ಸುಲೇಪೇಟ: ಕಾಂತರ ಸಿನಿಮಾ ಕುರಿತು ಮಾತನಾಡುವ ವೇಳೆ ದೈವಾರಾಧನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಚಿಂತಕ ನಟ ಚೇತನ್ ಅಹಿಂಸಾ ಅವರ ವಿರುದ್ಧ ದೂರು ದಾಖಲಾಗಿರುವುದನೂ ಯುವ ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಖಂಡಿಸಿದ್ದಾರೆ.
ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ದೇಶದ ಸಂವಿಧಾನ ನೀಡಿದೆ. ಅದರೆ ನಟ ಚೇತನ ಯಾವುದೇ ಧರ್ಮ ಜಾತಿಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಯಾರ ಭಾವನೆಗೂ ನೋವುಂಟು ನಿಂದನೆ ಮಾಡಿರುವುದಿಲ್ಲ. ಅವರು ಕೇವಲ ಕಾಂತರ ಸಿನಿಮಾ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ, ಇದನ್ನೆ ಕೆಲವರು ತಪ್ಪು ಎಂದು ಭಾವಿಸಿ ಮನೆ ಮುಂದೆ ಪ್ರತಿಭಟನೆ ನಡೆಸಿ, ಮಸಿ ಬಳಿಯೋಕೆ ಪ್ರಯತ್ನಿಸಿರುವುದು ಸಮಂಜಸವಲ್ಲ. ನಟನ ವಿರುದ್ದ ದೂರು ದಾಖಲಾಗಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಚಿಂತಕರ ಮೇಲೆ ದೂರು ದಾಖಲಿಸುವುದು ಜೈಲಿಗೆ ಕಳಿಸುವುದು ದೇಶದಲ್ಲಿ ಪ್ರವೃತಿಯಾಗಿ ಬಿಟ್ಟಿದೆ. ಸಂವಿಧಾನ ವಿರೋಧಿ ಈ ನಡೆ ಸರ್ಕಾರವು ಕೊನೆಯಾಗುವಂತೆ ಮಾಡಬೇಕು. ಹೀಗೆ ಮುಂದುವರೆದ್ದರೆ ಏನೆ ಮಾತನಾಡಿದರು ಸೇರವಾಸ ಎಂಬತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.