ಕಸುರಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಕೊಡಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಯ 2022ನೇ ಸಾಲಿನ ಪ್ರಶಸ್ತಿಗೆ ಭಾಜನರಾದ ನಿವೃತ್ತ ಎಸ್ಪಿ ಹಾಗೂ ಶಿಕ್ಷಣ ಪ್ರೇಮಿ ಚಂದ್ರಕಾಂತ ಭಂಡಾರೆಯವರಿಗೆ ಲಭಿಸಿದ್ದು,ಸೋಮವಾರ ರುಕ್ಮಾಪುರ ಗ್ರಾಮದ ಭಂಡಾರೆಯವರ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ,ಶೈಕ್ಷಣಿಕ ಸಾಂಸ್ಕೃತಿಕ ಸಾಹಿತ್ತಿಕ ಸಾಮಾಜಿಕ ಸೇವೆಯಲ್ಲಿ ಚಂದ್ರಕಾಂತ ಭಂಡಾರಿಯವರ ಸೇವೆ ಅನುಕರಣೀಯವಾಗಿದೆ ಎಂದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಸರಳತೆ ಸಹೃದಯತೆಯ ಪ್ರತೀಕವಾಗಿರುವ ಚಂದ್ರಕಾಂತ ಭಂಡಾರೆಯವರ ಖಾಕಿದಿರಿಸಿಲ್ಲಿರುವ ಮಾನವೀಯ ಸಂವೇದನೆಯ ಮನಸ್ಸು ಸಾಹಿತ್ಯ ಸಂಸ್ಕೃತಿ ಸಾಮಾಜಿಕ ಕಳಕಳಿ ನಾಡು ನುಡಿಯ ಸೇವೆಯಲ್ಲಿ ಅನುರಣಿಸಿದೆ ಅವರು ಸುರಪುರದ ಸಾಂಸ್ಕೃತಿಕ ಸಾಹಿತ್ತಿಕ ಹೆಮ್ಮೆ ಎಂದರು.
ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರು, ಸುರಪುರ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಗಳ ತವರೂರು, ಭಂಡಾರೆ ಸಾಹೆಬರ ಸಹೃದಯತೆ ಸಮಾಜಮುಖಿ ಕಾರ್ಯಗಳಿಗೆ ಸಂದ ಫಲ ಕ.ಸಾ.ಪ.ನೀಡುತ್ತಿರುವ ವರ್ಷದ ವ್ಯಕ್ತಿ ಪ್ರಶಸ್ತಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಕಾಂತ ಭಂಡಾರೆಯವರು ನನ್ನ ಕೈಲಾದಮಟ್ಟಿಗೆ ಸಾಹಿತ್ಯ ಕಲೆ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವೆ ತಾ.ಕ.ಸಾ.ಪ.ದ ವತಿಯಿಂದ ಕೊಟ್ಟಿರುವ ವರ್ಷದವ್ಯಕ್ತಿ ಪ್ರಶಸ್ತಿಯಿಂದ ನನಗೆ ಸಂತೋಷವಾಗಿದೆ ಎಂದರು.
ಸಾಮಾಜಿಕ ಸಾಂಸ್ಕೃತಿಕ ಸಾಹಿತ್ತಿಕ ಸಾಮಾಜಿಕ ಕಾರ್ಯಗಳಿಗೆ ಸದಾ ಸಿದ್ದಹಸ್ತರು ನಮ್ಮ ಭಂಡಾರೆಯವರು ಈ ನಾಡಿನ ಹೆಮ್ಮೆಯ ಪುತ್ರ ಎಂದು ಸಾಹಿತಿ ಶ್ರೀ ನಿವಾಸ ಜಾಲವಾದಿ ಹೇಳಿದರು.
ವೆದಿಕೆಯಲ್ಲಿ ಸಾಹಿತಿ ಪ್ರಕಾಶ್ಚಂದ ಜೈನ್. ಪ್ರಕಾಶ ಸಜ್ಜನ. ಉಪಸ್ಥಿತರಿದ್ದರು.ಹೆಚ್.ರಾಠೋಡ ನಿರೂಪಿಸಿದರು.ವೀರಪ್ಪ ಸಿಂಪಿ ಪ್ರಾರ್ಥನೆ ಯನ್ನು ಮಾಡಿದರೆ ವೆಂಕಟೇಶ ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ಮಲ್ಲಿಕಾರ್ಜುನಯ್ಯಸ್ವಾಮಿ ಹಿರೇಮಠ ವಂದಿಸಿದರು.
ಸೋಮಶೇಖರ್ ಶಾಬಾದಿ. ಮಂಜುನಾಥ ಗುಳಗಿ. ಶಿವರಾಜ ಅವಟಿ.ಗಂಗಾಧರ ರುಮಾಲ.ಪ್ರಕಾಶ ಅಂಗಡಿ.ಸೋಮರಡ್ಡಿ ಮಂಗಿಹಾಳ.ಶ್ರೀ ಶೈಲ ಯಂಕಂಚಿ. ದೊಡ್ಡಮಲ್ಲಿಕರ್ಜುನ ಹುದ್ದಾರ. ಪ್ರಕಾಶ ಅಲಬನೂರ.ಕನಕಪ್ಪ ವಾಗಿನಗೇರಿ ಮಹಾಂತೇಶ ಗೋನಾಲ. ಗೋಪಣ್ಣ ಯಾದವ. ಕೃಷ್ಣ ದರಬಾರಿ. ಮೋನಪ್ಪ ಕಳಸದ. ಪ್ರಕಾಶ ಬಣಗಾರ. ಚನ್ನಬಸಪ್ಪ ಹೂಗಾರ. ಸದಾಶಿವ ಮಿಣಜಗಿ.ವಿಜಯಕುಮಾರ ನೆವಣಿ. ಮಹೇಶ ಗಂಜಿ. ಮಲ್ಲು ಬಾದ್ಯಾಪುರ. ನಿಂಗಣ್ಣ ಗೋನಾಲ. ರಾಘವೇಂದ್ರ ಭಕ್ರಿ. ಎ.ಕಮಲಾಕರ. ಯಂಕಣ್ಣ ಯಾದವ. ಸಿದ್ದಯ್ಯ ಮಠ. ಶಶಿಕುಮಾರ. ಜಗಧೀಶ. ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕರು ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.