ಮರು ಬೆಳೆ ಸಮೀಕ್ಷೆಗೆ ಮಾಜಿ ಶಾಸಕ ಬಿ.ಆರ್. ಪಾಟೀಲ್ ಆಗ್ರಹ

0
31

ಕಲಬುರಗಿ: ಮುಂಗಾರು ಹಂಗಾಮಿನ ತೊಗರಿ, ಉದ್ದು, ಹೆಸರು, ಸೋಯಬಿನ್ ಮುಂತಾದ ಬೆಳೆ ನಷ್ಟವಾಗಿದ್ದು, ರೈತರಿಗೆ 2000, 3000, 4000 ರೂ. ಬಿಕ್ಷೆ ನೀಡಿದ ಹಾಗೆ ಸರ್ಕಾರ ಪರಿಹಾರ ನೀಡಿದ್ದು,  ಬೆಳೆಹನಿ ಸಮೀಕ್ಷೆ ಹೇಘೆ? ವರದಿಯ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಮಾಜಿ ಸಭಾಪತಿ ಬಿ ಆರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳೆ ನಷ್ಟ ಪರಿಹಾರ ನೀಡಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ಮೊತ್ತೊಮ್ಮೆ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ಮಾಡಿ ರಾಜ್ಯದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.

Contact Your\'s Advertisement; 9902492681

ಬೆಳೆ ವಿಮೆ ರಾದ್ಧಾಂತ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ರೈತರಿಗೆ ಅನುಕೂಲ ಕಲ್ಪಿಸುವ ಬದಲು ಇನ್ಸೂರೆನ್ಸ್ ಕಂಪನಿಗಳಿಗೆ ಲಾಭವಾಗಿದೆಯೇ ಹೊರತು, ರೈತರಿಗಂತೂ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ ಎಂದು ದೂರಿದÀರು.

ಜಿಲ್ಲೆಯಲ್ಲಿ 2,14,749 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದರು. ಇವರಲ್ಲಿ 1.15.985 ರೈತರು ಬೆಳೆ ಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಆದರೆ ಇಲಿಯವರೆಗೆ ನೈಆಪೈಸೆ ಕೂಡ ಮಂಜೂರು ಆಗಿರುವುದಿಲ್ಲ. ಆದರೂ ವಿಮಾ ಕಂಪೆನಿಗಳು ಶೇ. 90ರಷ್ಟು ಸರ್ವೆ ಕೂಡ ಮಾಡಿದ್ದಾರೆ ಎಂದು ತಿಳಿದಿದೆ. ಆದ್ದರಿಂದ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ತಿಳಿಸಿದರು.

ಕಬ್ಬಿಗೆ ಬೆಂಬಲ ಬೆಲೆ: ರಾಜ್ಯದ ಎಲ್ಲ ಬ್ಯಾಂಕುಗಳ ದಿಂದ ಪಡೆದಿರುವಂತಹ ಬೆಳೆ ಸಾಲವನ್ನು ಮನ್ನಾ ಮಾಡಬೇಕು, ಕಬ್ಬಿಗೆ ಪ್ರತಿ ಟನ್‍ಗೆ 3,500 ರೂ. ಬೆಂಬಲ ಬೆಲೆ ನೀಡಬೆಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ್, ಯುವ ಕಾಂಗ್ರೆಸ್‍ನ ಈರಣ್ಣ ಝಳಕಿ, ರೇಣುಕಾ ಸಿಂಗೆ, ಗಣೇಶ ಪಾಟೀಲ, ಅಮರ ಸಿರವಾಳ, ಮಹಾಂತೇಶ ಕೌಲಗಿ ಇತರರು ಇದ್ದರು.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೊದಲ ಹಂತದಲ್ಲಿ ಆಳಂದ ಪಟ್ಟಣದಲ್ಲಿ ನ.9ರಂದು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು. ನಂತರದ ದಿನಗಳಲ್ಲಿ ಪಕ್ಷದ ನಿರ್ದೇನದಂತೆ ಕಡೆ ಬಿಜೆಪಿ ಸರ್ಕಾರದ ವೈಫಲ್ಯ ಕುರಿತು ರಾಜ್ಯದ ಎಲ್ಲ ಕಡೆ ಪ್ರತಿಭಟನೆ ನಡೆಸಲಾಗುವುದು. -ಬಿ.ಆರ್. ಪಾಟೀಲ, ಮಾಜಿ ಶಾಸಕ, ಆಳಂದ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here