ಎಸ್‍ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

0
41

ಇದೇ ವಿಷಯವನ್ನಿಟ್ಟುಕೊಂಡು ವಾಲ್ಮೀಕಿ ಸಮುದಾಯದವರು ಮಂಗಳವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಬಳಿ ತೆರಳಿ ನಕಲಿ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮನವಿ ಸಲ್ಲಿಸಿದರು.

ಕಲಬುರಗಿ: ನಾಯಕ ಸಮುದಾಯಕ್ಕೆ ಸೇರಿದ ತಳವಾರ ಹಾಗೂ ಪರಿವಾರ ಸಮುದಾಯದ ಹೊರತುಪಡಿಸಿ ಇತರೆ ಸಮುದಾಯಗಳು ತಳವಾರ ಸಮುದಾಯಕ್ಕೆ ಕಾನೂನು ಬಾಹಿರವಾಗಿ ಎಸ್.ಟಿ. ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಮಹರ್ಷಿ ವಾಲ್ಮೀಕಿ ನಾಯಕರ ಸಂಘ, ರಾಜ್ಯ ಎಸ್‍ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ಆರೋಪಿಸಿತು.

Contact Your\'s Advertisement; 9902492681

ಸಮಿತಿ ಮುಖಂಡ ನಿವೃತ್ತ ಜಿಲ್ಲಾಧಿಕಾರಿ ಶಿವಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಸಮಾವೇಶದಲ್ಲಿ ತಳವಾರರಿಗೆ ಎಸ್.ಟಿ. ಪ್ರಮಾಣ ಪತ್ರ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದೇಶದಲ್ಲಿ ನಾಯಕ ಹಾಗೂ ವಾಲ್ಮೀಕಿ ಸಮುದಾಯಗಳಿಗೆ ಸೇರಿದ ಪರಿಶಿಷ್ಟ ಪಂಗಡದ ಕ್ರಂಘಿ.ಸಂ 38ರಲ್ಲಿ ಬರುವ ನಾಯ್ಕಡ, ನಾಯಕ, ಚೋಳ ನಾಯಕ, ಕಪಾಡಿಯಾ ನಾಯಕ, ಮೋಟಾ ನಾಯಕ ಜಾತಿಗಳ ಜತೆ ಅದೇ ಜಾತಿಯ ಪರಿವಾರ-ತಳವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ವಿಸ್ತರಿಸಿ ಕೇಂದ್ರ ಸರಕಾರ ಆದೇಶದ ಗೆಜೆಟ್ ಹೊರಡಿಸಿದೆ. ಇದರಂತೆ ಸಮಾಜ ಕಲ್ಯಾಣ ಇಲಾಖೆಯ ಆಧೀನ ಕಾರ್ಯದರ್ಶಿಗಳು ಆದೇಶ  ನೀಡಿದ್ದಾರೆ.

ಆದರೆ ಹಿಂದುಳಿದ ವರ್ಗದವರ ಪಟ್ಟಿಯ 88ಎಚ್ ನಲ್ಲಿ ಅಂಬಿಗ, ಗಂಗಾಮತಸ್ಥಘಿ, ಕಬ್ಬಲಿಗ ಜಾತಿ ಸೂಚಕ ಪದಗಳ ತಳವಾರರಿಗೆ ಜಾತಿ ಪ್ರಮಾನ ನೀಡಲು ಬರುವುದಿಲ್ಲ. ರಾಜ್ಯದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ನಾಯಕ ಜನಾಂಗದವರು ತಳವಾರ ಎಂದು ಜಾತಿ ಕಲಂನಲ್ಲಿ ನೋಂದಣಿ ಮಾಡಿಲ್ಲ. ಆದರೆ ಬೇರೆ ಜಾತಿಯವರು ಜಾತಿ ಕಲಂನಲ್ಲಿ ತಳವಾರ ಎಂದು ನಮೂದಿಸಿದ್ದಾರೆ. ಇಂತವರಿಗೆ ಯಾವುದೇ ಕಾರಣಕ್ಕೂ ಎಸ್‍ಟಿ ಪ್ರಮಾನ ಪತ್ರ ನೀಡಬಾರದು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕೆಲವರು ವಾಲ್ಮೀಕಿ ಸಮುದಾಯದ ತಳವಾರರಿಗೆ ಎಸ್‍ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹೊರಡಿಸುತ್ತಿದ್ದಾರೆ. ಇದರಿಂದ ಅಣ್ಣ ತಮ್ಮಂದಿರಂತೆ ಇರುವ ಜಾರಿಗಳ ನಡುವೆ ಕಲಹ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖಂಡ ಮಾರೆಪ್ಪ ನಾಯಕ ಮಗ್ದಂಪೂರ ಮಾತನಾಡಿ, ಸಮುದಾಯ ಮುಖಂಡ, ಹೋರಾಟಗಾರ ಶ್ರವಣಕುಮಾರ ನಾಯಕ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇಲ್ಲಿವರೆಗೆ ನಮ್ಮ ಸುಮಾಯದ ಹೋರಾಟಗಾರರು ಯಾವುದೇ ಪ್ರಕರಣ ಹಿಂಪಡೆದಿಲ್ಲ. ಅವರು ಹೇಳಿದನ್ನು ಸಾಬೀತು ಮಾಡಬೇಕು ಇಲ್ಲದಿದ್ದರೆ ಮಾನ ನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು. ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ್, ಸಿರಿಗೇರಿ ತಿಪ್ಪೇಶಿ ಕೆ.ಎಸ್.ಮೃತ್ಯುಂಜಯ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here