ಕಲಬುರಗಿ : ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಕಲಬುರಗಿ, ಬೀದರ, ಯಾದಗಿರ ಮೂರು ಜಿಲ್ಲೆಗಳ ಎಸ್.ಟಿ. ಬೇಡಿಕೆಗೆ ಒತ್ತಾಯಿಸಿ ಶ್ರೀ ಸಿದ್ಧಾರಾಮನಂದ ಪೂರಿ ಮಹಾಸ್ವಾಮಿಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತ್ರತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರಿಗೆ ನಗರದಲ್ಲಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವಿಕರಿಸಿ ಮಾತನಾಡಿ ಸಿಎಂ ನಿಮ್ಮ ಬೇಡಿಕೆಯನ್ನು 1.ತಿಂಗಳ ವರೆಗೆ ಈಡೇರಿಸಲು ಕಾಲಾವಕಾಶ ನೀಡಬೇಕೆಂದು ಹೇಳಿದರು. ಹಾಗೂ ಧರಣಿ ಸತ್ಯಾಗ್ರಹ ಕೇಳಿಕೊಂಡ ಹಿನ್ನಲೆಯಲ್ಲಿ ತಾತಕಾಲಿಕವಾಗಿ ಹಿಂಪಡೆಯಬೇಕೆಂದರು. ಸರ್ಕಾರದ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವದೆಂದು ಪೂಜ್ಯ ಶ್ರೀಗಳು ಹಾಗೂ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ವಿಶ್ವನಾಥ ನಿಲಹಳ್ಳಿ, ಮಲ್ಲಿಕಾರ್ಜುನ ಮುಡಬೂಳ ಟೆಂಗಳಿ, ಸಾಯಬಣ್ಣ ಪೂಜಾರಿ ಮಲ್ಲಾಬಾದ, ಭಗವಂತರಾಯ ಪೂಜಾರಿ, ಗಣಪತಿ ಮಿಣಜಗಿ, ಡಾ.ಬಾಬು ಪೂಜಾರಿ, ರವಿಗೋಂಡ ಕಟ್ಟಿಮನಿ, ತಿಪ್ಪಣ್ಣ ಬಳಬಟ್ಟಿ, ದೇವಿಂದ್ರಪ್ಪ ನಾಯಿಕೋಡಿ, ಮಲ್ಲು ದಂಡಿನ್ ಸುರಪುರ, ತಿಪ್ಪಣ್ಣ ವಗ್ಗೆ ರಾವೂರ, ಗಿರೆಪ್ಪ ಕಟ್ಟಮನಿ, ವೈಜನಾಥ ಸೇರಿದಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಪಧಾಧಿಕಾರಿಗಳು ಇದ್ದರು.