ಸಮಾಜವಾದಿ ಪಕ್ಷದ ಪುನಶ್ಚೇತನ | ಸದಸ್ಯತ್ವ ಅಭಿಯಾನ

0
56

ಕಲಬುರಗಿ: ಸಮಾಜವಾದಿ ಪಕ್ಷದ ಪುನಶ್ಚೇತನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪಕ್ಷವನ್ನು ಮತ್ತೆ ಬಲಪಡಿಸಲಾಗುವುದು ಎಂದು ಪಕ್ಚದ ರಾಜ್ಯಾಧ್ಯಕ್ಷ ಎನ್. ಮಂಜಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ. ಸೆಪ್ಟೆಂಬರ್ 29 2022ರಂದು ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರ್ ಆಯ್ಕೆಗೊಂಡ ಅಖಿಲೇಶ್ ಯಾದವ್ ಅವರನ್ನು ಈ ಭಾಗದ ಮತ್ತು ರಾಜ್ಯದ ಸಮಾಜವಾದಿ ಪಾರ್ಟಿಯ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಸಮಾಜವಾದಿ ಪಾರ್ಟಿಯ ಸಂಸ್ಥಾಪಕರಾದ ದಿವಂಗತ ಮುಲಾಯಂ ಸಿಂಗ್ ಯಾದವ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಸಮಾಜವಾದಿ ಪಾರ್ಟಿಯ ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿಗಳನ್ನು ಡಿಸೆಂಬರ್ 15ನೇ ತಾರೀಖಿನ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಬಹಳ ಚುರುಕಿನಿಂದ ನಡೆಯುತ್ತಿದ್ದು ರಾಜ್ಯದಾದ್ಯಂತ 11,000 ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಸಮಾಜವಾದಿ ಪಾರ್ಟಿಯ ವತಿಯಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಇದರ ಉದ್ಘಾಟನೆಯನ್ನು ರಾಜ್ಯದ ಉಸ್ತುವಾರಿಗಳಾದ ರಾಜುರಾಯ ಅವರು ನಡೆಸಲಿದ್ದಾರೆ. ರಾಜ್ಯದ ಹತ್ತು ಹಲವಾರು ಸಮಸ್ಯೆಗಳನ್ನು ಹೊತ್ತುಕೊಂಡು ಬಸವಕಲ್ಯಾಣದಿಂದ ಬೆಂಗಳೂರು ವರೆಗೆ ಸೈಕಲ್ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ಸುಮಾರು 50 ಜನ ಸಮಾಜವಾದಿ ಪಾರ್ಟಿಯ ಯುವ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಈ ಭಾಗದ ಜನ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಕೋರಿದರು.

ಮುಂದುವರೆದು ಮಾತನಾಡುತ್ತಾ ಇಂದಿನ ರಾಜ್ಯ, ದೇಶದಲ್ಲಿ ಬೆಲೆಗಳ ಏರಿಕೆ, ರೈತರ ಸಂಕಷ್ಟದಲ್ಲಿರುವುದು, ನಿರುದ್ಯೋಗ, ಜನರ ಜೀವನ ನಡೆಸುವುದು ತುಂಬಾ ದುಸ್ತಾರವಾಗಿದೆ ರಾಜ್ಯದಲ್ಲಿ ಈ ಎಲ್ಲಾ ಸಮಸ್ಯೆಗಳ ಈ ಎಲ್ಲಾ ಸಮಸ್ಯೆಗಳನ್ನು ಹೊತ್ತು ರಾಜ್ಯ ಸರ್ಕಾರದ ವಿರುದ್ಧವಾಗಿ ಪ್ರತಿಭಟನೆ ಮಾಡಲಾಗುವುದು, ಬೆಂಗಳೂರಿನಲ್ಲಿ ಕೊನೆಯ ದಿನ ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇವತ್ತು ದೇಶದಲ್ಲಿ ರಾಜ್ಯದಲ್ಲಿ ಸಮಾಜವಾದಿ ಸಿದ್ಧಾಂತ ಮತ್ತು ಸಮಾಜವಾದಿ ಪಾರ್ಟಿಯನ್ನು ಹಾಗೂ ನಮ್ಮ ರಾಷ್ಟ್ರ ನಾಯಕರಾದ ಅಖಿಲೇಶ್ ಯಾದವ್ ಅವರ ನಾಯಕತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಬಹಳಷ್ಟು ಜನ ಸೇರಲಿದ್ದಾರೆ ದೇಶದ ಮತ್ತು ಈ ನಾಡಿನ ಜನ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ ಸಮಾಜವಾದಿಯತ್ತ ಮುಖ ಮಾಡಿರುವುದು ಸ್ವಾಗತ ತಮ್ಮ ಈ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರುಗಳಿಗೆ ಮತ್ತು ಸಮಾಜವಾದಿ ಪಾರ್ಟಿಯಲ್ಲಿ ನಂಬಿಕೆ ಉಳ್ಳ ವರು ಪಕ್ಷ ಸೇರಿಕೊಳ್ಳಲು ಮುಕ್ತ ಅವಕಾಶವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವು ಸ್ಪರ್ಧೆ ಮಾಡಲಿದ್ದು ಉತ್ತಮ ಫಲಿತಾಂಶವನ್ನು ಪಡೆಯಲಿದೆ ಎಂದು ತಿಳಿಸಿದರು, ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿಕ್ಕೆ ಪಕ್ಷದ ಕಾರ್ಯಕರ್ತರುಗಳು ಪಕ್ಷದ ಎಲ್ಲಾ ಪದಾಧಿಕಾರಿಗಳು ಮತ್ತು ಹಿತೈಷಿಗಳು ಶ್ರಮವಹಿಸಿ ಕೆಲಸಾ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು, ಕರ್ನಾಟಕ ಸಮಾಜವಾದಿ ಪಾರ್ಟಿಯ ಪ್ರಚಾರಕ್ಕೆ ಮತ್ತು ಸಮಾಜವಾದಿ ಸಮಾವೇಶಗಳನ್ನು ಮಾಡಲು ಉದ್ದೇಶಿಸಿದ್ದು ಈ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಶ್ ಯಾದವ್ ಅವರು ಕರ್ನಾಟಕದ ರಾಜ್ಯದಾದ್ಯಂತ ಪ್ರವಾಸ ಮಾಡಿ ಈ ಸಭೆ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಮಂಡಳಿಯಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ ‘ಸರ್ವರು ಸಮಾನರು ‘ಸಮ ಬಾಳು ಸಮ ಪಾಲು ” ಸಮ ಸಮಾಜ ನಿರ್ಮಾಣ ಮಾಡಲು ಸಮಾಜವಾದಿ ಸರ್ಕಾರಗಳನ್ನು ರಚನೆ ಮಾಡಲು ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಎಲ್ಲಾ ಕಾರ್ಯಕರ್ತರದ್ದಾಗಿದೆ ಎಂದು ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಜಿಲ್ಲಾ ಅಧ್ಯಕ್ಷ ಸಿದ್ದು ಪಾಟೀಲ್ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here