್ನು ಹಾಗೂ ಅನೇಕ ರೀತಿಯ ಕಾನೂನು ತರಲು ಸಾಧ್ಯವಾಯಿತು  ಹಾಗೂ  ತಮ್ಮ ಹೋರಾಟ ಮೂಲಕ ನೌಕರರಿಗೆ ಸವಲತ್ತುಗಳನ್ನು  ಒದಗಿಸಿಕೊಟ್ಟ ಧೀಮಂತ ಹೋರಾಟಗಾರ. ಸೂರ್ಯಕಾಂತ ನಿಂಬಾಳಕರ ಮಾಜಿ ಮಹಾ ನಗರ ಪಾಲಿಕೆ ಸದಸ್ಯರು ಅವರು ಸುಮಾರು 30, 000 ಪೌರ ಕಾರ್ಮಿಕರ ನೇಮಕಾತಿ ಮಾಡಿಸಿರುವ ಶ್ರೇಯ ಯಾರಿಗಾದರೂ ಸಲ್ಲಬೇಕೆಂದರೆ ಅದು ಮಾನಪಡೆ ಸಾಹೇಬ್ರರಿಗೆ , ಅಧಿಕಾರಿಕ್ಕಾಗಿ ಯಾವತ್ತು ಕೂಡ ಆಸೆಪಟ್ಟರಿಲಿಲ್ಲ , ಅತಿ ಜಟಿಲವಾದ ಕಾರ್ಯಗಳನ್ನು ತುಂಬಾ ಸರಳವಾಗಿ ಬಗೆಹರಿಸುತ್ತಿದ್ದರು ಎಂದು ಹೇಳಿದರು.

ಶಿವಪುತ್ರಪ್ಪ ಮೇಗಪ್ಪಗೋಳ ಗ್ರಾಮದ ಹಿರಿಯರು ಮಾತನಾಡುತ್ತಾ ತ್ರೇತಾಯುಗದಲ್ಲಿ ಯಾವ ರೀತಿ ಹರಿಶ್ಚಂದ್ರ ಇದ್ದನೋ , ಕಲಿಯುಗದಲ್ಲಿ ಹೋರಾಟ ರತ್ನ ಯಾರಾದರೂ ಇದ್ದರೆಂದರೆ ಅವರು ಮಾನಪಡೆ ಎಂದು ಹೇಳಿದರು.

ಸುರೇಶ ಲೇಂಗಟಿ ಅಧ್ಯಕ್ಷರು ಕಸಾಪ ಕಮಲಾಪುರ ಅವರು ಇಡಿ ರಾಜ್ಯ , ಜಿಲ್ಲೆ , ಗ್ರಾಮ ಎಲ್ಲರೂ ಕೂಡಿಕೊಂಡು ಮಾಡುವ ಪುಣ್ಯ ಸ್ಮರಣೆ, ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯ ಪುಣ್ಯ ಸ್ಮರಣೆ ಆಗದೇ , ಅದು ಒಬ್ಬ ಮಹಾತ್ಮನು ಪುಣ್ಯ ಸ್ಮರಣೆ ಆಗಿರುತ್ತದೆ ಎಂದು ಹೇಳಿದರು.

ವೆಂಕಬರಾವ ರೈತ ಮುಖಂಡರು ಜೇವರ್ಗಿ ಮಾತನಾಡುತ್ತಾ ಮಾನಪಡೆ ತೊಗರಿ ಮಂಡಳಿ ಸ್ಥಾಪನೆಗೆ ಶ್ರಮಿಸಿದರು , ಇಡಿ ದೇಶ ರಾಜ್ಯಕ್ಕಾಗಿ ಉಪಯೋಗವಾಗುವ ಹೋರಾಟಗಳನ್ನು ಮಾಡುತ್ತಿದ್ದರು ಎಂದು ಹೇಳಿದರು.

ಗುರುನಾಥ ರೆಡ್ಡಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಮಾತನಾಡುತ್ತಾ ಇಡಿ ರಾಜ್ಯದಲ್ಲಿ ಗ್ರಾಮ ಪಂಚಾಯತ್ ನೌಕರರ ಜೇಷ್ಠತಾ ಪಟ್ಟಿ ತಯಾರಾಗಿದ್ದು ಮಾನಪಡೆರಿಂದ ಹಾಗೂ ನೌಕರರ ಜೇಷ್ಠತಾ ಪಟ್ಟಿ ಮೊದಲು ಕಲಬುರಗಿ ಜಿಲ್ಲೆಯಲ್ಲಿ  ಅದರ ಶ್ರೇಯ ಮಾರುತಿ ಮಾನಪಡೆ ಸಾಹೇಬರಿಗೆ ಸಲ್ಲಬೇಕು ಎಂದು ಹೇಳಿದರು.

ವೆಂಕಟೇಶ ಬಕ್ಕಿ ಜಲ ಮಂಡಳಿ ಹೊರಗುತ್ತಿಗೆ ನೌಕರರ ಮುಖಂಡರು ಜಲ ಮಂಡಳಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಮಾಡಿಸಿದ ಶ್ರೇಯ ಮಾನಪಡೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರವೀಣಕುಮಾರ್ ಮುಚ್ಚಟ್ಟಿ, ಪ್ರಧಾನ ಕಾರ್ಯದರ್ಶಿ ಬಿಜೆಪಿ ಗ್ರಾಮೀಣ ಮಂಡಲ ಹಾಗೂ ವೀರೇಶ ಬಿರಾದಾರ   ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಹೆಚ್ಚು ಅಂಕ ಪಡೆದ  ಪದವಿ ವಿಭಾಗ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ತಲಾ ಮೂರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು ಮತ್ತು ಅಂಬಲಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆ ಶರಣಪ್ಪ ಹೊಸಮನಿ ವಹಿಸಿದ್ದರು. ವೇದಿಕೆ ಮೇಲೆ ಬಾಬುರಾವ ದಿಕ್ಸಂಗಿ, ಬಾಬುಹಿರಮಶೆಟ್ಟಿ, ಹಣಮಂತರಾಯ ಲಾಡೋತಿ ಅನಿಲ ಕೊಳ್ಳುರೆ , ಕಿರಣಕುಮಾರ ಬಣಗಾರ , ರಾಜಶೇಖರ ಮಾಚಿ, ಬಸವರಾಜ ಸರಡಗಿ, ಚನ್ನಬಸವ ಮಾಳಗೆ, ಬಸವರಾಜ ಪಾಟೀಲ ಹರಸೂರ ಶಾಂತಪ್ಪ ಪಾಟೀಲ ಸಣ್ಣೂರ, ಸೋಮಶೇಖರ ಸಿಂಗೆ ಸ್ವಾಗತಿಸಿದರು, ಬಂಡೆಪ್ಪ ಚಿಲಿ ನಿರೂಪಣೆ ಮಾಡಿದ್ದರು,ಮಲ್ಲಿನಾಥ ಮಾಸ್ಟರ್ ವಂದಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here