ವಕ್ಫ್ ಆಸ್ತಿ ಅನಧಿಕೃತ ಒತ್ತುವರಿ | 7.14 ಎಕರೆ 14 ಪ್ಲಾಟ್ ಒತ್ತುವರಿ ತೆರವು

0
77

ಕಲಬುರಗಿ: ತಾಲೂಕಿನ ಭೀಮಳ್ಳಿ ಮತ್ತು ಕೋಟನೂರ(ಡಿ) ಗ್ರಾಮದಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿರುವ ಕ್ರಮವಾಗಿ 7 ಎಕರೆ 14 ಗುಂಟೆ ಜಮೀನು ಮತ್ತು 14 ಪ್ಲಾಟ್‍ಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ವಕ್ಫ ಅಧಿಕಾರಿ ಹಜರತ್ ಅಲಿ ತಿಳಿಸಿದ್ದಾರೆ.

ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ತಾಕಿಯಾ(ಸುನ್ನಿ) ಅಧಿಸೂಚಿತ ವಕ್ಫ್ ಸಂಸ್ಥೆಗೆ ಸೇರಿದ ಗ್ರಾಮದ ಸರ್ವೆ ನಂ. 142ರ ವಿಸ್ತೀರ್ಣ 7 ಎಕರೆ 14 ಗುಂಟೆ ಜಮೀನು ಅನಧಿಕೃತವಾಗಿ ಪರಭಾರೆಯಾಗಿದ್ದು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಕಲಬುರಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಅಕ್ಟೋಬರ್ 27 ರಂದು ಒತ್ತುವರಿ ತೆರವುಗೊಳಿಸಿ ಸದರಿ ಆಸ್ತಿಯನ್ನು ವಕ್ಫ್ ಸಂಸ್ಥೆಯ ಮುತ್ತವಲ್ಲಿಯಾದ ಫಿದಾ ಹುಸೇನಿ ಅವರಿಗೆ ಹಸ್ತಾಂತರಿಸಲಾಗಿದೆ.

Contact Your\'s Advertisement; 9902492681

ಅದೇ ರೀತಿ ತಾಲೂಕಿನ ಕೋಟನೂರ(ಡಿ) ಗ್ರಾಮದಲ್ಲಿರುವ ಖಬ್ರಸ್ತಾನ (ಸುನ್ನಿ) ಜಾಗದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿರುವ 14 ಜನ ಒತ್ತುವರಿದಾರರ ವಿರುದ್ಧ ವಕ್ಫ್ ಕಾಯ್ದೆ-1995ರ ಕಲಂ 54ರ ಅಡಿಯಲ್ಲಿ ಪ್ರಕರಣ ಇತ್ಯರ್ಥವಾದ ಹಿನ್ನೆಲೆಯಲ್ಲಿ ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರ ಆದೇಶದಂತೆ ಕಳೆದ ಅ.28 ರಂದು ಅನಧಿಕೃತ ಒತ್ತುವರಿಯಾದ 14 ಪ್ಲಾಟ್‍ಗಳನ್ನು ತೆರವುಗೊಳಿಸಿ ಸದರಿ ವಕ್ಫ್ ಆಸ್ತಿಯನ್ನು ವಕ್ಫ್ ಸಂಸ್ಥೆಯ ಸಮಿತಿಗೆ ಹಸ್ತಾಂತರಿಸಲಾಯಿತು.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರಿ, ಜಿಲ್ಲಾ ವಕ್ಫ್ ಅಧಿಕಾರಿ ಹಜರತ್ ಅಲಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here