ಗ್ರಾಮಗಳ ಸ್ವಚ್ಛತೆ ಕಾಪಾಡಿಕೊಳ್ಳಲು ಸಿದ್ದಾರೂಢ ಸಂಗೊಳ್ಳಿಗಿ ಸಲಹೆ

0
81

ಅಫಜಲಪುರ: ತಾಲ್ಲೂಕಿನ  ಗೊಬ್ಬರ ಪ್ರಾಥಮಿಕ ಆರೋಗ್ಯ ಕೇಂದ್ರ  ಗ್ರಾಮದ ಹಾವನೂರು ನಲ್ಲಿ ಗ್ರಾಮದ ಜನರಿಗೆ,  ಸ್ವಚ್ಛತೆ ಕಾಪಾಡುವುದರಿಂದ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾ ಮಲೇರಿಯಾ ಕಾರ್ಯಾಲಯದ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಾರೂಢ ಸಂಗೊಳ್ಳಿಗಿ ಹಾವನೂರು ಗ್ರಾಮದಲ್ಲಿ ಡೆಂಗು ಮತ್ತು ಚಿಕನ್ ಗುನ್ಯಾ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತೆಂಗಿನ ಚಿಪ್ಪು, ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ಸಂಗ್ರವಾದದಂತೆ ಮನೆಯ ಒಳಗಡೆ ಮತ್ತು ಹೊರಗಡೆ ಎಚ್ಚರವಹಿಸಿ ಪ್ರತಿಯೊಬ್ಬರು ಆಶಾ ಕಾರ್ಯಕರ್ತರು ತಮ್ಮ ಮನೆ ಬಾಗಿಲಿಗೆ ಬಂದು ನೀರಿನ ಶೇಖರಣೆ ಹಾಗೂ ಸೊಳ್ಳೆಯ ಸಂತಾನೋತ್ಪತ್ತಿ ಬೆಳೆಸುವಲ್ಲಿ ಲಾರ್ವಗಳುಕಂಡು ಬಂದಲ್ಲಿ ತಮಗೆ ಅದನ್ನು ಸ್ವಚ್ಛಗೊಳಿಸಲು ತಿಳಿಸಿದಾಗ ತಾವು ಸಹಕರಿಸಿ ಎಂದು ಗ್ರಾಮಸ್ಥರಿಗೆ ತಿಳಿಸಿದರು ಅಲ್ಲದೆ ಸ್ವಯಂ ರಕ್ಷಣಾ ವಿಧಾನಗಳನ್ನು ವಿವರಿಸಿ ಅದರಲ್ಲಿ ತಾವು ಕಡ್ಡಾಯವಾಗಿ ಸೊಳ್ಳೆ ಪರದೆಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ತದನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮಾತನಾಡಿ ಡೆಂಗ್ಯೂ ರೋಗದ ಲಕ್ಷಣಗಳು, ಹಾಗೂ ಅದರ ವಿಧಗಳು ಅದು ಹರಡುವ ಬಗೆ ಅದರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮುದುಕರಿಗೆ ಬಲಿ ತೆಗೆದುಕೊಳ್ಳಬೇಕಾದ ಭೀಕರ ರೋಗ ಎಂದು ವಿವರಿಸಿ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ ಅದಕ್ಕಾಗಿ ಮುಂಜಾಗ್ರತೆಯೆ ಮುದ್ದು , ಅದಕ್ಕೆ ತಾವೆಲ್ಲರೂ ಸೊಳ್ಳೆಗಳ ನಿಯಂತ್ರಿಸುವಲ್ಲಿ ತಮ್ಮೆಲ್ಲರದು ಜವಾಬ್ದಾರಿ, ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಿ ತಾವುಗಳು ಈ ಮಾಹಿತಿಗಳನ್ನು ಚಾಚು ತಪ್ಪದೇ ಪಾಲಿಸಿ, ಸೊಳ್ಳೆ ಕಡಿತದಿಂದ ಪಾರಾಗಿ ಆರೋಗ್ಯವಂತರಾಗಿರಿ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಗ್ರಾಮದ ಮುಖಂಡರುಗಳಾದ ಅಣ್ಣಾರಾವ ಇಸ್ತ್ರಿ, ಬಬ್ರುವಾಹನ ಹುಲ್ಲೂರ್, ಮಾಳಪ್ಪ ಪೂಜಾರಿ ರೋಗದ ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಹಿರಿಯರು, ಯುವಕರು, ಉಪ ಕೇಂದ್ರದ ಸಿಬ್ಬಂದಿಗಳಾದ ಗುಂಡಮ್ಮ, ಸಮುದಾಯ ಆರೋಗ್ಯ ಕಾಳಜಿ ಅಧಿಕಾರಿ, ರೋಜ್ಲಿನ್ ಸಮುದಾಯ ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತರಾದ ಶಶಿಕಲಾ ಸುನಿತಾ ಪಾಲ್ಗೊಂಡಿದ್ದರು. ಉಪ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಅಣ್ಣಾರಾವ್ ಪೂಜಾರಿ ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here