ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕ ಗೊಂಡ ಅವಿನಾಶ ಕುಲಕರ್ಣಿ ರೇವೂರ ರವರಿಗೆ ಬಿಜೆಪಿಯ ನೇಕಾರ ಪ್ರಕೋಷ್ಠ ಹಾಗೂ ನೇಕಾರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸನ್ಮಾನಿಸಲಾಯಿತು.
ಪ್ರಕೋಷ್ಠದ ಸಹ-ಸಂಚಾಲಕರ ನೈತೃತ್ವದಲ್ಲಿ ಪಾಲ್ಗೊಂಡ ನೇಕಾರ ಒಕ್ಕೂಟದ ಸದಸ್ಯ ನ್ಯಾಯವಾದಿ ಜೇ. ವಿನೋದ ಕುಮಾರ ಸ್ವಾಗತಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸಿ ಹುದ್ದೆಗೆ ನೇಮಕ ಮಾಡಿದ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ವ್ಯಕ್ತಪಡಿಸಿದರು.
ಮಹಾನಗರದಲ್ಲಿ ಹಿಂದುಳಿದ ನೇಕಾರ ಸಮುದಾಯದ ಪ್ರತಿ ಜನಾಂಗಕ್ಕೆ ಅನುಕೂಲ ವಾಗುವಂತೆ ಸಮುದಾಯ ಭವನಕ್ಕೆ ಸ್ಥಳ ಅವಕಾಶ ಮಾಡಿ ಕೊಟ್ಟು, ಮುಂದಿನ ದಿನಗಳಲ್ಲಿ ಕ. ಕ. ಅಭಿವೃದ್ಧಿ ಮಂಡಳಿಯಿಂದ ಅನುದಾನದಲ್ಲಿ ನೇಕಾರ ಸಮುದಾಯಕ್ಕೆ ಸರ್ಕಾರದ ವತಿಯಿಂದ ಜಮೀನು ಮಂಜೂರು ಅನುಕೂಲ ಕಲ್ಪಿಸಲು ಕೋರಿದರು.
ಸನ್ಮಾನ ಸ್ವೀಕರಿಸಿ ಅವಿನಾಶ ಕುಲಕರ್ಣಿ ಮಾತನಾಡಿ, ಸಮುದಾಯದ ಎಲ್ಲಾ ಜನರ ಆಶೆಯಂತೆ ಕ್ರೀಯಾಶೀಲನಾಗಿ ಕೆಲಸಮಾಡಿ ತೋರಿಸುತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 3 ದಶಕಗಳಿಂದ ನಿಷ್ಟೇ ಯಿಂದ ಬಿಜೆಪಿಗೆ ಬೆಂಬಲ ನೀಡುತ್ತಾ ಬರುತ್ತಿದೆ ಮತ್ತು ರಾಜಕೀಯ ಕಷ್ಟ ಸಂದರ್ಭದಲ್ಲಿ ಜೊತೆ ನಿಂತು ಮಾನ ಮುಚ್ಚಿದೆ ಎನ್ನುವ ಕಲ್ಪನೆ ಪಕ್ಷಕ್ಕೆ ಇದೆ. ಅದಕ್ಕೆ ನಮ್ಮ ಘೋಷಣೆ, ರೈತ ಮತ್ತು ನೇಕಾರ ಎರಡು ಕಣ್ಣುಗಳು ಎಂದು ತಿಳಿದು, ಸರ್ಕಾರ ರಚನೆ ಗೊಂಡ ತಕ್ಷಣ ನೇಕಾರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ ಅವರು ನನ್ನ ಅವಧಿಯಲ್ಲಿ ಎಲ್ಲರಿಗೂ ಶಾಶ್ವತವಾಗಿ ನೆಲೆಯುರುವಂತೆ ಸ್ಥಳ ಅವಕಾಶ ಕಲ್ಪಿಸಲು ಪ್ರಯತ್ನ ಸುತೇನೆ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಕುರಹಿನ ಶೆಟ್ಟಿ ಸಮಾಜದ ವತಿಯಿಂದ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ಚಂದ್ರಶೇಖರ್ ಮ್ಯಾಳಗಿ, ಅಧ್ಯಕ್ಷ ಅಣ್ಣರಾಯ ಕುಣಕೇರಿ, ಸಮಾಜ ಸದಸ್ಯರು ಉಪಸ್ಥಿತರಿದ್ದರು. ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ, ದೇವಾಂಗ ಸಮಾಜದ ರಾಘವೇಂದ್ರ ಮೊಧೋಳ, ಸ್ವಕುಲಸಾಲಿ ಸಮಾಜದ ರಾಜ ಗೋಪಾಲ ಭಂಡಾರಿ, ಜಾಡರ ಸಮಾಜದ ಅಶೋಕ ಬೆನೂರ, ರೇವಣ್ಣಸಿದ್ದಪ್ಪ ಗಡ್ಡದ, ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ್, ಪದ್ಮಸಾಲಿ ಸಮಾಜದ ಪ್ರದೀಪ ಸಂಗಾ ಸೇರಿದಂತೆ ಇತರರು ಇದ್ದರು.