ಎನ್‍ಪಿಎಸ್ ರದ್ದುಗೊಳಿಸುವ ಮುಷ್ಕರಕ್ಕೆ ಬೆಂಬಲ ನೀಡಲು ಮನವಿ

0
7

ಶಹಾಬಾದ: ಸೀಮಿತ ಅವಧಿಯಲ್ಲಿ ಸೇವೆ ಮಾಡುವ ಶಾಸಕರಿಗೆ ಸಂಸದರಿಗೆ ಪಿಂಚಣಿ ವ್ಯವಸ್ಥೆಯಿದೆ ಆದರೆ ಸರ್ಕಾರದ ಭಾಗವಾಗಿ 30 40 ವರ್ಷಗಳ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನಿಶ್ಚಿತ ಪಿಂಚಣಿ ಯಾಕಿಲ್ಲ ಎಂದು ಎನ್‍ಪಿಎಸ್ ನೌಕರ ಸಂಘದ ತಾಲೂಕಾ ಘಟಕದವರು ಪ್ರಶ್ನಿಸಿ, ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಘೋಷಣೆಯೊಂದಿಗೆ ವಿಜಯ ಸಂಕಲ್ಪ ಯಾತ್ರೆ ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ಎನ್‍ಪಿಎಸ್ ನೌಕರರನ್ನು ಭೇಟಿ ನೀಡಿ ಎಲ್ಲಾ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಸಲ್ಲಿಸಿದರು.

ಸೇವೆಯಲ್ಲಿರುವ ಎನ್‍ಪಿಎಸ್ ನೌಕರರ ಜೀವನ ಸಂಧ್ಯಾ ಕಾಲದ ಬೇಡಿಕೆಯಾಗಿದ್ದು ಜೀವನದ ಕೊನೆಯ ಘಟ್ಟದಲ್ಲಿ ಗೌರವಯುತವಾಗಿ ಬದುಕಲು ಸಹಾಯವಾಗಲಿದೆ. ಎನ್‍ಪಿಎಸ್ ಅನಾನುಕೂಲದ ಹಿನ್ನೆಲೆಯಲ್ಲಿ ರಾಜಸ್ಥಾನ, ಛತ್ತೀಸಗಡ್, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಎನ್‍ಪಿಎಸ್ ರದ್ದುಗೊಳಿಸಿವೆ. ಅದೇ ಮಾದರಿ ಕರ್ನಾಟಕದಲ್ಲಿಯೂ ಎನ್‍ಪಿಎಸ್ ಯಾಕೆ ರದ್ದುಗೊಳಿಸಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೂಡಲೇ ಇದನ್ನು ರದ್ದುಗೊಳಿಸಿ ಓಪಿಎಸ್ ಜಾರಿಗೆ ತರಬೇಕು. ಇದು ಸರಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಎಂದರು. ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರರು ಬೀದಿಗೆ ಇಳಿದಿದ್ದೇವೆ. ಇದೇ ನವೆಂಬರ್ 11ರಂದು ಕಲಬುರ್ಗಿಯಲ್ಲಿ ಹಾಗೂ ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿರುದ್ಧ ಹೋರಾಟ ನಡೆಯಲಿದೆ ಆದ್ದರಿಂದ ಸರ್ಕಾರಿ ಇಲಾಖೆ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುವಂತೆ ಕೋರಿ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಮುಷ್ಕರಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎನ್‍ಪಿಎಸ್ ನೌಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ನಾಗೇಶ.ವಿ.ಜೆ, ಗೌರವಾಧ್ಯಕ್ಷ ಶಿವಕುಮಾರ ಕಟ್ಟಿಮನಿ,ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ, ರಾಮಚಂದ್ರ ಜೋಷಿ, ಸಂದೀಪ ಸೇರಿದಂತೆ ಸರಕಾರಿ ಇಲಾಖೆಯ ಅನೇಕ ಎನ್‍ಪಿಎಸ್ ನೌಕರರು ಇದ್ದರು.ಇದಕ್ಕೆ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್ ಬೆಂಬಲ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here