ಜಗಧ ಮಗನಾದ ಶರಣಬಸವರು

0
62

ಶರಣರು ಕಲ್ಯಾಣದತ್ತ ಹೊರಟಾಗ ಹಣ್ಣು ಹಣ್ಣಾದ ಮುದುಕಿಯ ಹೊಟ್ಟೆಯಲ್ಲಿರುವ ಗಡ್ಡೆ ಕರಗಿಸಿದಾಗ ಆ ಮುದುಕಿಯು ಶರಣರಿಗೆ ಜಗಧಮಗ ನೀನು ನನ್ನಪ್ಪ ಎಂದು ಅವರ ಪಾದಕ್ಕೆ ನಮಸ್ಕರಿಸುತ್ತಾಳೆ ಎಂದು ಕಲಬುರಗಿಯ ಎಮ್‌ಎಸ್‌ಐ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ.ಸೋಮಶಂಕ್ರಯ್ಯ ವಿಶ್ವನಾಥಮಠ ಶರಣರ ಲೀಲೆಗಳನ್ನು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ನೋವು ನಿವಾರಿಸಿದ ಶರಣರನ್ನು ಭೇಟಿಯಾದ ಮುದುಕಿಯು ’ಯಪ್ಪಾ ನಮ್ಮಂತವರಿಗಾಗಿ ಹುಟ್ಟಿ ಬಂದಿಯಪ್ಪಾ ನನ್ನಂತ ಸಾವಿರಾರು ನಿರ್ಗತಿಕರು ನಿನಗಾಗಿ ಕಾಯುತ್ತಿದ್ದಾರೆ. ಎಂದು ಹೇಳುತ್ತಾಳೆ.

Contact Your\'s Advertisement; 9902492681

ಶರಣಬಸವರು ಭೀಮಾನದಿಯ ತೀರಕ್ಕೆ ಬಂದಾಗ ಭೀಮೆ ತುಂಬಿ ಹರಿಯುತ್ತಿರುತ್ತದೆ. ಅಲ್ಲಿರುವ ಅಂಬಿಗರಿಗೆ ಕರೆದು ಆ ಕಡೆ ಮುಟ್ಟಿಸಿರೆಪ್ಪಾ ಎಂದಾಗ ಅವರು ಅದ್ಹೇಗೆ ಸಾಧ್ಯ ? ದಸಾಯಬೇಕಾ ? ಎಂದು ಶರಣರಿಗೆ ಮರುಪ್ರಶ್ನೆ ಹಾಕುತ್ತಾರೆ. ಆಗ ಶರಣರು ತುಂಬಿ ಭೋರ್ಗರೆಯುತ್ತಿರುವ ಆ ಭೀಮೆತಾಯಿಯ ಎದುರಿಗೆ ನಿಂತು ’ ತಾಯಿ ದಾರಿ ಕೊಟ್ಟರೆ ಮುಂದಕ್ಕೆ ಹೋಗುವೆ’ ಎನ್ನಲು ನದಿ ಶಾಂತಗೊಳ್ಳುತ್ತದೆ. ತನ್ನ ಹೆಗಲ ಮೇಲಿರುವ ಕಂಬಳಿ ಆ ನದಿಯ ನೀರಿನ ಮೇಲೆ ಹಾಸಿದ ಶರಣರು ಅದ ಮೇಲೆ ಕುಳಿತು ನಿರ್ಭಯವಾಗಿ ರಾಮಜೀದಾದರೊಂದಿಗೆ ಹೋಗುತ್ತಾರೆ. ದೋಣಿ ನಡೆದ ಹಾಗೆ ಕಂಬಳಿ ನಡೆದಿದೆ. ಅಲ್ಲಿ ಸುತ್ತಮುತ್ತ ನೆರೆದವರೆಲ್ಲ ಆ ದೃಶ್ಯ ನೋಡಿ ಗಾಬರಿ ಆಗುತ್ತಾರೆ. ಶರಣರು ದಡಕ್ಕೆ ಬಂದು ಭೀಮೆಗೆ ನಮಸ್ಕರಿಸುತ್ತಾರೆ. ಅಲ್ಲಿದ್ದ ಅಂಬಿಗರು ಓಡೋಡಿ ಬಂದು ಶರಣರ ಪಾದಕ್ಕೆ ಬಾಗುತ್ತಾರೆ.

ಕಲ್ಯಾಣದತ್ತ ಹೊರಟ ಶರಣಬಸವರು ಬೆಳಗುಂಪಿಯ ಮಠದಲ್ಲಿ ಅನುಭಾವ ಗೋಷ್ಠಿ ನಡೆಸುತ್ತಿರುತ್ತಾರೆ. ಅಲ್ಲಿದ್ದ ಕಬ್ಬಲಿಗರ ನಾಗಪ್ಪ ಎನ್ನುವ ಭಕ್ತನೊರ್ವ ಕಿವಿಯ ನೋವಿನಿಂದ ಅಳುತ್ತಿದ್ದಾಗ ಶರಣರು ಅವನಲ್ಲಿ ಬಂದು ಕೇಳುತ್ತಾರೆ. ಆಗ ಅವನು ತನ್ನ ನೋವನ್ನು ಅವರಿಗೆ ಹೇಳಿದಾಗ ಶರಣರು ತಮ್ಮ ಇಷ್ಟಲಿಂಗದ ನೀರನ್ನು ಆತನ ಕಿವಿಯೊಳಗೆ ಹಾಕಿದಾಗ ಕಿವಿಯ ಬೇನೆ ಅಳಿದು ಹೋಗುತ್ತದೆ. ಒಂದು ದಿನ ಕೋಬಾಳದ ಗುಡಿಯೊಂದರ ಕಟ್ಟೆಯ ಮೇಲೆ ಶರಣರು ಕುಳಿತಾಗ ಹೆಣ್ಣುಮಗಳೊಬ್ಬಳು ಚೀರುತ್ತಾ ಶರಣರ ಕಡೆಗೆ ಓಡಿ ಬರುತ್ತಾಳೆ. ಅವಳ ಗಂಡ ಅವಳಿಗೆ ಹಿಡಿದ ದೆವ್ವದ ಬಗ್ಗೆ ತಿಳಿಸಿದಾಗ ಆಗ ಶರಣರು ತಮ್ಮ ಬಳಿಯಿದ್ದ ವಿಭೂತಿ ಆಕೆಯ ಹಣೆಗೆ ಹಚ್ಚುತ್ತಾರೆ. ಶಿವಶಿವ ಎಂದು ನುಡಿಯಲು ತಿಳಿಸುತ್ತಾರೆ. ತಕ್ಷಣವೇ ಆಕೆಗೆ ಹಿಡಿದ ದೆವ್ವ ಬಿಟ್ಟು ಹೋಗುತ್ತದೆ. ಮುಂದೆ ಎಂದೂ ಆಕೆಯನ್ನು ಕಾಡುವುದಿಲ್ಲ.

ಮುಂದೆ ಹರಸೂರ ಗ್ರಾಮದಲ್ಲಿ ಶರಣರು ಅನುಭಾವ ನಡೆಸುತ್ತಿದ್ದಾರೆ ಎಂದು ತಿಳಿದ ಕೆಳವರ್ಗದ ಕಾಳ ಎನ್ನುವ ಭಕ್ತ ಶರಣರಿಗೆ ’ಲಿಂಗ ನಾನು ಕಟ್ಟಿಕೊಳ್ಳಬಹುದೇನಪ್ಪಾ’ ಎಂದಾಗ ಶರಣರು ಸಂತೋಷದಿಂದ ಕಟ್ಟುತ್ತಾರೆ. ಮೇಲ್ವರ್ಗದವರು ಬೇಡವೆಂದು ಹೇಳುತ್ತಾರೆ. ಆಗ ಶರಣರು ’ ನಾವೆಲ್ಲರೂ ಒಂದೇ ಎಲ್ಲರೂ ಪರಶಿವನ ಮಕ್ಕಳು, ಮೇಲು ಕೀಳು ಭಾವನೆಯಿಲ್ಲ’ ಎಂದು ಹೇಳಿ ಕಾಳಗೆ ಲಿಂಗದೀಕ್ಷೆ ಮಾಡಿಸುತ್ತಾರೆ. ಹೀಗೆ ಶರಣರ ಲೀಲೆಗಳು ನೀತ್ಯ ನೂತವಾಗಿವೆ ಎಂದು ಹೇಳಿದರು.

ಡಾ.ಸೋಮಶಂಕ್ರಯ್ಯ ವಿಶ್ವನಾಥಮಠ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here