ಕೊಳ್ಳುರ್ ಸೇತುವೆಗೆ ಶಾಸಕ ಮುದ್ನಾಳ ಭೇಟಿ ಪರಿಶೀಲನೆ

0
117

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಳ್ಳುರ್ ಕೃಷ್ಣಾ ನದಿಗೆ ನಿರ್ಮಾಣ ಮಾಡಿರುವ ಸೇತುವೆಗೆ ರವಿವಾರ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ ನೀಡಿ ನದಿಯ ಪ್ರವಾಹವನ್ನು ವಿಕ್ಷೀಸಿದರು.

ಕೊಳ್ಳುರ್ ಸೇತುವೆ ಮೇಲೆ ಇರುವ ತಗ್ಗು ಗುಂಡೆಗಳನ್ನು ಗಮನಿಸಿ ಶಾಸಕರು ಕೆಬಿಜೆಎನ್ಎಲ್ ಅಧಿಕಾರಿಗಳು ಸೇತುವೆಗೆ ಬಂದಾಗ ನೀವು ಏನು ನೋಡುತ್ತಿರಿ ಏನು ಕೆಲಸ ಮಾಡುತ್ತಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸೇತುವೆ ಸುರಕ್ಷತೆವಾಗಿ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿದರು.

Contact Your\'s Advertisement; 9902492681

ನಂತರ ಶಾಸಕರು ನದಿ ತೀರದ ಗ್ರಾಮಗಳಾದ ಕೊಳ್ಳುರ್, ಟೊನ್ನೂರು, ಮರಕಲ್, ಯಕ್ಷಂತಿ, ತುಮಕೂರ್ ಗ್ರಾಮಗಳಿಗೆ ಭೇಟಿ ನೀಡಿ ಕೃಷ್ಣಾ ನದಿ ಪ್ರವಾಹದಿಂದ ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿರುವುದರಿಂದ ಬೆಳೆ ನಾಶ ವಾಗಿರುವುದನ್ನು ವಿಕ್ಷೀಸಿ ರೈತರಿಂದ ಮಾಹಿತಿ ಪಡೆದು ಸ್ಥಳದಲ್ಲಿಯೇ ಇದ್ದ ಕಂದಾಯ ಅಧಿಕಾರಿಗಳಿಗೆ ಬೆಳೆ ಹಾನಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನೀಡಲು ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಈಗಾಗಲೇ ಕೃಷ್ಣಾ ನದಿ ಪ್ರವಾಹ ನಿರೀಕ್ಷೆಗೆ ಮೀರಿ ಅಪಾರ ಮಟ್ಟದಲ್ಲಿ ಕಾಣುತ್ತಿದ್ದೇವೆ ಇದರಿಂದ ಹಲವಾರು ಗ್ರಾಮಗಳ ರೈತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಸಂಭವವಿದೆ. ಭಾಗದಲ್ಲಿ ಜನರಿಗಾಗಿ ಗಂಜಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಬೇಕೆಂದು ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮನವಿ ಮಾಡುತ್ತೇನೆ ಎಂದು ತಿಳಿಸಿದರು.

15 ದಿನಗಳ ನಂತರ ಕಂದಾಯ ಅಧಿಕಾರಿಗಳು ಬೆಳೆ ಹಾನಿ ಸಮಗ್ರ ಮಾಹಿತಿ ನೀಡಿದ ಮೇಲೆ ನಾನೇ ಖುದ್ದಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸರೆಡ್ಡಿ ಪಾಟೀಲ್ ಚನ್ನೂರ್, ಸಿದ್ದಣಗೌಡ ಕಾಡಂನೋರ್, ಚಂದ್ರಶೇಖರ ಮರಕಲ್, ಚನ್ನಾರೆಡ್ಡಿ ಮದರಕಲ್, ಶಾಂತಪ್ಪ ಗೊಂದೆನೂರ್, ಹಣಮಂತ ಇಟಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here