ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕೋಡ್ಲಿ ಕಿಸಾನ್ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಆವರಣದಲ್ಲಿ ಕಡಲೆ ಬೆಳೆ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಐಸಿಎಆರ್-ಕೃಷಿ ಕೇಂದ್ರ, ಕಲಬುರಗಿಯ ಮಣ್ಣು ವಿಜ್ಞಾನಿಯವರಾದ ಡಾ. ಶ್ರೀನಿವಾಸ ಬಿ.ವಿ, ರವರು ರೈತರಿಗೆ ಕಡಲೆ ಬೆಳೆಯಲ್ಲಿ ವೈಜ್ಞಾನಿಕವಾಗಿ ಕೈಗೊಳ್ಳಬಹುದಾದ ತಾಂತ್ರಿಕತೆಗಳನ್ನು ವಿವರಿಸಿದರು. ಮುಖ್ಯವಾಗಿ sಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಮುಂದುವರೆದು, ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಗಂಧಕದ ಕೊರತೆಯು ತೀವ್ರವಾಗಿದ್ದು ಬೆಳೆಯ ಮೇಲೆ ಪರಿಣಾಮ ಬೀರುವುದರಿಂದ ಮಣ್ಣು ಪರೀಕ್ಷೆ ವರದಿ ಆಧಾರದ ಮೇಲೆ ಗಂಧಕವನ್ನು ಬಳಸುವುದರಿಂದ ಹಾನಿಯನ್ನು ತಪ್ಪಿಸಬಹುದೆಂದರು ನಂತರ ವಿವಿಧ ಬೆಳೆಗಳ ಕ್ಷೇತ್ರ ಭೇಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಮಾಹಿತಿಗಳ ಕುರಿತು ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಆಳಂದ ರಸ್ತೆ, ಕಲಬುರಗಿಗೆ ಸಂಪರ್ಕಿಸುವಂತೆ ತಿಳಿಸಿದರು.