ಆಳಂದನಲ್ಲಿ ವಿವಿಧ ಸಂಘಟನೆಗಳಿಂದ ಮಿಂಚಿನ ಪ್ರತಿಭಟನೆ

0
39

ಆಳಂದ: ಸ್ಥಳೀಯ ಪೆÇೀಲಿಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಂಗಳವಾರ ನಡೆದ ಅಪ್ರಾಪ್ತೆ ಬಾಲಕಿಯ ಮೇಲೆ ಕೃತ್ಯ ವೆಸಗಿ, ಕೊಲೆಮಾಡಿದ ಪ್ರಕರಣವನ್ನು ಖಂಡಿಸಿ ಬುಧವಾರ ಪಟ್ಟಣದ ಬಸ್ ನಿಲ್ದಾಣದ ಎದುರಿನ ಹೆದ್ದಾರಿ ತಡೆದು ಟಾಯರಗೆ ಬೆಂಕಿಹಚ್ಚಿ ವಿವಿಧ ಸಂಘಟನೆಗಳ ಮಿಂಚಿನ ಪ್ರತಿಭಟನೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.

ಬೆಳಗಿನ 11 ಗಂಟೆಯ ಸುಮಾರಿಗೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬಸ್ ನಿಲ್ದಾಣದ ಎದುರಿಗೆ ಜಮಾಯಿಸಿ ಆರೋಪಿ ನಡೆದ ಹೆದ್ದಾರಿ ತಡೆಯಿಂದ ಸಾರಿಗೆ ಸಂಸ್ಥೆಯ ಬಸ್, ಕರ್ನಾಟಕ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ ಲಾರಿ, ಜೀಪ್ ಸೇರಿ ಇನ್ನಿತರ ವಾಹನಗಳ ಸಂಚಾರ ಕಡಿತಗೊಂಡು ಎರಡ ಗಂಟೆಗಳ ನಿಂತುಕೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

Contact Your\'s Advertisement; 9902492681

14 ವರ್ಷದ ಬಾಲಕಿಯ ಮೇಲೆ ಕೃತ್ಯ ವೆಸಗಿ ಕೊಲೆಮಾಡಿದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಕೂಡಲೇ ಸಂಬಂಧಿತ ಆರೋಪಿಗಳನ್ನು ಬಂಧನ ಮಾಡಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಯ ಮುಖಂಡರು, ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿ, ಮಾತನಾಡಿದ ಅವರು, ಆರೋಪಿಗಳಿಗೆ ಶೀಘ್ರ ಬಂಧನ ಪಟ್ಟುಹಿಡಿಕೊಂಡಿದ್ದರು.

ಕೊಲೆಗಡಕರಿಗೆ ಗಲ್ಲು ಶಿಕ್ಷೆ, ಸಂತ್ರಸ್ಥ ಕುಟುಂಬಕ್ಕೆ ಕೋಟಿ ರೂಪಾಯಿ ಪರಿಹಾರ ಹಾಗೂ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಪ್ರತಿಭಟನಾ ಕಾರರು ಸರ್ಕಾರವನ್ನು ಆಗ್ರಹಿಸಿದರು.

ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಕೊರಳ್ಳಿ, ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಬೀರಣ್ಣಾ ಪೂಜಾರಿ ಭೂಸನೂರ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲೂಕು ಅಧ್ಯಕ್ಷ ಧರ್ಮಾ ಬಂಗರಗಿ, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಂಪತಕುಮಾರ ವೇದಪಾಠಕ, ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಬಂಜರಾ ಕ್ರಾಂತಿದಳ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ, ಬಸಸವಸೇನೆ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಪಾಟೀಲ, ಗುಂಡು ಗೌಳಿ ಸೇರಿದಂತೆ ಮತ್ತಿತರು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.

ಇದೇ ವೇಳೆ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಕುರುಬ ಸಮಾಜದ ಗುರುನಾಥ ಪೂಜಾರಿ ಕೊಡಲಂಹರಗಾ, ತಾಲೂಕು ಅಧ್ಯಕ್ಷ ತುಕಾರಾಮ ವಗ್ಗೆ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಮತ್ತಿತರು ಪಾಲ್ಗೊಂಡು ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ಪ್ರಸನ್ನ ದೇಸಾಯಿ ಅವರು ಭೇಟಿ ನೀಡಿ ಸಂಜೆಯವರೆಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹಾಗೂ ನೌಕರಿ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಡಿವೈಎಸ್‍ಪಿ ರವಿಂದ್ರ ಶಿರೂರ, ಪಿಎಸ್‍ಐ ತಿರುಮಲ್ಲೇಶ, ನರೋಣಾ ಪಿಎಸ್‍ಐ ವಾತ್ಸಲ್ಯ ಮತ್ತವರ ಸಿಬ್ಬಂದಿಗಳು ಬೀಗಿ ಬಂದೋಬಸ್ತ್ ಒದಗಿಸಿದರು. ಬಸ್ ನಿಲ್ದಾಣ ಮುಂದೆ ಸುಮಾರು ಮೂರುಗಂಟೆಗಳ ಕಾಲ ನಡೆದ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಬೇಡಿಕೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here