ಹಕ್ಕುಗಳನ್ನ ಕೊಟ್ಟದ್ದು ಧರ್ಮ ಗ್ರಂಥಗಳಲ್ಲ ಸಂವಿಧಾನ

0
85

ಕಲಬುರಗಿ: ಹಕ್ಕುಗಳನ್ನ ಕೊಟ್ಟದ್ದು ಧರ್ಮಗ್ರಂಥಗಳಲ್ಲ ಸಂವಿಧಾನ, ಈ ಸಂವಿಧಾನ ಇವತ್ತು ಸಂದಿಗ್ಧ ಪರಿಸ್ಥಿಯಲ್ಲಿ ಸಿಲುಕಿದೆ ಇಂತಹ ಸನ್ನಿವೇಶದಲ್ಲಿ ಸಂವಿಧಾನದ ಬಗ್ಗೆ ಮಾತನಾಡಲೇಬೇಕಾದ ತುರ್ತು ಇದೆ ಎಂದು ಅಪ್ಪಗೆರೆ ಸೋಮಶೇಖರ್ ಅವರು ಅಭಿಪ್ರಾಯಪಟ್ಟರು.

ನಗರದ ಶಿವಶರಣ ಹರಳಯ್ಯ ಸಾಂಸ್ಕøತಿಕ ಭವನದಲ್ಲಿ ಸಂವಾದ ಮತ್ತು ಯುವ ಮುನ್ನಡೆ ಕರ್ನಾಟಕ ತಂಡ ಆಯೋಜಿಸಿದ್ದ ಸಂವಿಧಾನೋತ್ಸವ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡುತ್ತ, ರಾಜಕೀಯವಾಗಿ ಯುವ ಸಮುದಾಯಗಳ ಮೆದುಳನ್ನ ಜಾತಿ ಮತ್ತು ಧರ್ಮದ ಹೆಸರಲ್ಲಿ ಕದಿಯಲಾಗುತ್ತಿದೆ, ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ವಿಷ ಉಣಿಸಲಾಗುತ್ತಿದೆ. ಹೀಗಾಗಿ ಸಂವಿಧಾನವನ್ನ ಕಾಪಾಡುವುದು ಯುವಜನರ ಬಹುದೊಡ್ಡ ಜವಾಬ್ದಾರಿ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.

Contact Your\'s Advertisement; 9902492681

ಮೀಸಲಾತಿಯನ್ನ ಎಲ್ಲಾ ಜಾತಿ, ಧರ್ಮದವರು ಅನುಭವಿಸುತ್ತದ್ದಾರೆ ಆದರೆ ಬೆಟ್ಟುಮಾಡಿ ತೋರಿಸುವುದು ದಲಿತರನ್ನ ಮಾತ್ರ. ಸಂವಿಧಾನವನ್ನ ಯುವಜನರಿಗೆ ತಲುಪಿಸುವಲ್ಲಿ ಸರ್ಕಾರಗಳು ಸೋಲುತ್ತಾ ಬಂದಿವೆ. ಹೀಗಾಗಿ ಭಾರತದ ಪರಿಸ್ಥಿತಿ ಅಸಮಾನತೆಯ ಸ್ಥಿತಿಗೆ ತಲುಪಿದೆ ಎಂದು ಸೋಮಶೇಖರ್ ಅವರು ಹೇಳಿದರು.

ಸಂವಿಧಾನ ಇರುವ ಕಾರಣದಿಂದಲೇ ನಾವು ಇಲ್ಲಿ ಉಳಿದಿದ್ದೇವೆ. ಇಲ್ಲವಾದರೆ ನಮಗಿಲ್ಲಿ ಬದುಕಿಲ್ಲ, ಟ್ರಾನ್ಸ್ ಜೆಂಡರ್ ಎಂದರೆ ಅಪರಾಧಿಗಳು ಎಂಬಂತೆ ನೋಡಲಾಗುತ್ತೆ, ನಮಗೆ ಉದ್ಯೋಗ ಕೊಡಲ್ಲ, ಬದುಕುವುದಕ್ಕೆ ಬಾಡಿಗೆ ಮನೆ ಕೊಡುವುದಕ್ಕೂ ಕೂಡ ಹಿಂಜರಿಯುತ್ತಾರೆ. ಎಂದು ಕೆ.ಎಸ್.ಎಮ್.ಎಸ್ ಪ್ರತಿನಿಧಿ ಬೀರಲಿಂಗ ಅವರು ಬೇಸರ ವ್ಯಕ್ತಪಡಿಸಿದರು.

ಹಿಂದೆ ಇದ್ದ ಮಹಿಳಾ ಸ್ಥಿತಿಗತಿಗೂ ಸಂವಿಧಾನ ಬಂದ ನಂತರ ಇರುವ ಮಹಿಳಾ ಸ್ಥಿತಿಗತಿಗೂ ಬಹಳ ವ್ಯತ್ಯಾಸವಿದೆ. ಯಾವ ಧರ್ಮಗ್ರಂಥಗಳು ಮಹಿಳೆಗೆ ಅವಕಾಶಗಳನ್ನ ನೀಡಲಿಲ್ಲ ಅದನ್ನ ಕೊಟ್ಟದ್ದು ಸಂವಿಧಾನ ಮಾತ್ರ. ಈ ಕಾರಣಕ್ಕಾಗಿ ಸಂವಿಧಾನದ ಪರ ನಾವು ಧ್ವನಿಸಬೇಕಿದೆ ಎಂದು ಅಶ್ವಿನಿ ಮದನಕರ್ ಅವರು ಯುವಜನತೆಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಯುವಜನ ಕಾರ್ಯಕರ್ತರಾದ ನಾಗೇಶ್ ಹರಳಯ್ಯ ಹಾಗೂ ಯುವ ಮುನ್ನಡೆ ತಂಡ ಕರ್ನಾಟಕದ ಮುಂದಾಳುಗಳಾದ ಪೂಜಾ ಮತ್ತು ಕಾಶಿನಾಥ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here