ಹಗರಿಬೊಮ್ಮನಹಳ್ಳಿ; ಮೂರು ವರ್ಷಗಳ ಹಿಂದೆ ಸರ್ಕಾರದಲ್ಲಿ ಸಚಿವರಾದ ಶ್ರೀರಾಮುಲುರವರಿಗೆ ವೇದಾವತಿ ದಡದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಜ್ಞಾನೋದಯವಾಯಿತೇ? ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಪ್ರಶ್ನಿಸಿದ್ದಾರೆ
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾಗಿ ದುರಸ್ತಿಗೊಂಡ ಬಿಡಿ ಹಳ್ಳಿ ಸಮೀಪ ವೇದಾವತಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಬಹುದಿತ್ತಲ್ಲ ಎಂದು ಕೇಳಿದ ಅವರು ಕಳೆದ ನಾಲ್ಕು ವರ್ಷಗಳ ಕಾಲ ನೆನಪಾಗದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಪ್ರೀತಿ ಒಮ್ಮೆಲೆ ಉಕ್ಕಿದ್ದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಸಚಿವರು ವಿಧಾನಸೌಧದಲ್ಲಿ ಕೂತು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಅನುದಾನ ತಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದನ್ನು ಬಿಟ್ಟು ಕಾಮಗಾರಿ ಸ್ಥಳದಲ್ಲಿ ಮಲಗುವುದು ಸರ್ಕಾರದ ಭಾಗವಾಗಿರುವ ಸಚಿವರಿಗೆ ಶೋಭೆಯಲ್ಲ ಎಂದರು.