ಕಸಾಪದಿಂದ ಸಿರಿನುಡಿ ಸಂಭ್ರಮ | ಸಾಧಕರಿಗೆ `ರಾಜ್ಯೋತ್ಸವ’ ಗೌರವ ಪುರಸ್ಕಾರ

0
381

ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ಧಕ್ಕೆಯಾದಾಗ ಜಾತಿ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ಕನ್ನಡ ನಾಡಿನ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಾಗಿದೆ. ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವುದಕ್ಕಾಗಿ ಅನೇಕ ಹಿರಿಯರ ತ್ಯಾಗ-ಬಲಿದಾನವಿದೆ. ಅವನ್ನೆಲ್ಲಾ ನೆನಪು ಸದಾಕಾಲ ಮಾಡಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ `ಸಿರಿನುಡಿ ಸಂಭ್ರಮ-2022′ ರಲ್ಲಿ ಜಿಲ್ಲೆಯ ವಿವಿಧ ರಂಗದ ಸಾಧಕರಿಗೆ `ರಾಜ್ಯೋತ್ಸವ’ ಗೌರವ ಪುರಸ್ಕಾರ ನೀಡಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಮೊಟ್ಟ ಮೊದಲ ಗ್ರಂಥ ಕೊಟ್ಟ ನೆಲವಾದ ನಮ್ಮ ಕಲಬುರಗಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವೈಭವೋತವಾಗಿ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಂತಾಗಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕøತಿ, ಪರಂಪರೆ ಶ್ರೀಮಂತವಾಗಿದ್ದು,  ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಹೊಸ ಪೀಳಿಗೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಿದ್ದು, ಆಧುನಿಕ ಸಂವಹನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಹೆಚ್ಚಾಗಿ ಬಳಕೆಯಾಗಬೇಕಿದೆ. ಇದಕ್ಕಾಗಿ ಪರಿಷತ್ತು ಜಿಲ್ಲೆಯಾದ್ಯಂತ ಮೂವತ್ತು ದಿನ-ಮೂವತ್ತು ಉಪನ್ಯಾಸ ಎಂಬ ವಿಶೇಷ ಕಾರ್ಯಕ್ರಮಗಳ ಮೂಲಕ ಮಾತೃಭಾಷಾಭಿಮಾನ ಹೆಚ್ಚಿಸಲು ಕಾರ್ಯಕ್ರಮಗಳು ರೂಪಿಸಿದೆ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ.ಎಸ್.ಖಂಡೇರಾವ ಸಮಾರಂಭ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶಕ ಬಸವರಾಜ ಕೋನೆಕ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಶಕುಂತಲಾ ಪಾಟೀಲ, ಸ್ನೇಹಲತಾ ಕಮಕನೂರ, ಶಿಲ್ಪಾ ಜೋಶಿ, ಲತಾ ಬಿಲಗುಂದಿ, ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣಾ ಹೆಚ್.ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಸಿದ್ಧಲಿಂಗ ಬಾಳಿ, ಡಾ.ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ನಾಗಣ್ಣಾ ರಾಂಪೂರೆ, ಶರಣಬಸಪ್ಪ ನರೂಣಿ, ಶರಣಬಸವ ಜಂಗಿನಮಠ, ಸಿ.ಎಸ್.ಆನಂದ, ಸಿದ್ಧಾರಾಮ ಹಂಚನಾಳ ಇತರರು ಉಪಸ್ಥಿತರಿದ್ದರು.

ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಗನ್ನಾಥ ಹಲಿಂಗೆ, ರೇವಣಸಿದ್ದಪ್ಪಾ ಮಾಸ್ತರ್ ಚಿಂಚೋಳಿ, ಅಶೋಕ ಸಾಹು ಗೋಗಿ, ಡಾ.ಗುಂಡಣ್ಣ ಬಾಳಿ ರಾವೂರ, ಮಹಾಲಿಂಗಪ್ಪ ಇಂಗಿನಶೆಟ್ಟಿ, ಡಾ.ಸಿ.ಎಸ್.ರಗಟೆ, ಡಾ.ಎಸ್.ಹೆಚ್.ದೇಶಪಾಂಡೆ, ಹಣಮಂತಪ್ಪಾ ಬೆಳಗುಂಪಿ, ಅನೀತಾ ಪಿ.ವಳಕೇರಿ, ಸೋಮಶೇಖರ ಮಠ, ಮನೋಹರ ಬೀರನೂರ, ಡಾ.ಮಲ್ಲಿಕಾರ್ಜುನ ಭಾಗೋಡಿ, ಡಾ.ಶಾಹೇದ್ ಪಾಷಾ, ಬಸವರಾಜ ವಿಶ್ವಕರ್ಮ ಯಡ್ರಾಮಿ, ಶ್ರೀನಿವಾಸ ಕಾಸೋಜ್, ನಾಗರಾಜ ಕೋಟನೂರ (ಡಿ) ಅವರನ್ನು `ರಾಜ್ಯೋತ್ಸವ’ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಪ್ರಮುಖರಾದ ವೀರೇಂದ್ರಕುಮಾರ ಕೊಲ್ಲೂರ, ಎಸ್.ಕೆ.ಬಿರಾದಾರ, ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ಶಾಮಸುಂದರ ಕುಲಕರ್ಣಿ, ಸುರೇಶ ದೇಶಪಾಂಡೆ, ಬಸವರಾಜ ಉಪ್ಪಿನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸದಾ ಹೊಸತನದ ತುಡಿತದಿಂದ ಕೂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮವನ್ನೂ ವಿನೂತನವಾಗಿ ಮಾಡುವ ಮೂಲಕ ಹೊಸ ದಾಖಲೆ ಸೃಷ್ಠಿ ಮಾಡಲು ಮುಂದಾಗಿದೆ. ಕಲೆ, ಸಾಹಿತ್ಯ, ಪರಂಪರೆ, ಸಂಗೀತ ಹೀಗೆ ಎಲ್ಲಾ ಕ್ಷೇತ್ರದವರನ್ನು ಒಗ್ಗೂಡಿಸುವ ಮತ್ತು ಒಂದುಗೂಡಿಸುವ ಕೆಲಸ ಮಾಡುತ್ತಿದೆ. – ನಾಡೋಜ ಡಾ. ಜೆ.ಎಸ್. ಖಂಡೇರಾವ, ಮಾಜಿ ಅಧ್ಯಕ್ಷ, ಕರ್ನಾಟಕ ಲಲಿತಕಲಾ ಅಕಾಡೆಮಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here