ಕೇಂದ್ರ ಕಾರಾಗೃಹ ಖೈದಿಗಳಿಗೆ ಉಚಿತ ಕಣ್ಣಿನ ಆರೋಗ್ಯ ತಪಾಸಣೆ

0
109

ಕಲಬುರಗಿ: ಬುಧುವಾರ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಇವರುಗಳ ಸಂಯುಕ್ತಾಶ್ರಯದಲ್ಲಿ “ಕಾನೂನು ಸೇವೆಗಳ ಪ್ರಾಧಿಕಾರ ದಿನ, ಅಂಗವಾಗಿ” ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರವನ್ನು ಅಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಗೌ. .ಕೆ.ಬಿ. ಪಾಟೀಲ್, ಕಾನೂನು ಹಾಗೂ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಇದರ ಅಡಿಯಲ್ಲಿ ಪ್ರತಿಯೊಬ್ಬರು ಉತ್ತಮ ಜೀವನ ನಡೆಸುವ ಕೊಂಡಿಯಾದ (ಬೆಳಕು) ಪ್ರಜ್ವಲ ಜ್ಯೋತಿಯನ್ನು ಬೆಳೆಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Contact Your\'s Advertisement; 9902492681

ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ದೊರಕಲಿ ಎಂಬ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದ್ದು, ತಮಗೆ ಎಲ್ಲಾ ರೀತಿಯಲ್ಲಿ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸದಾ ಕಾಲ ಕಾರ್ಯ ಪ್ರವೃತ್ತಿಯಾಗಿ ಸೇವೆಯನ್ನು ನೀಡಲಾಗುತ್ತಿದೆ. ಅದು ಅಲ್ಲದೇ ತಮಗೆ ನ್ಯಾಯದ ಜೊತೆಗೆ ಆರೋಗ್ಯವು ಕೂಡ ಮುಖ್ಯವಾಗಿದೆ. ಹಾಗಾಗಿ ಕಾನೂನು ಸೇವೆಗಳ ಪ್ರಾಧಿಕಾರದ ದಿನದಂದು ತಮಗೆ ಆರೋಗ್ಯ ಇಲಾಖೆ ಸಹಾಯದೊಂದಿಗೆ ಉಚಿತವಾಗಿ ನೇತ್ರ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾವುಗಳು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ನ್ಯಾಯವಾದಿಗಳ ಸಂಘ ಅದ್ಯಕ್ಷ ರಾಜಕುಮಾರ ಕಡಗಂಚಿ ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಉಚಿತ ಸೇವೆ ಮತ್ತು ಸೌಲಭ್ಯಗಳನ್ನು ತಾವುಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಕುಷ್ಟ ರೋಗ ನಿರ್ಮೂ¯ನಾ ಅಧಿಕಾರಿ ರಾಜಕುಮಾರ ಕುಲಕರ್ಣಿ ಮಾತನಾಡಿ, ಆರೋಗ್ಯ ಇಲಾಖೆ ವತಿಯಿಂದ ತಮಗೆ ಉಚಿತ ನೇತ್ರ ತಪಾಸಣೆ ಮಾಡಿ ಕನ್ನಡಕವನ್ನು ನೀಡುತ್ತೇವೆ ಮತ್ತು ಉಚಿತವಾಗಿ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಲಾಗುತ್ತಿದೆ. ಅದು ಅಲ್ಲದೇ ತಾವುಗಳು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5.00 ಲಕ್ಷದ ವರೆಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ತಾವು ಆಧಾರ್ ಕಾರ್ಡ, ಬಿ.ಪಿ.ಎಲ್. ಕಾರ್ಡಗಳನ್ನು ತಮ್ಮ ಕಾರಾಗೃಹ ಅಧಿಕಾರಿ ವೃಂದದವರಿಗೆ ನೀಡಿದಲ್ಲಿ ನಾವುಗಳು ಅವರ ಮುಖಾಂತರ ಮಾಹಿತಿಯನ್ನು ಪಡೆದುಕೊಂಡು ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಅಧೀಕ್ಷಕ  ಡಾ. ಪಿ. ರಂಗನಾಥ್, ಮಾತನಾಡುತ್ತಾ, ಕಾರಾಗೃಹದ ಬಂದಿ ನಿವಾಸಿಗಳಿಗೆ ಸರ್ಕಾರ ಹಾಗೂ ಎನ್.ಜಿ.ಓ ಗಳ ಅಡಿ ಬರುವ ಎಲ್ಲಾ ಇಲಾಖೆಗಳ ಉಚಿತ ಸೌಲಭ್ಯಗಳನ್ನು ಬಂದಿ ನಿವಾಸಿಗಳಿಗೆ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.

ಉದಾ:- ಜನ ಶಿಕ್ಷಣ ಸಂಸ್ಥಾನ್ ಗುಲಬರ್ಗಾ ರವರ ಮುಖಾಂತರ ಉಚಿತವಾಗಿ ಬಂದಿಗಳಿಗೆ ಎಲೆಕ್ಟ್ರೀಶಿಯನ್, ಡ್ರಸ್ ಮೇಕರ್ ಹಾಗೂ ಲೋಕ ಶಿಕ್ಷಣ ಇಲಾಖೆ ವತಿಯಿಂದ ಅನಕ್ಷರಸ್ಥರಿಗೆ ಕಲಿಕಾ ಕೇಂದ್ರಗಳ ಮುಖಾಂತರ ಅಕ್ಷರ ಅಭ್ಯಾಸವನ್ನು ನೀಡಲಾಗುತ್ತಿದೆ.

ಅದು ಅಲ್ಲದೇ ಅನೇಕ ಸೌಲಭ್ಯಗಳನ್ನು ಬಂದಿ ನಿವಾಸಿಗಳಿಗೆ ನೀಡುವುದಕ್ಕೆ ಆಧಾರ್ ಕಾರ್ಡ ಒದಗಿಸಿ ಕೊಡುವಲ್ಲಿ ತೊಡಕಾಗುತ್ತಿದೆ. ಅದಕ್ಕಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ, ಬಂದಿ ನಿವಾಸಿಗಳು ಆಧಾರ್ ಕಾರ್ಡ ಹೊಂದಿಸಿ ಕೊಡುವಲ್ಲಿ ಅಸಮರ್ಥರಾಗುತ್ತಾರೆ. ಆದಕಾರಣ ತಾವುಗಳು ಕಾರಾಗೃಹ ಇಲಾಖೆ ನೀಡುವ ವಿಚಾರಣಾ ಮತ್ತು ಶಿಕ್ಷಾ ಬಂದಿಗಳ ನ್ಯಾಮಿನಲ್ ರೂಲ್ ವಿವರಣಾ ಪಟ್ಟಿಯನ್ನು ನೀಡಲಾಗುತ್ತದೆ. ಅದನ್ನು ತಾವುಗಳು ಮಾನ್ಯ ಮಾಡಿದ್ದಲ್ಲಿ ತಮ್ಮ ಇಲಾಖೆಯ ಯೋಜನೆಗಳನ್ನು ಯಥಾವತ್ತಾಗಿ ಬಂದಿ ನಿವಾಸಿಗಳಿಗೆ ಒದಗಿಸಿ ಒಬ್ಬ ಸಮಾಜ ಮುಖಿಯಾಗಿ ಕೆಲಸವನ್ನು ಮಾಡುವಂತೆ ತಯಾರು ಮಾಡಿ ಸ್ವಾವಲಂಬಿ ಬದುಕಿಗೆ ಉತ್ತಮ ಅಡಿಪಾಯವನ್ನು ಹಾಕಿಕೊಡಲಾಗುವುದೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಗೌ. ನ್ಯಾಯಾಧೀಶರಾದ ಸುಶಾಂತ್ ಚೌಗಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ, ಪಿ.ಎನ್. ಕಪನೂರ್ ಕಾರ್ಯದರ್ಶಿಗಳು, ಗುಲಬರ್ಗಾ ನ್ಯಾಯವಾದಿಗಳ ಸಂಘ, ಡಾ. ಬಸವರಾಜ ಕಿರಣಗಿ, ಸಹಾಯಕ ಅಧೀಕ್ಷಕರಾದ ಹುಸೇನಿ ಪೀರ್, ಕೆ.ಎಸ್.ಐ.ಎಸ್.ಎಫ್. ಕೆ. ಮಾರನೂರ. ಬಾಬು ಗುತ್ತೇದರ್, ಜೈಲರ್ ವೃಂದ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಸ್ವಾಗತ ಕಾರ್ಯಕ್ರಮದ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿದ  ವಿ.ಕೃಷ್ಣಮೂರ್ತಿ, ಸಹಾಯಕ ಅಧೀಕ್ಷಕರು, ಕೇಂದ್ರ ಕಾರಾಗೃಹ ಮಾತನಾಡುತ್ತಾ, ಈ ಸಂಸ್ಥೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಬಂದಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಸದಾ ಕಾಲ ಅವರಲ್ಲಿ ಬೆಳೆಸುವ ಪ್ರಯತ್ನ ನಿರಂತರವಾಗಿ ನಡೆಸಲಾಗುತ್ತಿದೆ.

ಉದಾ:- ಶಿಕ್ಷಾ ಬಂದಿಯಾದ ಬಸವರಾಜ ಈತನಿಗೆ ರಕ್ತದ ಅವಶ್ಯಕತೆ ಬಿದ್ದಾಗ ನಮ್ಮ ಸಿಬ್ಬಂದಿ ವೀಕ್ಷಕರಾದ  ರಂಗಣ್ಣ ಎಂಬುವವರು ತಮ್ಮ ರಕ್ತವನ್ನು ನೀಡಿ ಬಂದಿಯ ಜೀವವನ್ನು ಉಳಿಸಿದ್ದಾರೆ. ಅದು ಅಲ್ಲದೇ ಬಂದಿ ನಿವಾಸಿಗಳಲ್ಲಿ ಅನೇಕ ಅಯಾಮಗಳಲ್ಲಿ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ಕುಟುಂಬ ಹಾಗೂ ಸಮಾಜದ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಳ್ಳುವಂತಹ ಮಾನವೀಯ ಉತ್ತಮ ಮೌಲ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರಾಗೃಹದ ಸಿಬ್ಬಂದಿಯಾದ  ರಂಗಣ್ಣ ವೀಕ್ಷಕ ಇವರಿಗೆ ಗೌ. .ಕೆ.ಬಿ. ಪಾಟೀಲ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಂದಿಯ ಜೀವ ಉಳಿಸಿದ್ದಕ್ಕಾಗಿ ಸನ್ಮಾನಿಸಿದರು. ಆರೋಗ್ಯ ಇಲಾಖೆ ವತಿಯಿಂದ ಕಾರಾಗೃಹದ ಬಂದಿ ನಿವಾಸಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. (ಪುರುಷ 94 ಸಂಖ್ಯೆ ಹಾಗೂ ಮಹಿಳಾ 21 ಸಂಖ್ಯೆ ಒಟ್ಟು 115 ಸಂಖ್ಯೆ)

ಕಾರ್ಯಕ್ರಮದ ನಿರೂಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ  ನಾಗಾರಾಜ ಮುಲಗೆ ನೇರವೆರಿಸಿದರು. ಪ್ರಾರ್ಥಾನಾ ಗೀತೆಯನ್ನು ಶಿಕ್ಷಾ ಬಂದಿಗಳು ಹಾಡಿದರು. ವಂದನಾರ್ಪಣೆಯನ್ನು ಮತಿ ಮಹಾದೇವಿ, ಸೈಕ್ಯಾಟ್ರಿಕ್ ಕೌನ್ಸಲರ್, ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here