Tuesday, July 16, 2024
ಮನೆಬಿಸಿ ಬಿಸಿ ಸುದ್ದಿನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ

ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ

ಕಲಬುರ್ಗಿ: ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಸಮಿತಿ ವತಿಯಿಂದ. ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ದೇಶದ ಜನತೆ ಎದುರಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಯುವಜನತೆಯ ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮಾನ್ಯ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.

ಇಂದು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ, ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗವಾಗಿದೆ. ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಚಿಂತಾಜನಕವಾಗಿದೆ. ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ.

ಅಕ್ಸ್ ಫರ್ಡ್ ಬಡತನ ಮತ್ತು ಅಭಿವೃದ್ಧಿ ಉಪಕ್ರಮ (OPHI) ಮತ್ತು ಜಾಗತಿಕ ಬಹು ಆಯಾಮದ ಬಡತನ ಸೂಚoಕ್ಯ (UNDP) 2021ರ ವರದಿಯ ಪ್ರಕಾರ ಸುಮಾರು 22.5% ಭಾರತೀಯರು ಅತ್ಯಂತ ಬಡವರಾಗಿದ್ದಾರೆ. ನಿತ್ಯ ಬದುಕಿನ ಖರ್ಚಿಗೆ 160 ರೂಪಾಯಿಗೂ ಕಷ್ಟ ಪಡುತ್ತಿದ್ದಾರೆ.

ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗದೇ ಯುವಕರಲ್ಲಿ ಆತ್ಮಹತ್ಯೆಗಳ ಸಂಖ್ಯೆಯೂ ಕಳೆದ ಎರಡು ವರುಷದಲ್ಲಿ 24% ಹೆಚ್ಚಳವಾಗಿದೆ. 2017 ರಲ್ಲಿ 6% ಇದ್ದ ನಿರುದ್ಯೋಗ ದರ ಜನವರಿ ಯಿಂದ ಮಾರ್ಚ್ 2022 ಮಧ್ಯೆ 8.2% ಏರಿದೆ. CMIE ವರದಿಯ ಪ್ರಕಾರ ಡಿಸೆಂಬರ್ 2021 ರಲ್ಲಿ ನಿರುದ್ಯೋಗಿಗಳ ಸಂಖ್ಯೆ 53 ದಶಲಕ್ಷ ವಾಗಿತ್ತು.

ಜನವರಿ-ಏಪ್ರಿಲ್ CMIE ವರದಿಯ ಪ್ರಕಾರ 20-24 ವಯಸ್ಸಿನ ನಿರುದ್ಯೋಗಿಗಳ ಸಂಖ್ಯೆ 2 ಕೋಟಿ 92 ಸಾವಿರ (42%), 25-29 ವಯಸ್ಸಿನ ನಿರುದ್ಯೋಗಿಗಳ ಸಂಖ್ಯೆ 6 ಕೋಟಿ 8 ಸಾವಿರ (12.72%) ಆಗಿತ್ತು. ಹೀಗೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ಅಂಕಿ-ಅಂಶ ನೋಡುತ್ತಾ ಹೋದರೆ ನಮ್ಮ ದೇಶದಲ್ಲಿ ಆರ್ಥಿಕ ಸಂಕಷ್ಟದ ಅತಿ ದೊಡ್ಡ ಸಂಕೇತ ಕಂಡು ಬರುತ್ತದೆ.

ಜನಸಾಮಾನ್ಯರು ಅತ್ಯಂತ ಕಠಿಣ ಜೀವನ ನಡೆಸುತ್ತಿದ್ದರೂ ಸರಕಾರ ಮಾತ್ರ ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ, ಬದಲಿಗೆ ಈ ದೇಶದ ಬಂಡವಾಳಶಾಹಿ ಉದ್ಯಮಿಗಳಿಗೆ ದೇಶದ ಸಂಪತ್ತನ್ನು ಲೂಟಿ ಮಾಡಿ ಇನ್ನಷ್ಟೂ ಶ್ರೀಮಂತರು ಆಗುವಲ್ಲಿ ನೆರವು ಆಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular