ರಕ್ತ ಕಾಯಿಲೆಯಿಂದ ಬಳಲುವ ಮಕ್ಕಳ ಚಿಕಿತ್ಸೆ ವೆಚ್ಚ ಸರಕಾರ ಭರಿಸಬೇಕು: ಕ್ರಾಂತಿ

0
21

ಸುರಪುರ: ತಾಲೂಕಿನ ವಾಗಣಗೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಒಟ್ಟು 10 ಮಕ್ಕಳಲ್ಲಿ ರಕ್ತ ಕಾಯಿಲೆ ಕಾಣಿಸಿಕೊಂಡಿದ್ದು,ಈ ಮಕ್ಕಳ ಚಿಕಿತ್ಸೆಗೆ ಅಪಾರ ವೆಚ್ಚ ತಗುಲಲಿದ್ದು ಸರಕಾರ ಚಿಕಿತ್ಸಾ ವೆಚ್ಚ ಭರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿ ಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.

ನಗರದ ತಹಸೀಲ್ದಾರ್ ಕಚೇರಿ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಬಡ ಕುಟುಂಬದ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು ಪ್ರತಿ ಮಗುವಿನ ಚಿಕಿತ್ಸೆಗೆ ಸುಮಾರು 30 ರಿಂದ 40 ಲಕ್ಷ ಹಣ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ.ಆದ್ದರಿಂದ ಬಡವರಿಗೆ ಅಷ್ಟೊಂದು ದುಬಾರಿ ಹಣ ವ್ಯಯಿಸಲು ಸಾಧ್ಯವಾಗುವುದಿಲ್ಲ,ಆದ್ದರಿಂದ ಸರಕಾರ ಕೂಡಲೇ ಈ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಿ ಮಕ್ಕಳ ಜೀವ ಉಳಿಸಿಕೊಡುವಂತೆ ಸರಕಾರಕ್ಕೆ ಆಗ್ರಹಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸಂಘಟನೆಯ ಮುಖಂಡ ಚಂದ್ರಶೇಖರ ಹಸನಾಪುರ ಸೇರಿದಂತೆ ಇತರರು ಮಾತನಾಡಿ ಸರಕಾರಕ್ಕೆ ಒತ್ತಾಯಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಜಿಲ್ಲಾ ಸಂಚಾಲಕ ಡಾ:ಮಲ್ಲಿಕಾರ್ಜುನ ಆಶನಾಳ,ರಾಜ್ಯ ಮುಖಂಡ ರವಿಚಂದ್ರ ಬೊಮ್ಮನಹಳ್ಳಿ,ಅಜೀಜ ಸಾನ್ ಐಕೂರ,ಮಲ್ಲಿಕಾರ್ಜುನ ಕುರಕುಂದಿ,ಮಾನಪ್ಪ ಬಿಜಾಸಪುರ,ಮರೆಪ್ಪ ಹಾಲಗೇರಾ,ಶಾಂತಪ್ಪ ಕಟ್ಟಿಮನಿ,ಮರಿಲಿಂಗಪ್ಪ ನಾಟೇಕಾರ್,ನಿಂಗಪ್ಪ ಕಟಗಿ,ದೇವಪ್ಪ ಗಡ್ಡೇರ,ಗುರುರಾಜ ಗುಡ್ಡೇರ,ಮಲ್ಲಿಕಾರ್ಜುನ ಗುಡ್ಡೇರ,ಭೀಮನಗೌಡ ಸೂಗೂರು,ಶರಣಪ್ಪ ಗಾಯಕವಾಡ,ಸಂಗಪ್ಪ ಚಿಂಚೋಳಿ,ಬನ್ನಪ್ಪ ಕೋನ್ಹಾಳ,ಆನಂದ ಹೆಮನೂರ,ಕಾಳಿಂಗಪ್ಪ ಕಲ್ಲದೇವನಹಳ್ಳಿ,ಖಾಜಾಹುಸೇನ ಗುಡಗುಂಟಿ,ಹುಲಗಪ್ಪ ಜಾಂಗೀರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here