ಕಲಬುರಗಿ: ಇಲ್ಲಿನ ಶರಣಬಸಪ್ಪ ಅಪ್ಪಾ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಓರ್ವನನ್ನು ಹಾಡುಹಲೇ ಮಾರಾಕಾಸ್ತ್ರದಿಂದ ಕೊಲೆ ಮಾಡಿರುವ ಘಟನೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ನಗರದ ನಿವಾಸಿ ಮೊಹಮ್ಮದ್ ಮುದ್ದಸೀರ್ (19) ಕೊಲೆಯಾದ ವಿದ್ಯಾರ್ಥಿ. ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಛೋಟಾ ರೋಜಾ ಬಡಾವಣೆಯ ಬೌವುಲಿಗಲ್ಲಿಯ ಅಮಿರ್ ಗುಲಶನ್ ಫಂಕ್ಷನ್ ಹಾಲ್ ಹತ್ತಿರ ಆರೋಪಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದರು.
ಗಾಯಗೊಂಡ ಮುದ್ದಸೀರ್ ನನ್ನು ಮಣೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾನೆ. ನಂತರ ಶವವನ್ನು ಜಿಲ್ಲಾ ಆಸ್ಪತ್ರೆ ಶವಗ್ರಹಕ್ಕೆ ಸಾಗಿಸಿ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.
ನಗರದಲ್ಲಿ ಹಗಲಿನಲ್ಲಿ ಹತ್ಯೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಕಾರಣ,ತಕ್ಷಣ ಕೊಲೆ ಮಾಡಿರುವ ಆರೋಪಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಗರದಲ್ಲಿ ಘಟನೆ ಮರುಕಳಿಸದ ರೀತಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡಬೇಕೆಂದು ಮುದ್ದಸೀರ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.