ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಅಜಯಕುಮಾರ ಸ್ಪೊರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಎರಡು ದಿನಗಳ ಕಾಲ ಅಸ್ಕಾ ಓಪನ್ ಚಾಂಪಿಯನಷಿಪ್ ಹಮ್ಮಿಕೊಳ್ಳಲಾಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕ ದೈಹಿಕ ಅಧಿಕಾರಿ ರಾಜಶೇಖರ್ ಗೋನಾಯಕ್ ಅವರು ಮಾತನಾಡಿದರು. ಇದರಲ್ಲಿ ಅನೇಕ ಕರಾಟೆ ಪಟುಗಳು ಭಾಗವಹಿಸಿದ್ದರು.
ಇಂಡಿಯನ್ ಕರಾಟೆಯ ಫೌಂಡರ್ ಮತ್ತು ಗ್ರಾಂಡ್ ಮಾಸ್ಟರ್ ಆದಂತ ಬಿ. ಎಂ. ನರಸಿಂಹನ್ ರವರು 25 ಜನವರಿ 2023 ರಂದು ನಿಧನ ಹೊಂದಿದರು ನಂತರ ಇಂಡಿಯನ್ ಕರಾಟೆಯ ಸೀನಿಯರ್ ಸ್ಟೂಡೆಂಟ್ ಆದಂತಹ ಶ್ರೀನಿವಾಸ್ ರವರಿಗೆ ಇಂಡಿಯನ್ ಕರಾಟೆಯ ಎರಡನೆಯ ಗ್ರಾಂಡ್ ಮಾಸ್ಟರ್ ಅಂತ ಆಯ್ಕೆಯಾಗಿರುತ್ತಾರೆ ಹಾಗೆಯೇ ರೆಡ್ ಬೆಲ್ಟ್ ಕಾರ್ಯಕ್ರಮವು ಕೂಡ ನಡೆಯಲಾಯಿತು.
ಅದೇ ರೀತಿ 7ಣh ಡಾನ್ ಬ್ಲಾಕ್ ಬೆಲ್ಟ್ ಅನ್ನು ವಿಜೇಂದ್ರ ಬಾಬು ಹಾಗೂ ರಾಜ್ವರ್ಧನ್ ಜಿ. ಚೌಹಾಣ್ ಅವರಿಗೆ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್ ರವರು ಬೆಲ್ಟ್ ವಿತರಿಸಿದರು.
ಅದೇ ರೀತಿ 5 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ 5 ವಿದ್ಯಾರ್ಥಿಗಳಿಗೆ 3ಡಿಜ, 2ಟಿಜ ಡಾನ್ ಸರ್ಟಿಫಿಕೇಟ್ ವಿತರಿಸಿದರು.
ಅದೇ ರೀತಿ ಅನೇಕ ವಿದ್ಯಾರ್ಥಿಗಳಿಗೆ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಮೆಡಲ್ ಮತ್ತು ಸರ್ಟಿಫಿಕೇಟ್ ಅನ್ನು ಅತಿಥಿಗಳು ವಿತರಿಸಿದರು.
ಮುಖ್ಯ ಅತಿಥಿಯಾಗಿ ಈ ಸಂದರ್ಭದಲ್ಲಿ ಇಂಡಿಯನ್ ಕರಾಟೆ ಗ್ರಾಂಡ್ ಮಾಸ್ಟರ್ ಶ್ರೀನಿವಾಸ್, ಡಿಸ್ಟಿಕ್ ಚೀಫ್ ಇನ್ಸ್ಟ್ರಕ್ಟರ್ ರಾಜವರ್ಧನ್ ಜಿ. ಚೌಹಾಣ ಮತ್ತು ಅನೇಕ ಸ್ಪರ್ಧಾರ್ಥಿಗಳು ಅವರ ಪೋಷಕರು ಇನ್ನಿತರರು ಹಾಜರಿದ್ದರು.