ಜ್ಞಾನಸಾಗರ ಅಭಿನಂದನ ಗ್ರಂಥ ಜನಾರ್ಪಣೆ 30ರಂದು

0
14

ಕಲಬುರಗಿ: ಕರ್ನಾಟಕ ಪೀಪಲ್ಸ್ ಏಜುಕೇಷನ್ ಸೊಸೈಟಿಯ ಡಾ. ಅಂಬೇಡ್ಕರ್ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಐ.ಎಸ್. ವಿದ್ಯಾಸಾಗರ ಅವರ ಜ್ಞಾನಸಾಗರ ಅಭಿನಂದನ ಗ್ರಂಥ ಜನಾರ್ಪಣೆ ಸಮಾರಂಭವನ್ನು ದಿ. 30 ರಂದು ಬೆಳಗ್ಗೆ 10: 30 ಗಂಟೆಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಅಭಿನಂದನ ಸಮಿತಿ ಅಧ್ಯಕ್ಷ ಬಿ.ಆರ್. ಬುದ್ಧಾ ತಿಳಿಸಿದರು.

50ಕ್ಕೂ ಹೆಚ್ಚು ವಿವಿಧ ಪುಸ್ತಕಗಳನ್ನು ಹೊರತಂದಿದಲ್ಲದೆ, 25 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮಾರ್ಗದರ್ಶನ ಮಾಡಿದವರು. ಈ ನಿಟ್ಟಿನಲ್ಲಿ ಅವರ ವಯೋನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಅವರ ಬದುಕು-ಬರಹವನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದು ನಾಡಿಗೆ ಪರಿಚಯಿಸುವ ಕೆಲಸ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಪೂಜ್ಯ ಭಂತೆಗಳಾದ ವರಜ್ಯೋತಿ, ಸಂಘಾನಂದ, ಬೀದರನ ಬಸವ ಮಹಾಮನೆಯ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರ, ಶ್ರೀಶೈಲ್‍ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮಳಖೇಡದ ಸಜ್ಜಾನ ನಶೀನ ದರ್ಗಾದ ಪೂಜ್ಯ ಸೈಯದ್ ಶಾಹ ಮುಸ್ತಾಫ್ ಖಾದ್ರಿ, ಕ್ರೈಸ್ತ್ ಧರ್ಮಾಧಿಕಾರಿ ರಾಬರ್ಟ್ ಮಿರಿಂಡಾ ಸಾನಿಧ್ಯದಲ್ಲಿ ಕೆಪಿಇ ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣ ಉದ್ಘಾಟಿಸುವರು.

ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ ಅಧ್ಯಕ್ಷತೆವಹಿಸುವರು. ರಾಜ್ಯಸಭೆ ಸದಸ್ಯ ಡಾ. ಎಲ್. ಹನುಮಂತಯ್ಯ ಅಭಿನಂದನ ಗ್ರಂಥ ಬಿಡುಗಡೆಗೊಳಿಸುವರು. ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೇರೆ ಸೋಮಶೇಖರ ಗ್ರಂಥ ಪರಿಚಯಿಸಲಿದ್ದಾರೆ. ಕೆಪಿಸಿ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ, ಹಿರಿಯ ದಲಿತ ಮುಖಂಡ ಡಾ. ವಿಠಲ್ ದೊಡ್ಡಮನಿ, ದಸಂಸ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ, ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ನಿರ್ದೇಶಕ ಪ್ರೊ. ಎಚ್.ಟಿ. ಪೋತೆ, ಖ್ಯಾತ ಸಾಹಿತಿ ಪ್ರೊ. ಆರ್. ಕೆ. ಹುಡಗಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.  ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ವಿವರಿಸಿದರು.  ಪ್ರಮುಖರಾದ ಸುರೇಶ ಬಡಿಗೇರ್, ಡಾ. ಗಾಂಧೀಜಿ ಸಿ. ಮೋಳಕೆರೆ, ಡಾ. ಹರ್ಷವರ್ಧನ ಬಿ, ಕೆ.ಎಸ್. ಬಂಧು ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here