ಶಹಾಪುರ: ಮೂಢನಂಬಿಕೆಯಿಂದ ಹೊರಬಂದು ವೈಜ್ಞಾನಿಕತೆಯ ನೆಲೆಗಟ್ಟಿನಲ್ಲಿ ಬದುಕು ನಡೆಸುವುದೇ ಬಸವ ಪಂಚಮಿಯ ಉದ್ದೇಶ ಎಂದು ಯಾದಗಿರಿ ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಅಶೋಕ್ ಗೋಗಿ ಹೊಸಮನಿ ಹೇಳಿದರು.
ಯಾದಗಿರಿ ಜಿಲ್ಲಾ ಮಾನವ ಬಂಧುತ್ವ ವೇದಿಕೆ ವತಿಯಿಂದ ಶಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದಲ್ಲಿ ಹಮ್ಮಿಕೊಂಡಿರುವ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲ್ಲು ನಾಗರನಿಗೆ ಹಾಲೆರೆದು ಹಾಲು ವೇಸ್ಟ್ ಮಾಡುವುದಕ್ಕಿಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಹಾಲು ಉಣಿಸಿದರೆ ಅದುವೇ ಶ್ರೇಷ್ಠ ಕಾಯಕ ಅದುವೇ ಬಸವ ಪಂಚಮಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಬಂಜಾರ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ವಿನೋದ್ ರಾಠೋಡ್,ವೀರಶೈವ ಸಮಾಜದ ಮುಖಂಡರಾದ ಸಂಗನಗೌಡ ಪಾಟೀಲ್, ದಲಿತ ಸೇನೆ ಉಪಾಧ್ಯಕ್ಷರಾದ ರಂಗನಾಥ್ ಹಾಗೂ ಬಸ್ಸು ನಾಟೇಕಾರ್ ಅಲ್ಲದೆ ದಲಿತ ಸೇನೆಯ ಪದಾಧಿಕಾರಿಗಳು ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.