ದೀಪೋತ್ಸವ ಕಾರ್ಯಕ್ರಮ

0
5

ಕಲಬುರಗಿ: ಮನುಷ್ಯನ ಅಂಧಕಾರವನ್ನು ಅಳಿಸಿ ಜ್ಞಾನದ ದೀಪ ಹಚ್ಚಿ ಸರ್ವರ ಬಾಳಲ್ಲಿ ನಂದದ ಆನಂದದ ಜ್ಯೋತಿಯಾಗಿ ಬೆಳಕಾಗುವ ಕಾರ್ಯ ಮಾಡಬೇಕೆಂದು ಶ್ರೀನಿವಾಸ ಸರಡಗಿಯ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ತಾಜ ಸುಲ್ತಾನಪುರ ಗ್ರಾಮದ ಶ್ರೀ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಅಂದಿನ ಶರಣರು, ಮಹಾತ್ಮರು ಹಚ್ಚಿದ ಜ್ಞಾನದ ಜ್ಯೋತಿ ಇಂದಿಗೂ ಪ್ರಜ್ವಲಿಸುತ್ತಿದೆ ಅಂತಹ ಮಹಾತ್ಮರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಆದರ್ಶವಾಗುವ ಕಾರ್ಯ ಮಾಡಬೇಕೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಸಂಸ್ಕಾರದ ಕೊರತೆಯಿರದೆ ನಮ್ಮವರು ಎಂಬ ಭಾವನೆಯೊಂದಿಗೆ ಸರ್ವರು ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡುವ ಹಲವಾರು ಜನರನ್ನು ನೋಡುತ್ತೇವೆ. ಸಮಾಜಕ್ಕೆ ಸಂದೇಶ ನೀಡುವ ಹಿಂದಿನ ಆಚರಣೆ ಇಂದಿನ ಮಕ್ಕಳಿಗೆ ಮಾರ್ಗದರ್ಶನವಾಗುತ್ತವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮೀಣ ಜನರ ಸಂಬಂಧಗಳು ಗಟ್ಟಿಗೊಳಿಸಿ ಸುಂದರ ಸಮಾಜ ನಿರ್ಮಿಸುವ ಕಾರ್ಯ ಪೂಜ್ಯರು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿ ಕಲಾವಿದ ಶ್ರೀ ಗುರುನಾಥ ಹೂಗಾರ ಅವರಿಗೆ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಶರಣಗೌಡ ಪಾಟೀಲ ಪಾಳಾ, ತಾಜಸುಲ್ತಾನಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವಶರಣಪ್ಪ ಹಿರೇಮನಿ, ರೇವಣಸಿದ್ದಯ್ಯ ಹೊಸಮಠ ಆಗಮಿಸಿದರು.ಸಾಹಿತಿಗಳಾದ ಸಂಗಮನಾಥ ನಾಗೂರ ಪ್ರಾರ್ಥಿಸಿದರು. ಗುರುಶಾಂತ ಹಾ೦ವಾ ಸ್ವಾಗತಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ನಿರೂಪಿಸಿದರು. ಚಂದ್ರಶೇಖರ ಜಿ.ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಮಾಳಾ, ವೀರಯ್ಯ ಬಾಳಿ,ನಾಗೇಂದ್ರ ದೇಗಲಮಡ್ಡಿ, ಶರಣಬಸಪ್ಪ ಮಚೆಟ್ಟಿ, ರೇವಣಸಿದ್ದಯ್ಯ ಬೇಲೂರ,ಭೀಮಣ್ಣ ಸರಡಗಿ ಸೇರಿದಂತೆ ಗ್ರಾಮದ ಹಲವಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here