ಕಲಬುರಗಿ: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಇಂದುಮತಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಮನಸ್ವಿನಿ ವಿಶೇಷ ಮಕ್ಕಳ ಶಾಲೆಯಲ್ಲಿಯೂ ಕೋಟಿ ಕಂಠ ಗಾಯನ ಅಂಗವಾಗಿ “ನನ್ನ ನಾಡು ನನ್ನ ಹಾಡು” ಕನ್ನಡ ಗೀತೆಗಳು ಮೊಳಗಿದವು.
ಟ್ರಸ್ಟ್ ಅಧ್ಯಕ್ಷ ರಮೇಶ ಹತ್ತಿ, ಶಾಲೆ ಪ್ರಾಂಶುಪಾಲರಾದ ಆಶಾ ನಿಪ್ಪಾಣಿ ಸೇರಿದಂತೆ ಸಿಬ್ಬಂದಿಗಳು ನಾಡಿನ ಹಿರಿಮೆ ಸಾರುವ ಆರು ಕನ್ನಡ ಗೀತೆಯನ್ನು ಸಾಮೂಹಿಕವಾಗಿ ಗಾಯನ ಮಾಡಿದರು. ವಿಶೇಷ ಚೇತನ ಮಕ್ಕಳು ಈ ಸಂಭ್ರಮಕ್ಕೆ ಸಾಕ್ಷಿಯಾದರು.