ಕ್ರಾಂತಿಕಾರಿ ಹೋರಾಟಗಾರ ಬಲವಂತ ಫಡ್ಕೆ ಹೆಸರು ಅಜರಾಮರ

0
11

ಶಹಾಬಾದ: ಬ್ರಿಟಿಷ್ ಸರಕಾರದ ಕಚೇರಿಯಲ್ಲಿ ಗುಮಾಸ್ತನಾಗಿದ್ದ ಒಬ್ಬ ಸಾಮನ್ಯ ಭಾರತೀಯ ಬ್ರಿಟಿಷ್ ಸರಕಾರದ ವಿರುದ್ಧವೇ ಬಂಡಾಯ ಹೂಡಿ, ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಢ್ಕೆ ಎಂದು ಬಿಜೆಪಿ ಮುಖಂಡ ಭೀಮರಾವ ಸಾಳುಂಕೆ ಹೇಳಿದರು.

ಅವರು ಶುಕ್ರವಾರ ನಗರದ ಜಗದಂಬಾ ಮಂದಿರದಲ್ಲಿ ಆಯೋಜಿಸಲಾದ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಭಾರತೀಯ ಸ್ವಾತಂತ್ರ್ಯ ಕ್ರಾಂತಿಕಾರಿ ಹೋರಾಟಗಾರ ಪೈಕಿ ವಾಸುದೇವ ಬಲವಂತ ಫಡ್ಕೆ ಹೆಸರು ಅಜರಾಮರ. ರಾಮೋಶೀ ಜನರ ತಂಡ ಕಟ್ಟಿಕೊಂಡು ಫಡ್ಕೆ ಬ್ರಿಟಿಷರ ನಿದ್ದೆಗೆಡಿಸಿದ ರೀತಿ ಮೈನವಿರೇಳಿಸುತ್ತದೆ. ಬ್ರಿಟಿμï ಸರಕಾರದಲ್ಲಿ ಮಿಲಿಟರಿಯ ಆರ್ಥಿಕ ವಿಭಾಗದಲ್ಲೂ ಕೆಲಸ ಮಾಡಿದರು.ತನ್ನ ತಾಯಿಯ ಅಂತ್ಯ ಸಮಯದಲ್ಲಿ ಅಂತಿಮ ದರ್ಶನಕ್ಕೆ ರಜೆ ನೀಡದ ಬ್ರಿಟಿμïರ ದುಷ್ಟ ಮನಸ್ಥಿತಿಯ ಅರಿವು ಅವರಿಗಾಯಿತು. ರೈತರು ಮೇಲೆ ಬ್ರಿಟಿಷರು ಮನಬಂದಂತೆ ಹೇರುತ್ತಿದ್ದ ಸುಂಕದಿಂದ ಸಿಡಿದೆದ್ದು ಸರಕಾರಿ ಕೆಲಸಬಿಟ್ಟು ಪುಣೆಗೆ ಬಂದರು ಫಡ್ಕೆ.ಮರಾಠಾ ದೊರೆಗಳ ಅರಮನೆ ಮತ್ತು ಕೋಟೆ ಕೊತ್ತಲಗಳನ್ನು ರಕ್ಷಿಸುತ್ತಿದ್ದ ರಾಮೋಶೀ ಜನರು ಬ್ರಿಟಿಷರ ದೌರ್ಜನ್ಯದಿಂದಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡಿದ್ದರು. ಇದೇ ಜನರನ್ನು ಕಟ್ಟಿಕೊಂಡು ಸೈನ್ಯ ಕಟ್ಟಿದರು.

ಸೇನೆಗೆ ಕನಿಷ್ಠವೆಂದರೂ ಐದು ಸಾವಿರ ರೂಪಾಯಿ ಅವಶ್ಯಕತೆ ಇತ್ತು. ಆಗ ಬ್ರಿಟಿಷರನ್ನು ಲೂಟಿ ಮಾಡಿ, ಅದೇ ಹಣದಿಂದ ಸೇನೆ ನಿಭಾಯಿಸಿದರು.ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು ಫಡ್ಕೆ ಎಂದು ಹೇಳಿದರು.

ಮುಖಂಡರಾದ ಜಗಾನನ ಕುಲಕರ್ಣಿ ಮಾತನಾಡಿ, ಫಡ್ಕೆ ಅವರು ಬ್ರಿಟಿಷರ ಖಜಾನೆಗಳ ಮೇಲೆ ದಾಳಿ ಮಾಡಿ ಹಣ ಸಂಗ್ರಹಿಸಿದರು. ಪುಣೆಯ ಸರಕಾರಿ ಕಚೇರಿಯನ್ನು ಸುಟ್ಟು ಧ್ವಂಸ ಮಾಡಿದರು. ಆಗ ಬ್ರಿಟಿಷರು ಫಡ್ಕೆ ಅವರನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದರು. ಫಡ್ಕೆ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನವನ್ನೂ ಘೋಷಿಸಿ, ಫಡ್ಕೆ ಚಿತ್ರವಿರುವ ಭಿತ್ತಿಚಿತ್ರವನ್ನು ಅಂಟಿಸಿದರು. ವಾಸುದೇವ್ ಮತ್ತವರ ಸ್ನೇಹಿತರು ಅದೇ ಚಿತ್ರದ ಕೆಳಗೆ ಬಾಂಬೆ ಗವರ್ನರ್ ಸರ್ ರಿಚರ್ಡ್ ಟೆಂಪಲ್‍ರನ್ನು ಹಿಡಿದು ತಂದರೆ ಅಥವಾ ಕೊಂದರೆ ಒಂದೂವರೆ ಪಟ್ಟು ಹೆಚ್ಚು ಬಹುಮಾನ ನೀಡುವುದಾಗಿ ಘೋಷಣೆಯ ಭಿತ್ತಿಪತ್ರ ಅಂಟಿಸಿದ್ದರು. ಏತನ್ಮಧ್ಯೆ, ಫಡ್ಕೆ ರೂಪಿಸಿದ್ದ ಸೇನೆ ಆರ್ಥಿಕ ಕೊರತೆಯಿಂದ ದುರ್ಬಲವಾಗ ತೊಡಗಿತು. ಮತ್ತೊದೆಂಡೆ ಬ್ರಿಟಿμïರ ಕಾರ್ಯಾಚರಣೆ ಬಿರುಸುಗೊಂಡಿತು.

ಇದರಿಂದ ತಪ್ಪಿಸಿಕೊಂಡು ಒಂದು ಸ್ಥಳದಿಂದ ಮತ್ತೊಂದ ಸ್ಥಳಕ್ಕೆ ಅಲೆಯುತ್ತಾ ಶಹಾಬಾದ ರೇಲ್ವೆ ನಿಲ್ದಾಣಕ್ಕೆ ಬಂದಿದ್ದು ಮಾತ್ರ ಇತಿಹಾಸ. ಅಲೆಯುತ್ತ ಇರುತ್ತಿರುವ ಸಂದರ್ಭದಲ್ಲಿ ಅವರಿಗೆ ವಿಪರೀತ ಜ್ವರ ಬಂದ ಪರಿಣಾಮ ನಡೆಯಲು ಆಗದಿರುವ ಸಮಯದಲ್ಲಿ ಬ್ರಿಟಿಷರು ಫಡ್ಕೆ ಅವರನ್ನು ಹಿಡಿದರು. ನಂತರ ಅವರು ಪ್ರಾಣ ಬಿಟ್ಟರು. ಅವರು ದೇಶಕ್ಕಾಗಿ ಮಾಡಿದ ತ್ಯಾಗ ಅವಿಸ್ಮರಣಿಯವಾದುದು ಎಂದು ಹೇಳಿದರು.

ಸುಭಾಷ ಜಾಪೂರ,ಚಂದ್ರಕಾಂತ ಗೊಬ್ಬೂರಕರ್, ಕನಕಪ್ಪ ದಂಡಗುಲಕರ್, ಜಯಶ್ರೀ ಸೂಡಿ,ಶಶಿಕಲಾ ಸಜ್ಜನ್,ಬಸವರಾಜ ಬಿರಾದಾರ, ಸಂಜಯ ಕೋರೆ,ಅನೀಲ ಬೋರಗಾಂವಕರ್,ಶರಣಬಸಪ್ಪ ಕೋಬಾಳ, ಬಸವರಾಜ ಮದ್ರಿಕಿ,ಶರಣು ವಸ್ತ್ರದ್,ಶಾಂತಪ್ಪ ಬಸಪಟ್ಟಣ,ರಾಜು ಮಾನೆ,ದುರ್ಗಪ್ಪ ಪವಾರ,ಅನೀಲ ಹಿಬಾರೆ,ನಾರಾಯಣ ದಂಡಗುಲಕರ್,ದತ್ತಾ ಪಂಡ್, ಸಿದ್ರಾಮ ಕುಸಾಳೆ,ಬಸವರಾಜ ಸಾತ್ಯಾಳ,ಚಂದ್ರಕಾಂತ ಸುಬೇದಾರ, ಜಗದೇವ ಸುಬೇದಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here