ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯವಿಲ್ಲ

0
80

ಕಲಬುರಗಿ:  ಬೆಳಗಾವಿ ಜಿಲ್ಲೆಯ ನಿಪ್ಪಾನಿಯಲ್ಲಿ ಮಾನವ ಬಂಧುತ್ವ ವೇದಿಕೆವತಿಯಿಂದ ಆಯೋಜಿಸಿದ ” ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ” ಎಂಬ ಕಾರ್ಯಕ್ರಮದಲ್ಲಿ ಮಾನ್ಯ ಸತೀಶ್ ಜಾರಕಿಹೊಳಿ ಅವರು ” ಹಿಂದು ” ಪದದ ಕುರಿತು ಆಡಿರುವ ಮಾತು ಸತ್ಯ ಹಾಗೂ ದಾಖಲೆ ಸಹಿತವಾಗಿರುವುದರಿಂದ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಜನತೆ ಕ್ಷಮೆ ಕೇಳುವ ಮಾತೆ ಇಲ್ಲ. ಅವರು ತಮ್ಮ ಶಾಸಕ ಸ್ಥಾನ ರಾಜಿನಾಮೆ ಕೊಡುವ ಅವಶ್ಯಕತೆ ಬರಲ್ಲ ಎಂದು ಮಾನವ ಬಂದುತ್ವ ವೇದಿಕೆಯ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ನ್ಯಾಯವಾದಿ ಶ್ರಾವಣ ಮೊಸಲಗಿ ಹೇಳಿಕೆಗೆ ಬೆಂಬಲಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾನ್ಯ ಸತೀಶ್ ಜಾರಕಿಹೊಳಿ ಅವರು ಒಬ್ಬ ಈ ರಾಜ್ಯಕಂಡ ಪ್ರಬುದ್ಧ ರಾಜಕಾರಣಿಗಲ್ಲಿ ಅವರು ಒಬ್ಬರು ಹಾಗೂ ಅವರೊಬ್ಬ ಪ್ರಗತಿಪರ ರಾಜಕಾರಣಿ ಇಂಥವರು ರಾಜಕೀಯದಲ್ಲಿ ಇರುವುದು ಇಂದು ತುಂಬಾ ಅವಶ್ಯಕತೆ ಇದೆ ಜಾರಕಿಹೊಳಿ ಅವರು ಸೂಮಾರು ವರ್ಷಗಳಿಂದ ಈ ರಾಜ್ಯದಲ್ಲಿ ಅನೇಕ ಕಡೆ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಇಟ್ಟುಕೊಂಡು ವಿಶಿಷ್ಟ ಕಾರ್ಯಕ್ರಮಗಳನ್ನು ಮಾಡುತ್ತ ರಾಜ್ಯದ ಪ್ರತಿ ಮನೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಹಾಗೂ ಇನ್ನೂ ಅನೇಕ ಮಹಾನ ವ್ಯಕ್ತಿಗಳ ಚಿಂತನೆಯು ಬಿತ್ತುವಂತ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಇಲ್ಲಿ ಬ್ರಾಹ್ಮಣರು, ಲಿಂಗಾಯತರು ಜೈನರು, ಸಿಖ್ಖರು ಎಲ್ಲರೂ ತಮ್ಮ ತಮ್ಮ ಧರ್ಮ ಜಾತಿ ಸೂಚಕ ನಾಮಗಳಿಂದ ಕರೆಸಿಕೊಳ್ಳುತ್ತಾರೆ ಯಾಕೆಂದರೆ ಇವೆಲ್ಲವೂ ಸ್ವತಂತ್ರ ಧರ್ಮಗಳಾಗಿವೆ ಹೀಗಿರುವಾಗ ನಿಜವಾದ ಹಿಂದೂಗಳು ಯಾರು…?? ಈ ಹಿಂದು ಎನ್ನುವುದು ಕೆವಲ ಹಿಂದುಳಿದ ಹಾಗೂ ಶೂದ್ರರಿಗೆ ಬಳಸುವ ಪದವಾಗಿವೆ ಹಿಂದು ಶಬ್ದ ಅರ್ಥ ಕೂಡ ಅಷ್ಟೇ ಅಪಮಾನಕವಾಗಿದೆ ಈ ಹಿಂದೆ ಮಹಾನ ಪುರುಷ ನೀಡಿದ ದಾಖಲೆ ಹಾಗೂ ಉಲ್ಲೇಖವನ್ನು ಇಂದು ಜಾರಕಿಹೊಳಿ ಅವರು ಹೇಳಿದ್ದಾರೆ.

ದೇಶದ RSS ಬಿಜೆಪಿ ಜಾತಿ, ಧರ್ಮ ಮೇಲೆ ಕೋಮು ರಾಜಕೀಯ ಮಾಡುತ್ತಿದೆ ಎಲ್ಲರ ಮದ್ಯ ಅಸುಹೆ, ವೈಮನುಸ್ಸು ಮನೆಮಾಡಿದೆ ಅದಕ್ಕೆ ಇಂದು ದೇಶದಕ್ಕೆ ರಾಜ್ಯಕ್ಕೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಅಂತವರ ಚಿಂತನೆಗಳು ಬೇಕಾಗಿವೆ. ಕೇವಲ ಕೆಲವೇ ಜನರ ಹಾಗೂ ಒಂದು ಸಮುದಾಯಕ್ಕೆ ಖುಷಿ ಪಡೆಸಲು ಹಾಗೂ ಕೆಲವರ ತಾಳಕ್ಕೆ ತಕ್ಕಂತೆ ಕುಣಿಯುವವರು ಬದ್ದತೆ ಇಲ್ಲದವರು ಇಂದು ಜಾರಕಿಹೊಳಿ ಅವರ ಮಾತುಗಳಲ್ಲಿ ಇಲ್ಲದ ವಿವಾದವನ್ನು ಸೃಷ್ಟಿಮಾಡಿ ಮತ್ತೆ ಧರ್ಮದ ಹೆಸರನಲ್ಲಿ ಅಧರ್ಮದ ರಾಜಕೀಯ ಮಾಡುತ್ತಿದ್ದಾರೆ.

ಮಾನ್ಯ ಸತೀಶ್ ಜಾರಕಿಹೊಳಿ ಅವರು ಯಾರಿಗೂ ಕ್ಷಮೆ ಕೇಳುವುದು ಅಥವಾ ರಾಜಿನಾಮೆ ನೀಡುವುದು ಅವಶ್ಯಕತೆ ಇಲ್ಲ. ಈ ನಾಡಿನ ದೇಶದ ಪ್ರಗತಿಪರ ಚಿಂತಕರು ಸಮಾನ ಮನಸ್ಕರರು ಜಾರಕಿಹೊಳಿ ಪರವಾಗಿದ್ದಾರೆ ಅವರ ಜೊತೆ ನಿಲ್ಲಲ್ಲಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here