ಕಲಬುರಗಿ: ಜಿಲ್ಲೆಯ ವ್ಯಾಪ್ತಿಗೊಳಪಡುವ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲೀನಿಕ್‍ಗಳು, ಲ್ಯಾಬೋರೇಟರಿಗಳು, ಡೈಗ್ನೋಸ್ಟೀಕ್ ಸೆಂಟರ್ ಇತ್ಯಾದಿಗಳು ಕಡ್ಡಾಯವಾಗಿ ಕೆಪಿಎಮ್‍ಇ (ಏPಒಇ) ಕಾಯ್ದೆಯಡಿ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆ ಪಡೆದು ತಾವು ಪಡೆದ ಪರವಾನಿಗೆಯನ್ವಯ ಸಂಬಂಧಪಟ್ಟ ವೈದ್ಯಕೀಯ ಔಷಧ ಪದ್ಧತಿ ಅನುಗುಣವಾಗಿ ಚೌಕಟ್ಟಿನಲ್ಲಿ ಅಗತ್ಯ ಚಿಕಿತ್ಸೆಯನ್ನು ನೀಡಬೇಕು. ಕೆಪಿಎಮ್‍ಇ (ಏPಒಇ) ಕಾಯ್ದೆ ಪ್ರಕಾರ ನಿಯಮ ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.