ಕೈ ಇಲ್ಲದಿದ್ದರೂ ಕಾಲುಗಳಿಂದಲೇ ಮೋಡಿ ಮಾಡುವ ಬೈಕ್ ಮೆಕ್ಯಾನಿಕ್ | ಅಂಗವಿಕಲ ಯುವಕನ ಅದ್ಭೂತ ಟೈಲೆಂಟ್

0
312
  • ಸಾಜಿದ್ ಅಲಿ

ಕಲಬುರಗಿ: ತಾಯಿ ಹೊಟ್ಟೆಯಿಂದ ಬರುವಾಗಲೇ ಕೈಗಳಿಲ್ಲದೆ ಜನ್ಮತಾಳಿದ ಮಗುವೊಂದು ಇಂದು ಯುವಕನಾಗಿ ತನ್ನ ಕಾರ್ಯಕ್ಷಮತೆಯಿಂದಾಗಿ ದೇಶಾದ್ಯಂತ ಮನೆ ಮಾತಾಗುವ ಮೂಲಕ ಯುವಜನತೆಗೆ ಪ್ರೇರಕನಾಗಿದ್ದಾನೆ.

ನಗರದ ಅಬ್ದುಲ್ ರಹೇಮಾನ ಕಲಬುರಗಿ ನಗರದ ಸ್ಟೇಶನ್ ಬಜಾರ್ ಅಪರ್ ಲೈನ್ ನಿವಾಸಿಯಾಗಿರುವ ಅಬ್ದುಲ್ ರೆಹಮಾನ್ ಇಂದು ತನ್ನ ಕಾಲುಗಳ ಸಹಾಯದಿಂದಲೇ ಬೈಕನ್ನು ರಿಪೇರಿ ಮಾಡುವಂತಹ, ಕ್ರಿಕೆಟ್ ಆಡುವಂತಹ ಚಾಕಚಕ್ಯತೆ ಪಡೆದಿದ್ದಾನೆ. ಈತನ ಕಾರ್ಯವೈಖರಿಯನ್ನು ರಾಹುಲ್ ಗಾಂಧಿ ಕಣ್ಣಾರೆ ನೋಡಿ ಮೂಕ ವಿಸ್ಮಯರಾಗಿದ್ದಾರೆ.

Contact Your\'s Advertisement; 9902492681

ಭಾರತ ಐಕ್ಯತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಸಾವಿರಾರು ಮಂದಿ ವಿಕಲಚೇತನ ಅಬ್ದುಲ್ ರೆಹಮಾನ್, ಬೈಕ್ ನ ಬಿಡಿ ಭಾಗಗಳನ್ನು ತನ್ನ ಕಾಲುಗಳ ಸಹಾಯದಿಂದ ಜೋಡಿಸುವ ಮೂಲಕ ಬೈಕನ್ನು ತಯಾರಿಸಿ ರಾಹುಲ್ ಗಾಂಧಿಯ ಮುಂದಿರಿಸಿದ ದೃಶ್ಯಗಳು ದೇಶಾದ್ಯಂತ ವೈರಲ್ ಆಗಿದ್ದು ಮೆಚ್ಚುಗೆ ಮಹಾಪೂತ ಹರಿದು ಬರುತ್ತಿದೆ.

ಅಂಗವಿಕಲನಾಗಿ ಹೊಟ್ಟಿದ ನನ್ನಗೆ ತಂದೆ ತಾಯಿ ಮಾತ್ರ ಆಸರೆ. ಅವರು ನನ್ನಗೆ ನೀಡಿರೂವ ಜೀವನಕ್ಕೆ ನಾನು ಋಣಿ. ನಾನು ದೊಡ್ಡ ಉದ್ಯಾಮಿಯಾಗಬೇಕೆಂಬ ಕನಸ್ಸುಹೊಂದಿದ್ದು, ಎಲ್ಲಾ ಕೆಲಸ ಕಲಸಿದ ಗುರುಗಳಿಗೆ ನಾನು ಆಭಾರಿಯಾಗಿದ್ದೇನೆ. ಶ್ರಮದ ಪ್ರತಿಫಲ ನಾನು ಬೇಳೆಯುತ್ತಿದ್ದೇನೆ. ಸರಕಾರದಿಂದ ಸಿಗಬೇಕಾದ ಸೌಲಭ್ಯ ಮತ್ತು ಸೌಕರ್ಯಗಳ ಮಾಹಿತಿ ಕೊರತೆಯಿಂದ ಪಡೆಯಲು ಸಾಧ್ಯವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಕಾಳಜಿ ವಹಿಸಿ ಸೌಲಭ್ಯಗಳು ಕೊಡಸಿ, ನನ್ನ ಕನಸಿಗೆ ಬೆಂಬಲದಿಂದ ಉದ್ಯಾಮಿಯಾಗಿ ಬೇಳೆಯಲು ಪ್ರಯತ್ನಿಸುತ್ತೇನೆ. -ಅಬ್ದಲ್ ರಹೇಮಾನ್.

ಭಾರತ್ ಜೋಡೋ ಯಾತ್ರೆಯಲ್ಲಿ ಎರಡು ಕೈಗಳಿಲ್ಲದ ಅಬ್ದುಲ್ ರೆಹಮಾನ್, ರಾಷ್ಟ್ರ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಖುಷಿ ಪಡುತ್ತಿದ್ದ ದೃಶ್ಯಗಳನ್ನು ಗಮನಿಸಿದ ರಾಹುಲ್ ಗಾಂಧಿ, ಆತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕುತೂಹಲಗೊಂಡರು. ಈ ಹಿನ್ನೆಲೆಯಲ್ಲಿ ಬೈಕ್ ನ ಬಿಡಿ ಭಾಗಗಳನ್ನು ಇಟ್ಟುಕೊಂಡು, ಜಗತ್ತೇ ನೋಡುವಂತೆ ತನ್ನ ಕಾಲುಗಳ ಸಹಾಯದಿಂದ ಸಶಕ್ತವಾದ ಬೈಕ್ ವೊಂದನ್ನು ತಯಾರಿಸಿದ ಚಾಕಚಾಕ್ಯತೆ ನೋಡಿ ರಾಹುಲ್ ಗಾಂಧಿ ಮಾತ್ರವಲ್ಲ ಇಡೀ ಜಗತ್ತೆ ನಿಬ್ಬೆರಗಾಗುವಂತೆ ಮಾಡಿದ್ದಾನೆ.

ಅಬ್ದುಲ್ ರಹೇಮಾನ್ ಸೇರಿ ಮೂವರು ಮಕ್ಕಳು ಇವನೊಬ್ಬನೆ ನಮಗೆ ಗಂಡು ಮಗ, ಇಬ್ಬರು ಹೇಣು ಮಕ್ಕಳು. ಪೇನಸ್ ಹಣದಿಂದ ಜೀವನ ನಡೆಯುತ್ತಿದೆ. ನಾಳೆ ನಾವು ಇಲ್ಲದಿದ್ದೇರೆ ಅವನ ಬದುಕು ಅತಂತ್ರ. ಅವನ ಬಗ್ಗೆ ನಮ್ಮಗೆ ಚಿಂತೆಯಾಗಿದೆ. ಅವನ ಸಾಮರ್ಥ್ಯಕ್ಕೆತಕ್ಕಂತೆ ಅವನಿಗೆ ಸರಕಾರಿ ಕೆಲಸ ಸಿಕ್ಕಿದರೆ ಸೂಕ್ತ. -ಮೊಹಮ್ಮದ್ ಅರ್ಶದ್, ಅಬ್ದುಲ್ ರಹೇಮಾನ್ ತಂದೆ.

ಈತನ ಬದುಕಿನ ಸ್ಫೂರ್ತಿ, ಆತ್ಮಾಭಿಮಾನ, ಆತ್ಮವಿಶ್ವಾಸವನ್ನು ಮನಸಾರೆ ಮೆಚ್ಚಿಕೊಂಡು, ಬೆನ್ನುತಟ್ಟಿ ಐಕ್ಯತೆ ಯಾತ್ರೆ ಮುಗಿದ ಮೇಲೆ ನಿನ್ನನ್ನು ಭೇಟಿ ಮಾಡುತ್ತೇನೆ. ನಿನ್ನ ಆಸೆ, ಆಕಾಂಕ್ಷೆಗಳು ಈಡೇರಿಸುವುದು ಸಮಾಜದ ಜವಾಬ್ದಾರಿ.‌ ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆಂದು ಬೆನ್ನು ತಟ್ಟಿ ಕಳಿಸಿದ್ದಾರೆ. ಪ್ರತಿಭಾವಂತವರಿಗೆ ಒಂದಲ್ಲಾ ಒಂದು ದಿನ ಕಾಲ ಕೂಡಿ ಬರುತ್ತದೆ. ಅವರಿಗೆ ಸಿಗಬೇಕಾದ ಮಾನ್ಯತೆ ಸಿಕ್ಕೇ ಸಿಗುತ್ತದೆ ಎಂಬುದನ್ನು ಇದು ನಿದರ್ಶನವಾಗಿದೆ‌.

ಕಲಬುರ್ಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನಿದ್ದೆ ಮಾಡ್ತಿದ್ದರಾ!; ರಾಹುಲ್ ಗಾಂಧಿ ಭಾರತ್ ಐಕ್ಯತಾ ಯಾತ್ರೆಯಲ್ಲಿ ಸಾಗುತ್ತಾ ಆಯಾ ಪ್ರದೇಶದಲ್ಲಿ ಕಾಂಗ್ರೆಸ್ ಜನರ ಮನಸ್ಸನ್ನು ಗೆಲ್ಲಲ್ಲು ಏನೇಲ್ಲಾ ಮಾಡಬೇಕು ಅನ್ನುವುದನ್ನು ಕೆಲವೇ ನಿಮಿಷಗಳಲ್ಲಿ ತಿಳಿಸಿಕೊಡುತ್ತಾ ಸಾಗುತ್ತಿದ್ದಾರೆ. ಆದರೆ ಪ್ರದೇಶದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ನಾಯಕರು ಗಾಢವಾದ ನಿದ್ದೆಯಲ್ಲಿರುವ ಕಾರಣ ಎಲ್ಲ ಅವಕಾಶಗಳನ್ನು ಚೆಲ್ಲುತ್ತಾ ಭಾರತ್ ಐಕ್ಯತಾ ಯಾತ್ರೆಯ ಉದ್ದೇಶಗಳನ್ನು ವಿಫಲಗೊಳಿಸುತ್ತಿದ್ದಾರೆ‌.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here