ಕಬ್ಬು ಬೆಳಗೆ ಬೆಲೆ ನಿಗದಿ ಮಾಡಲು ಆಗ್ರಹ

0
13

ಕಲಬುರಗಿ: ಕಬ್ಬು ಕಟಾವಿಗೆ ಬಂದು ತಿಂಗಳು ಕಳೆದರು ಇದುವರೆಗೆ ಆಳಂದ ತಾಲ್ಲೂಕಿನ ಭೂಸನೂರು ಗ್ರಾಮದ ಬಳಿ ಇರುವ ಎನ್.ಎಸ್. ಎಲ್. ಸಕ್ಕರೆ ಕಾರ್ಖಾನೆ ಇದುವರೆಗೆ ಆರಂಭವಾಗಿಲ್ಲವಾದ್ದರಿಂದ ಕಬ್ಬು ಬೆಳೆಗಾರರು ಆತಂಕಗೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಜಿಲ್ಲಾಧ್ಯಕ್ಷ ನಾಗೀಂದ್ರಪ್ಪ ಥಂಬೆ ಹೇಳಿದರು.

ಒಂದು ಟನ್ ಕಬ್ಬಿಗೆ 2400 ರೂ ಮಾತ್ರ ನೀಡುತ್ತಿದ್ದು, ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಎಮ್ ಎಸ್. ಪಿ. ಬೆಲೆ ಪ್ರಕಾರ ಪ್ರತಿ ಟನ್ ಕಬ್ಬಿಗೆ 3600 ರೂಪಾಯಿ ದರ ನಿಗದಿ ಮಾಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಇತ್ತ ಅವಧಿ ಮುಗಿದಿದ್ದರೂ ಇದುವರೆಗೆ ಸಕ್ಕರೆ ಕಾರ್ಖಾನೆ ಆರಂಭವಾಗದೇ ಇರುವುದರಿಂದ ಕಬ್ಬು ಒಣಗುತ್ತಿದ್ದು, ಇದರಿಂದ ಇಳುವರಿ ಕಡಿಮೆಯಾಗಿ ಕಬ್ಬು ಬೆಳೆಗಾರರು ಬೆಲೆ ಕಡಿಮೆ ಜೊತೆಗೆ ಮತ್ತಷ್ಟು ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಬ್ಬಿಗೆ ಬೆಲೆ ಹೆಚ್ಚಳ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಉಮಾಪತಿ ಪಾಟೀಲ, ವಿಜಯಕುಮಾರ ಹತ್ತರಕಿ ಇತರರಿದ್ದರು.

ಈಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆ ಬಂದ್ ಆಗಿರುವುದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಕಟಾವು ಮಾಡಿದ ಕಬ್ಬು ಎಲ್ಲಿಗೆ ಒಯ್ಯಬೇಕು ಎಂಬ ಚಿಂತೆಯಲ್ಲಿದ್ದಾರೆ. ಪ್ರತಿ ಟನ್‍ಗೆ 2,400 ಕೊಡುವುದರಿಂದ ಕಬ್ಬು ಬೆಳೆಗಾರರ ಕುಟುಂಬ ತುಂಬಾ ತೊಂದರೆಯಲ್ಲಿವೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. -ಉಮಾಪತಿ ಪಾಟೀಲ, ಗೌರವಾಧ್ಯಕ್ಷರು, ನಂದೂರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here