ಕಲಬುರಗಿ: ಕಲಬುರಗಿಯಲ್ಲಿ ಭಾನುವಾರ ಬೃಹತ್ ಒಬಿಸಿ ವಿರಾಟ್ ಸಮಾವೇಶವನ್ನ ಜೋತಿ ಬೆಳಗಿಸುವ ಮೂಲಕ ಮಧ್ಯಪ್ರದೇಶದ ಸಿಎಂ ಶಿವರಾಜ್ಸಿಂಗ್ ಚೌವ್ಹಾಣ್ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.
ಹಿಂದುಳಿದ ವರ್ಗಗಳು ನಮ್ಮ ಜೇಬಿನಲ್ಲಿವೆ ಅಂತಾ ಕಾಂಗ್ರೆಸ್ನವರು ಹೇಳುತ್ತಾರೆ. ಆದರೆ ಹಾಗೇ ಹೇಳುವವರು ಕಲಬುರಗಿ ಒಬಿಸಿ ಸಮಾವೇಶಕ್ಕೆ ಬಂದು ನೋಡಿ ಎಂದು ಸಮಾವೇಶ ಉದ್ಘಾಟಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ತಾಕತ್ತಿದ್ದರೆ ಧಮ್ ಇದ್ರೆ ನಮ್ಮ ವಿಜಯ ಪತಾಕೆಯನ್ನ ತಡೆಯಿರಿ ಅಂತಾ ಕಾಂಗ್ರೆಸ್ಗೆ ಸಿಎಂ ಬೊಮ್ಮಾಯಿ ಸವಾಲು ಹಾಕಿದರು.
ಇನ್ನೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ದಾರಿಯಲ್ಲಿ ಸರ್ಕಾರ ನಡೆಯುತ್ತಿದೆ. ತಳವಾರ್/ಪರಿವಾರ ಸಮುದಾಯಗಳನ್ನ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ನಾನು ಕಲಬುರಗಿಗೆ ಖಾಲಿ ಕೈನಿಂದ ಬಂದಿಲ್ಲ. ಬದಲಿಗೆ ತಳವಾರ್ ಮತ್ತು ಪರಿವಾರ ಸಮುದಾಯವನ್ನ ಎಸ್ಟಿ ಪಟ್ಟಿಗೆ ಸೇರಿಸಿದ ಆದೇಶ ಪ್ರತಿ ತಂದಿದ್ದೆನೆ ಅಂತಾ ಸಮಾವೇಶದಲ್ಲಿ ಆದೇಶ ಪ್ರತಿ ಪ್ರದರ್ಶಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌವ್ಹಾಣ್, ಸಮಾವೇಶದಲ್ಲಿ ಇಷ್ಟೊಂದು ಜನರನ್ನ ನೋಡುತ್ತಿದ್ದರೆ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು. ಕಲಬುರಗಿ ನನ್ನಗೆ ತುಂಬಾ ಅದೃಷ್ಟವಾಗಿದೆ ಹೇಳಿದ ಸಿಎಂ ಚೌವ್ಹಾಣ್, ನಾನು ಚಿಂಚೋಳಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಿಸಿದ್ದಕ್ಕೆ ನಾನು ಮಧ್ಯಪ್ರದೇಶದಲ್ಲಿ ಮೂರನೇ ಬಾರಿ ಸಿಎಂ ಆಗಿದ್ದೆನೆ ಎಂದರು.
ಇನ್ನೂ 1947 ರಲ್ಲಿ ಭಾರತವನ್ನ ತುಂಡು ಮಾಡಿದ್ದ ಇದೇ ಕಾಂಗ್ರೆಸ್ ಇಂದು ಭಾರತ್ ಜೋಡೊ ಯಾತ್ರೆ ಮಾಡುತ್ತಿದೆ ಅಂತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಬಕ್ರಿದ್ ನಲ್ಲಿ ಒಳಿದರೆ ಮೊಹರಂ ನಲ್ಲಿ ಕುಡಿಯೂವ ಬಗ್ಗೆ ಡೈಲಾಗ್ ಹೊಡೆಯುತ್ತಾರೆ. ಈ ಮೂಲಕ ಖರ್ಗೆಯವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿ ಹರಕರೆಯ ಕುರಿ ಮಾಡಲಾಗಿದೆ ಅಂತಾ ಚೌವ್ಹಾಣ್ ಹೇಳಿದರು.
ಇನ್ನೂ ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಮ್ಮ ಸರ್ಕಾರ ಅನೇಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದು, 70 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ನೀಡಿದೆ ಅಂತಾ ಪ್ರಶ್ನಿಸಿದರು.
ಇನ್ನೂ ಸಮಾವೇಶ ಆಗಮಿಸಿದ್ದ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಗೋದಿ ಹುಗ್ಗಿ, ಅನ್ನ ಸಾಂಬಾರ್ ಭಜಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ ಕೇಸರಿ ಬ್ರೀಗೆಡ್ ಹಿಂದುಳಿದ ವರ್ಗಗಳ ಮತ ಸೆಳೆಯಲು ಕಲ್ಯಾಣ ಕರ್ನಾಟಕ ಭಾಗದಿಂದ ಪಾಂಚಜನ್ಯ ಮೊಳಗಿಸಿದ್ದು, ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೊದು ಕಾದು ನೋಡಬೇಕು.