ಸಿಂಧನೂರು: ಅಂಬೇಡ್ಕರ್ ಪದವಿ ವಸತಿ ನಿಲಯದ ವಿದ್ಯಾರ್ಥಿ ಮುರುಡೇಶ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಹಾಗೂ ಸಿಂಧನೂರಿನಲ್ಲಿರುವ ಎಲ್ಲಾ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ತಹಶೀಲ್ ಕಚೇರಿ ಮುಂದೆ ಎಸ್.ಎಫ್.ಐ ಸಂಘಟನೆಯಿಂದ ಪ್ರತಿಭಟನೆ ನಡೆಯಿತ್ತು.
ಇಂದು SFI ತಾಲ್ಲೂಕಿನ ಘಟಕದ ವತಿಯಿಂದ ಹಾಸ್ಟೆಲ್ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಮೃತಪಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಸ್.ಎಫ್,ಐ ಕಾರ್ಯಕರ್ತರು ಮೃತ ವಿದ್ಯಾರ್ಥಿಗೆ ನ್ಯಾಯ್ಯ ಒದಗಿಸಬೇಕಂದು ಒತ್ತಾಯಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡೆಪ್ಯುಟಿ ತಹಶಿಲ್ದಾರರ ಸಮಸ್ಯೆ ನಿವಾರಿಸುವುದಾಗಿ ಲಿಖಿತ ಭರವಸೆಯ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಯಿತು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಲಮನಿ ಅವರು ತಿಳಿಸಿದರು.