ಕಲಬುರಗಿ: ನಗರದ ಆದರ್ಶ ನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಯಣ ಸಂಸ್ಥೆ ಬೆಂಗಳೂರು ಹಾಗೂ ಕಲಬುರಗಿ ಆರ್ಟ್ ಥಿಯೇಟರ್ ಕಲಬುರಗಿ ಆಶ್ರಯದಲ್ಲಿ ನಡೆದ ತೃತಿಯ ಲಿಂಗ ಮಹಿಳೆಯರ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ಘಾಟಿಸಿದ ಪ್ರಾಚಾರ್ಯರಾದ ಅರುಣಕುಮಾರ ಪಾಟೀಲ ಮಾತನಾಡಿ ಸಮಾಜದಲ್ಲಿ ಧಾರ್ಮಿಕ ಮತ್ತು ನಂಬಿಕೆ, ಮೂಡನಂಬಿಕೆಗಳಿಂದ ತೃತೀಯ ಲಿಂಗದ ಸಮುದಾಯದಕ್ಕೆ ಮಾನ್ಯತೆ ಮತ್ತು ಗೌರವ ಇಲ್ಲದಂತಾಗಿದೆ. ಅವರನ್ನು ಕುಟುಂಬದವರು ಸ್ವೀಕರಿಸದೆ ಬಿಕ್ಷಾಟನೆಗೆ ತಳ್ಳುವುದು, ಮನೆಯಿಂದ ಹೊರಹಾಕುವುದು ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅನಾಥರನ್ನಾಗಿ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ತಳ್ಳುವ ಮತ್ತು ದೇವರು/ಮೂಡನಂಬಿಕೆ ಹೆಸರಿನಲ್ಲಿ ಶೋಷಣೆ ಮಾಡುವುದು ನಿಲ್ಲಬೇಕು. ಅವರನ್ನು ಸಹ ಎಲ್ಲಾ ಮಕ್ಕಳಂತೆ ಸ್ವೀಕರಿಸಿ ಬದಕುವ ಹಕ್ಕನ್ನು ಒದಗಿಸಬೇಕೆಂದು ಹೇಳಿದರು.
ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಡುವ ಪಯಣ ಸಂಸ್ಥೆಯ ನಿರ್ದೇಶಕಿ ಚಾಂದನಿಯವರು ಮಾತಾನಾಡುತ್ತ, ನಾವು ನಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಅವಕಾಶ ಕೇಳುತ್ತೇವೆ. ನಾನು ಪಯಣ ಭಾಗವಾಗಿದ್ದೇನೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡುವ ಲಾಭರಹಿತ. ‘ಟ್ರೂತ್ ಡ್ರೀಮ್’ ಪ್ರಾಜೆಕ್ಟ್ ಎಂಬ ಶೀರ್ಷಿಕೆಯಡಿಯಲ್ಲಿ ನಾವು ಮಾಡಿದ ಫೋಟೋ ಮತ್ತು ದೃಶ್ಯ ಸ್ಥಾಪನೆಯ ಆಧಾರದ ಮೇಲೆ ನಾವು ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಬೆಂಗಳೂರಿನಲ್ಲಿರುವ ಮಾಧ್ಯಮ ಮತ್ತು ಕಲಾ ಸಮೂಹದ ಮಾರಾ ಸಹಯೋಗದೊಂದಿಗೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಫೋಟೋ ಮತ್ತು ದೃಶ್ಯ ಯೋಜನೆಯು ಟ್ರಾನ್ಸ್ ಮಹಿಳೆಯರಿಗೆ ತಮ್ಮ ಸ್ತ್ರೀಲಿಂಗ ಮತ್ತು ನಿರ್ದಿಷ್ಟ ಲಿಂಗ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ವೇದಿಕೆಯಾಗಿದೆ. ಸಾಂಪ್ರದಾಯಿಕ ತುಳಿತಕ್ಕೊಳಗಾದ ಅಥವಾ ಬಲಿಪಶುಗಳೆಂದು ತೋರಿಸುವ ಸಮುದಾಯದ ವಾಡಿಕೆ ಅಥವಾ ಸ್ಟೀರಿಯೊಟೈಪಿಕಲ್ ಚಿತ್ರಗಳಿಗೆ ವಿರುದ್ಧವಾಗಿ ಬಯಕೆ ಮತ್ತು ಸಂತೋಷವನ್ನು ತೋರಿಸುವ ಮತ್ತು ಅವರ ಕನಸುಗಳಿಗೆ ವೇದಿಕೆ ನೀಡುವ ಪ್ರಯತ್ನವಾಗಿದೆ. ಮತ್ತು ಹಿರಿಯ ಟ್ರಾನ್ಸ್ ಜನರ ಹಕ್ಕುಗಳು ಮತ್ತು ಭಾವನೆಗಳಿಗೆ ಮತ್ತು ನೋವುಗಳನ್ನು ಜನರಿಗೆ ತಲುಪಿಸುವ ಪ್ರಯತ್ನವಾಗಿದೆ. ಈ ಪ್ರದರ್ಶನದಲ್ಲಿ ಕಾಣಿಸಿಕೊಂಡಿರುವ ಟ್ರಾನ್ಸ್ ಸಮುದಾಯದ ಸದಸ್ಯರು ಹಿಂಸೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಪೊಲೀಸ್ ದೌರ್ಜನ್ಯ, ಕುಟುಂಬ ಮತ್ತು ಸಾರ್ವಜನಿಕರಿಂದ ತಾರತಮ್ಯವನ್ನು ಅನುಭವಿಸಿ ಲೈಂಗಿಕ ಕೆಲಸ ಮತ್ತು ಭಿಕ್ಷಾಟನೆಯ ಮೂಲಕ ಬದುಕುಳಿದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಪಯಣ ಸಂಸ್ಥೆಯು ಸಾಕ್ಷ್ಯ ಚಿತ್ರ ಮತ್ತು ಫೋಟೋ ಪ್ರದರ್ಶನದ ಮೂಲಕ ಸಮಾಜದಲ್ಲಿ ನಮ್ಮನ್ನು ಸ್ವೀಕರಿಸಬೇಕು ಸಹೋದರ ಸಹೋದರಿಯಂತೆ ಕಾಣಬೇಕು ಮತ್ತು ಸರ್ಕಾರ ನಮಗಾಗಿ ಇರುವ ಕಾನೂನು ಗಳಡಿ ರಕ್ಷಣೆ ಮತ್ತು ಭದ್ರತೆ ಸೌಲಭ್ಯ ಒದಗಿಸಬೇಕು. ನಮ್ಮ ಕುಟುಂಬ ನಮ್ಮನ್ನು ಸ್ವೀಕರಿಸಬೇಕು ಎನ್ನುವುದು ನಮ್ಮ ಕಾರ್ಯಕ್ರಮದ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕಲಬುರಗಿ ಆರ್ಟ ಥಿಯೇಟರನ ಅಧ್ಯಕ್ಷರಾದ ಸುನೀಲ ಮಾರುತಿ ಮಾನಪಡೆ ಇವರು ಮಾತನಾಡಿ ಪಯಣ ಸಂಸ್ಥೆಯು ರಾಜ್ಯಾದ್ಯಾಂತ ತೃತೀಯ ಲಿಂಗ ಸಮುದಾಯದ ಹಕ್ಕುಗಳ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ಪ್ರಯತ್ನದ ಭಾಗವಾಗಿ ಇಂದು ತೃತೀಯ ಲಿಂಗ ಸಮುದಾಯದ ಭಾವನೆಗಳನ್ನು ಅವರ ಸಂತೋಷವನ್ನು ತೋರಿಸುವ ಫೋಟೋ ಮತ್ತು ದೃಶ್ಯ ಚಿತ್ರವನ್ನು ಪ್ರದರ್ಶನ ನಡೆಸುತ್ತಿರುವುದು ಶ್ಲ್ಯಾಘನೀಯವಾಗಿದೆ. ಇಂದು ಸಮಾಜದಲ್ಲಿ ತೃತೀಯ ಲಿಂಗ ಸಮುದಾಯಕ್ಕೆ ಸ್ವೀಕಾರ ಮಾಡುವ ಭಾವನೆ ಇಲ್ಲವಾಗಿದೆ. ಆದ್ದರಿಂದ ಅವರು ಹಲವಾಗು ಮಾನಸಿಕ ಮತ್ತು ದೈಹೀಕ ದೌರ್ಜನ್ಯ ಅನುಭವಿಸುತ್ತಿದ್ದಾರೆ ಸರ್ಕಾರವು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019 ಜಾರಿಗೆ ತರುವ ಮೂಲಕ ಜೀವನ ಮತ್ತು ಸಾಮಾಜಿಕ ಭದ್ರಗೆ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಸ್ನೇಹಾ ಸೊಸೈಟಿ ಕಲಬುರಗಿ ಸದಸ್ಯರಾದ ಬೀರಲಿಂಗ ಪಯಣ ಸಂಸ್ಥೆಯ ಬಾನಮ್ಮ ಹಾಗೂ ಶ್ರವಣ ಉಪಸ್ಥಿತರಿದ್ದರು. ಜಿ.ಮಲ್ಲಪ್ಪ ಕಾರ್ಯಕ್ರಮದ ನಿರೂಪಣೆ ಮಾಡಿದರು. ನರಸಪ್ಪ ರಂಗೋಲಿ ವಂದಿಸಿದರು. ಕಾಲೇಜಿನ ಉಪನ್ಯಾಸಕರಾದ ಭಾರತಿ ಪಾಡವೆ, ಶಿವಕುಮಾರ ಏರಗೇರಿ, ವಿಠ್ಠಲ ಭಾವಿಮನಿ, ಲೀಲಾವತಿ, ಸವೀತಾ ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.