ಪ್ರತಿಟನ್ ಕಬ್ಬಿಗೆ 2500 ರೂಪಾಯಿ ನೀಡದೇ ಹೋದಲ್ಲಿ ಕಾರ್ಖಾನೆಗೆ ಬೀಗ

0
31
ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಮುಂದೆ ಪ್ರತ್ಯೇಕ ಪ್ರತಿಭಟನೆ ಬಿಸಿ

ಆಳಂದ: ಭೂಸನೂರ ಹತ್ತಿರದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆಗೆ ಒತ್ತಾಯಿಸಿ ಬೆಳೆಗಾರರು ಕೈಗೊಂಡ ಧರಣಿ ಸತ್ಯಾಗ್ರಹ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದೆ.

ಅಲ್ಲದೆ ಪ್ರತ್ಯೇಕವಾಗಿ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನೇತೃತ್ವದಲ್ಲಿ 2020-21ನೇ ಸಾಲಿಗೆ ಕಬ್ಬು ಸಾಗಿಸಿದ ವಾಹನಗಳ ಬಿಲ್ ಪಾವತಿಸುವಂತೆ ವಾಹನಗಳ ಮಾಲೀಕರು ಸಹ ಕಳೆದ ಅ.31ರಿಂದ ಪ್ರತ್ಯೇಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡು ಬೇಡಿಕೆಗೆ ಪಟ್ಟುಹಿಡಿದಿದ್ದಾರೆ.

Contact Your\'s Advertisement; 9902492681

ಹೀಗೆ ಏಕಕಾಲಕ್ಕೆ ಕಾರ್ಖಾನೆ ಮುಂದೆ ಎರಡೇರಡು ಪ್ರತಿಭಟನೆಯ ಬಿಸಿ ಎದುರಿಸತೊಡಗಿದೆ. ಆದರೇ ಕಾರ್ಖಾನೆಯಿಂದ ವಾಹನ ಮಾಲೀಕರದ್ದಾಗಲಿ  ಅಥವಾ ಕಬ್ಬು ಬೆಳೆಗಾರರ ಬೇಡಿಕೆಗೆ ಶುಕ್ರವಾರವೂ ಸ್ಪಂದನೆ ದೊರೆತ್ತಿಲ್ಲ. ಇದರಿಂದಾಗಿ ಬೃಹತ್ ಮಟ್ಟದಲ್ಲಿ ಅನಿರ್ದಿಷ್ಟಾವಧಿ ಪ್ರತ್ಯೇಕ ಧರಣಿ ಶನಿವಾರವೂ ಮುಂದುವರೆದಿದೆ.

ಈ ನಡುವೆ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಅವರು, ಧರಣಿಗೆ ಬೆಂಬಲಿಸಿ ಮಾತನಾಡಿ, ರೈತರ ಬೇಡಿಕೆಯಂತೆ ಪ್ರತಿಟನ್ ಕಬ್ಬಿಗೆ 2500 ರೂಪಾಯಿ ದರ ಪ್ರಕಟಿಸದೇ ಹೋದಲ್ಲಿ ಕಾರ್ಖಾನೆಗೆ ಬೀಗಹಾಕಿ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ  ಎಂದು ಎನ್‍ಎಸ್‍ಎಲ್ ಆಡಳಿತ ಮಂಡಳಿಗೆ ಎಚ್ಚರಿಸಿದರು.

ನೆರೆಯ ಸಕ್ಕರೆ ಕಾರ್ಖಾನೆಗಳ ದರ ನೀಡಲು ಎನ್‍ಎಸ್‍ಎಲ್ ಹಿಂದೇಟು ಹಾಕುವುದು ಸರಿಯಲ್ಲ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಬ್ಬು ಬೆಳೆಗಾರರಿಗೆ ಸ್ಪಂದಿಸಬೇಕು. ರೈತರ ತಾಳ್ಮೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪ್ರತಿಟನ್ ಕಬ್ಬಿಗೆ 3500 ರೂಪಾಯಿ ಬೆಳೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೆಕು ಎಂದು ಅವರು ಆಗ್ರಹಿಸಿದರು.

ರೈತರ ಮತ್ತು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ವಾಹನಗಳ ಬಿಲ್ ಶೀಘ್ರವೇ ಪಾವತಿಸದಲ್ಲಿ ಮುಂದಾಗುವ ದುರ್ಗಟನೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಈ ಮೊದಲು ಶಾಸಕ ಸುಭಾಷ ಗುತ್ತೇದಾರ ಅವರು ಸತ್ಯಾಗ್ರಹ ಸ್ಥಳಕ್ಕೆ 3ನೇ ಬಾರಿಗೆ ಭೇಟಿ ನೀಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬೇಡಿಕೆ ಈಡೇಸುವ ಕುರಿತು ಸಕ್ಕರೆ ಸಚಿವರೊಂದಿಗೆ ಭೇಟಿಯಾಗಿ ಬೇಡಿಕೆಗೆ ಈಡೇರಿಸುವಂತೆ ಮನವಿ ಮಾಡಿದ್ದು, ಈ ಕುರಿತು ಸಚಿವರು ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಫಲಿತಾಂಶಕ್ಕಾಗಿ ಒಂದೇರಡು ದಿನ ಕಾದುನೋಡಣಾ ಎಂದು ಅವರು ಹೇಳಿದರು. ಈ ವೇಳೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಶರಣ ಕುಲಕರ್ಣಿ ಇದ್ದರು.

ಕಬ್ಬು ಬೆಳೆಗಾರ ಸತ್ಯಾಗ್ರಹದಲ್ಲಿ ಅಶೋಕ ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಿವಾ ಪಾಟೀಲ ನಿಲಕಂಠರಾವ್ ಇತರ ಸೇರಿ ನಿರ್ದೇಶಕರು, ಶಂಕರ ಸೋಮಾ, ಅಶೋಕ ಪಾಟೀಲ, ಚಂದ್ರಶೇಖರ ಸಾಹು, ಶರಣಪ್ಪ ಜಿ. ಮಲಶೆಟ್ಟಿ, ಚಂದ್ರಪ್ಪ ಯಂಕಂಚಿ, ಸಂತೋಷ ಕಲಶಟ್ಟಿ, ಹಣಮಂತರಾವ್ ಮಾನ್ಯಾಳೆ, ಕಲ್ಯಾಣಿ ಜಮಾದಾರ, ಹಣಮಂತ ಪಾಟೀಲ ಸೇರಿದಂತೆ ನೂರಾರು ರೈತರಿದ್ದಾರೆ.

ಮತ್ತೊಂದು ಟೆಂಟ್‍ನಲ್ಲಿ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನೇತೃತ್ವದ ವಾಹನ ಮಾಲೀಕರ ಬಿಲ್ ಪಾವತಿಗೆ ಒತ್ತಾಯಿಸಿ ಕೈಗೊಂಡ ಸತ್ಯಾಗ್ರಹದಲ್ಲಿ ರಮೇಶ ಜಗತಿ, ಸಚೀನ ಪವಾರ, ಶಿವರಾಜ ಎಲ್ ರಾಠೋಡ, ಸಂಜು ಕೊರಳ್ಳಿ, ವಾಸುದೇವ ಆರ್. ರಾಠೋಡ, ಶಿವು ರಾಠೋಡ, ಸುಭಾಷ ಪವಾರ, ವಿನೊಧ ರಾಠೋಡ, ಧಗಡು ಪವಾರ, ಪ್ರಕಾಶ ಜಾಧವ,   ವಾಸು ರಾಠೋಡ, ಕಿಶನ ಜಾಧವ, ಕನಿರಾಮ ರಾಠೋಡ, ಗೋವಿ, ಲಕ್ಷ್ಮಣ ರಾಠೋಡ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

ಕಾರ್ಖಾನೆ ಮುಂದೆ ಆರಂಭಿಸಿದ ಈ ಎರಡು ಪ್ರತ್ಯೇಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರವೂ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here