ಶಹಾಬಾದ: ನಗರದ ಕನಕದಾಸರ ವೃತ್ತದಲ್ಲಿ ಕನಕದಾಸರ ಪುತ್ಥಳಿ ಸ್ಥಾಪನೆ ಮಾಡಲು ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ.ಆದ್ದರಿಂದ ಆದಷ್ಟು ಬೇಗನೆ ಕನಕದಾಸರ ಜಯಂತಿ ಮುಂಚೆ ಸ್ಥಳವನ್ನು ನಿಗದಿಪಡಿಸಬೇಕು.ಇಲ್ಲದಿದ್ದರೇ ಜಯಂತಿಯಂದೇ ಸಮಾಜದ ವತಿಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೆವೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ ಮಾತನಾಡಿ, ಈಗಾಗಲೇ ನಗರದ ಕನದಾಸರ ವೃತ್ತದಲ್ಲಿಕನಕದಾಸರ ಪುತ್ಥಳಿ ನಿರ್ಮಾಣ ಮಾಡಲು 2019-20ನೇ ಸಾಲಿನಲ್ಲಿ ನಗರಸಭೆಯ ಎಸ್.ಎಫ್.ಸಿ ಅನುದಾನದಲ್ಲಿ ಹಣವನ್ನು ಇಡಲಾಗಿದೆ. ದಿ.23-03-2020 ರಂದು ಟೆಂಡರ್ ಹಾಗೂ 07-09-2020 ರಂದು ವರ್ಕ ಆರ್ಡ ಕೂಡ ನೀಡಲಾಗಿದೆ.ಆದರೂ ಇಲ್ಲಿಯವರೆಗೆ ಸ್ಥಳ ನಿಗದಿ ಮಾಡಲು ಹಿಂದೇಟು ಹಾಕಲಾಗುತ್ತಿದೆ.ಇದರಲ್ಲೂ ರಾಜಕೀಯ ಮಾಡಲಾಗುತ್ತಿದೆ.
ಇದನ್ನು ನಾವು ಸಹಿಸುವುದಿಲ್ಲ ಎಂದರು.ಪುತ್ಥಳಿ ನಿರ್ಮಾಣ ಮಾಡಲಿ ವಿನಾಃ ಕಾರಣ ನಗರಸಭೆಯ ಹಾಗೂ ತಾಲೂಕಾ ಅಧಿಕಾರಿಗಳು ವಿಳಂಬ ಮಾಡುತ್ತೀದ್ದಿರಿ.ಈಗಾಗಲೇ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ವೇದಿಕೆಯ ಕೂಡಿಸಲಾಗಿದೆ.ಅನಾವರಣ ಮಾತ್ರ ಬಾಕಿ ಇದೆ.
ಬಸವಣ್ಣ ಮೂರ್ತಿ ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹ.ಆದರೆ ಹಲವಾರು ವರ್ಷಗಳಿಂದ ನಮ್ಮ ಸಮಾಜದಿಂದ ಹಲವಾರು ಬಾರಿ ಬೇಡಿಕೆ ಸಲ್ಲಿಸಿದರೂ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.ಆದ್ದರಿಂದ ಕನದಾಸರ ಮೂರ್ತಿ ಸ್ಥಾಪನೆ ಮಾಡುವ ಕಾಮಗಾರಿ ಬೇಗ ಮಾಡಿ ಬಸವಣ್ಣನವರ ಮೂರ್ತಿ ಅನಾವರಣದ ಜತೆಗೆ ಕನಕದಾಸರ ಮೂರ್ತಿ ಅನಾವರಣವಾಗಬೇಕೆಂಬುದು ನಮ್ಮೆಲ್ಲರ ಬಯಕೆಯಿದೆ.
ಒಂದು ವೇಳೆ ವಿಳಂಬ ಮಾಡಿದರೇ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಮರಲಿಂಗ ಕಮರಡಗಿ, ಬಸವರಾಜ ಮದ್ರಿಕಿ,ಸಿದ್ದಲಿಂಗ ಪೂಜಾರಿ,ಮಹಾಲಿಂಗ ಮದ್ರಿಕಿ, ಶರಣು ಪೂಜಾರಿ ತರನಳ್ಳಿ, ಯಲ್ಲಾಲಿಂಗ,ಲಕ್ಷ್ಮಣ.ಎಸ್.ಪಿ, ರಾಯಣ್ಣ ಪೂಜಾರಿ, ಲಿಂಗರಾಜ. ಎಮ್.ಕಮರಡಗಿ ಇತರರು ಇದ್ದರು.