ಬುಡಕಟ್ಟು ಕಲಾವಿದರಿಗೆ ಆರ್ಥಿಕ ಸೌಲಭ್ಯಗಳು ದೊರೆಯಲಿ

0
34

ಕಲಬುರಗಿ: ತಲ-ತಲಾಂತರಗಳಿಂದ ತಮ್ಮದೇ ಆದ ವೇಷ-ಭೂಷಣ, ಕಲೆ, ಸಂಸ್ಕøತಿ, ಪರಂಪರೆ, ವೃತ್ತ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಬುಡಕಟ್ಟು ಕಲಾವಿದರು ಆಧುನಿಕತೆಯ ಭರಾಟೆಗೆ ಸಿಲುಕಿ ಪ್ರಸ್ತುತವಾಗಿ ತುಂಬಾ ಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ವಾಸಿಸಲು ವಸತಿ ಸೌಲಭ್ಯ, ಕಲೆ ಉಳಿಸಿಕೊಂಡು ಹೋಗಬೇಕಾದರೆ ಜೀವನ ನಿರ್ವಹಣೆಗೆ ಮಾಶಾಸನ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಎಂದು ಕಜಾಪ ಜಿಲ್ಲಾಧ್ಯಕ್ಷ ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಹೊರಲವಯದ ಶಹಾಬಾದ್ ರಸ್ತೆಯ ಬುಡ್ಗ ಜಂಗಮ ಕಾಲನಿಯಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿಲಾಗಿದ್ದ ‘ವಿಶ್ವ ಬುಡಕಟ್ಟು ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟಿಸಿದ ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಬುಡಕಟ್ಟು ಕಲಾವಿದರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಕಜಾಪ ಕಾರ್ಯ ಶ್ಲಾಘನೀಯವಾಗಿದೆ. ಬುಡಕಟ್ಟು ಜನಾಂಗಕ್ಕೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಬಂಧಿತ ಅಧಿಕಾರಿಗೆ ಭೇಟಿ ಮಾಡಿ, ನಿಮಗೆ ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಬಿ.ಪಾಟೀಲ, ಬುಡಕಟ್ಟು ಜನಾಂಗ ಮೂಲತಃ ಕಾಡಿನಲ್ಲಿ ವಾಸಿಸುತ್ತಾ, ಮೌಂಸಹಾರಿಗಳಾಗಿ, ಗಿಡಮೂಲಿಕೆಗಳನ್ನು ಬಳಸುತ್ತಾ ಬದುಕಿದ್ದವರು. ಮುಂದೆ ಕಾಲಾನಂತರ ಜನರ ಜೊತೆಗೆ ವಾಸಿಸುತ್ತಾ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತ ಬದುಕು ಸಾಗಿಸಿದರು. ಪ್ರಸ್ತುತ ದಿವಸಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಕಲಾವಿದರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವದರಿಂದ ಅವರಲ್ಲಿರುವ ಪ್ರತಿಭೆ ಕಡಿಮೆಯಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಬುಡಕಟ್ಟು ಜನಾಂಗದ ಕಲೆ, ಸಾಹಿತ್ಯವನ್ನು ಉಳಿಸಿ, ಬೆಳೆಸಲು ಎಲ್ಲರ ಪ್ರೋತ್ಸಾಹ ಅವಶ್ಯಕವಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಕಜಾಪ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಇಬ್ರಾಹಿಂಪೂರ್, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಎಂ.ಹೋಳ್ಕರ್, ಬುಡ್ಗ ಜಂಗಮ ಕಾಲನಿಯ ಅಧ್ಯಕ್ಷ ಮರಲಿಂಗಪ್ಪ ಕೋಮಾರಿ, ಹಿರಿಯ ಬುಡಕಟ್ಟು ಕಲಾವಿದ ದೇವೇಂದ್ರಪ್ಪ ಎಸ್. ವೇದಿಕೆ ಮೇಲಿದ್ದರು.

ಬುಡಕಟ್ಟು ಮತ್ತು ಅಲೆಮಾರಿ ಕಲಾವಿದರಾದ ಗೋಪಾಲ್ ಬಿ.ಮುಗ್, ಬಸಪ್ಪ ಎಸ್.ಪೋಶ್, ಗುಳ್ಳಪ್ಪ ಬಿ.ಅಗಸ್ಥ್ಯ, ಶಿವರಾಜ ಎಸ್.ಶಿರವಂಟಿ, ದೇವಪ್ಪ ಎಸ್.ಕೋಮಾರಿ, ಮಹಾದೇವಿ ಎಚ್.ಕೋಮಾರಿ, ಬೋನಪ್ಪ ಎಚ್.ಕೋಮಾರಿ, ಬಸಲಿಂಗಪ್ಪ ಎಚ್.ಮೋತೆ, ಈಶ್ವರ ಸಿ.ಅಗಸ್ಥ್ಯ, ಸಾಯಮ್ಮ ವರ್ದಾನ್, ಈರಮ್ಮ ವರ್ದಾನ್, ದೇವಮ್ಮ ಅಗಸ್ಥ್ಯ, ಯಲ್ಲಮ್ಮ ಶಿರವಾಟಿ, ಯಲ್ಲಮ್ಮ ರುದ್ರಾಕ್ಷಿ, ಯಲ್ಲಮ್ಮ ವರ್ದಾನ್, ಜಗಮ್ಮ ಕೋಮಾರಿ, ಲಕ್ಷ್ಮೀ ಶಿರವಾಟಿ, ಬಸಮ್ಮ ಕೋಮಾರಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು. ಕಲಾವಿದರಾದ ಭೀಮಪ್ಪ ಶಿರವಾಟಿ, ಗಜಲಪ್ಪ ಡೊಕ್ಕಾ, ಶರಣಪ್ಪ ಶಿರವಾಟಿ, ಹಣಮಂತ ಶಿರವಾಟಿ, ಶಿವಣ್ಣ, ಮಹಾದೇವಿ, ಬಸಪ್ಪ ಡೊಕ್ಕಾ, ಹಣಮಂತ ಕೋಮಾರಿ ಈರಣ್ಣ ಕೋಮಾರಿ ಸೇರಿದಂತೆ ಕಾಲನಿಯ ನೂರಾರು ನಾಗರಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here