ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪೂರ್ವಿಕಾ ಗೋನಿಗೆ ಪ್ರಥಮ ಸ್ಥಾನ

0
45

ಕಲಬುರಗಿ,ನ.10: ಬೆಂಗಳೂರಿನಲ್ಲಿ ಕಳೆದ‌ ನವೆಂಬರ್ 5 ಮತ್ತು 6 ರಂದು ನಡೆದ 13ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ 13 ವರ್ಷದೊಳಗಿನ 50ಕೆ.ಜಿ ಕುಮಿತೆ ವಿಭಾಗದಲ್ಲಿ ಕಲಬುರಗಿ-ಸೇಡಂ ರಸ್ತೆಯ ಎಸ್.ಅರ್.ಎನ್.ಮೆಹತಾ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿಕಾ ಗೋನಿ ಅವರು ಪ್ರಥಮ ಸ್ಥಾನ ಪಡೆದು ನವದೆಹಲಿಯಲ್ಲಿ ಮುಂದೆ ಜರುಗುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಆಡಳಿತಾಧಿಕಾರಿ ಚಕೋರ‌ ಮೆಹತಾ, ಪ್ರಾಚಾರ್ಯ ರಾಜಶೇಖರ ರೆಡ್ಡಿ, ಕರಾಟೆ ತರಬೇತುದಾರ ಕಾಶಿನಾಥ ಗೌಳಿ ಸೇರಿದಂತೆ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here