ಬೆಂಗಳೂರು: ಮಕ್ಕಳಿಗೆ ಇತಿಹಾಸ ತಿಳಿಸಬೇಕು, ಇತಿಹಾಸ ತಿಳಿದು ಇತಿಹಾಸ ನಿರ್ಮಿಸಬೇಕೆಂಬ ಮಹಾತ್ವಕಾಂಕ್ಷೆಯಿಂದ ಪೊಷಕರು ಕಷ್ಟಪಟ್ಟು ಶಾಲೆ ಎಂಬ ವಿದ್ಯಾಮಂದಿರಕ್ಕೆ ಕಳುಹಿಸುತ್ತಾರೆ. ಆದರೆ ಇತ್ತೀಚಿಗೆ ಇತಿಹಾಸ ತಿರುಚಿ ಮರೆಮಾಚಲಾಗುತ್ತಿದೆ.
2022ನೇ ಸಾಲಿನಲ್ಲಿ ಶಾಲೆಯ ಇಂಗ್ಲೀಷ್ ಮಾಧ್ಯಮದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಸರಕಾರ ಪಠ್ಯದಲ್ಲಿ ಬದಲಾವಣೆ ಮಾಡಿದೆ. ಹೋರಾಟಗಾರರ ಶಹಿದ್ ಅಶ್ಫಾಕುಲ್ಲಾ ಖಾನ ಹೆಸರು ನೂತನ ಪಠ್ಯದಿಂದ ತೆಗೆದು ಹಾಕಿದೆ. ಸ್ವಾತಂತ್ರಗೊಸ್ಕರ ತನ್ನ ಬಲಿದಾನದ ಮೂಲಕ ದೇಶದ ಜನರ ಹಕ್ಕುಗಳ ರಕ್ಷಣೆಗಾಗಿ ವೀರ ಮರಣ ಹೊಂದಿರುವ ಅಶ್ಫಾಕುಲ್ಲಾ ಖಾನ ಪಠ್ಯ ಸರಕಾರದ ಕೆಂಗಣಿಗೆ ಗುರಿ ಏಕಾಯಿತೇಂಬ? ಎಂಬ ಪ್ರಶ್ನೆ ಇದೀಗಾ ಸರಕಾರದ ಮುಂದಿದೆ.
ನಮ್ಮಗೆ ತಿಳಿದುರುವಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರಿಗೂ ತಲೆ ಬಾಗದೆ ಗಟ್ಟಿತನದಿಂದ ಬ್ರಿಟಿಷ್ ಸಾಮ್ರಾಜದ ವಿರುದ್ಧ ಜೀವದ ಹಂಗು ಇಲ್ಲದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಸತ್ಯ ಕಥೆಗಳು ಯುವಪಿಳಿಗೆ ಮಾದರಿ. ಈ ಹಿಂದೇ ಇದೇ ತರಗತಿ ಮಕ್ಕಳಿಗೆ ಶಹಿದ್ ಅಶ್ಫಾಕುಲ್ಲಾ ಖಾನ ಪಠ್ಯವನ್ನು ಶಿಕ್ಷಕರು ಹೆಮ್ಮೆಯಿಂದ ಮಕ್ಕಳಿಗೆ ಹೇಳುತ್ತಿದರು. ಅವರ ಕ್ರಾಂತಿ ಕಾರಿ ಹೋರಾಟಗಳು ಮಕ್ಕಳಿಗೆ ಪ್ರೇರಣೆ ಮೂಡಿಸುತಿತ್ತು. ಆದರೆ ಪಠ್ಯದಿಂದ ಹೆಸರು ತೆಗೆದು ಹಾಕಿದು ನಿರಾಶೆ ಮೂಡಿದೆ ಎಂದು ಹೆಸರು ಹೇಳಲು ಇಕ್ಷೀಸಿದ ಶಿಕ್ಷಕ ಕಳವಳ ವ್ಯಕ್ತಪಡಿಸಿದ್ದಾರೆ.
ನೂತನ ಪಠ್ಯದಲ್ಲಿ ಮಹಾತ್ಮ ಗಾಂಧಿಜಿ ಅವರ ಪಠ್ಯವನ್ನು ಮೊಟಕುಗೊಳ್ಳಿಸಿ ಸಂಕ್ಷೀಪ್ತಗೊಳಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ತ್ಯಾಗ ಬಲಿದಾನವನ್ನು ಯಾವುದೇ ಪುರಾವೆ ಇಲ್ಲದೆ ಮೊಟಕೊಳ್ಳಿಸುವುದು ತೆಗೆದು ಹಾಕುವುದು ಸಹಿಸಲು ಹೇಗೆ ಸಾಧ್ಯ.?
ರಾಜಕೀಯಕ್ಕಾಗಿ ಇತಿಹಾಸ ತಿರುಚಿ ದೇಶವನ್ನು ಅಂಧಕಾರಕ್ಕೆ ದೊಡುವ ಹುನ್ನಾರ ನಡೆಸಲಾಗುತ್ತಿದೆ. ಪ್ರಜ್ಞಾವಂತರು ಮಕ್ಕಳಿಗೆ ಮತ್ತು ಜನರಿಗೆ ಇತಿಹಾಸ ತಿಳಿಸುವ ಕೆಲಸ ಮಾಡಬೇಕಿದೆ.