ತಂತ್ರಜ್ಞಾನದಿಂದ ಭ್ರಷ್ಟಾಚಾರಕ್ಕೆ ಅಂಕುಶ | ಯೋಜನೆಗಳಿಗೆ ವೇಗದ ಸ್ಪರ್ಶ; ಪ್ರಧಾನಮಂತ್ರಿ ನರೇಂದ್ರ ಮೋದಿ

0
10

ಬೆಂಗಳೂರು: ತಂತ್ರಜ್ಞಾನದಿಂದ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಸಾಧ್ಯವಾಗಿದ್ದು,ಯೋಜನೆಗಳಿಗೆ ವೇಗದ ಸ್ಪರ್ಶ ನೀಡಿದೆ ಮತ್ತು ಪಾರದರ್ಶಕತೆಯೂ ಹೆಚ್ಚಿಸಿದೆ. ಇದರಿಂದ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣವನ್ನು ಸಾಧಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದಲ್ಲಿ  ಭ್ರಷ್ಟಾಚಾರಕ್ಕೆ ತೆರೆಎಳೆಯುವ ಕೆಲಸ ಮಾಡಲಾಗಿದೆ. ನೇರ ನಗದು ವರ್ಗಾವಣೆ, ಜನ್ ಧನ್, ಆಧಾರ್ ಕಾರ್ಡ್,ಇ-ಮಾರ್ಕೆಟ್ ಸೇರಿದಂತೆ ಎಲ್ಲದರಲ್ಲೂ ಭಾರತ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ತಂತ್ರಜ್ಞಾನ ವಹಿಸಿದ ಪಾತ್ರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು ತಂತ್ರಜ್ಞಾನ ಬಳಸಿಕೊಂಡು ಸರಕಾರದ ವಿವಿಧ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು ಹೇಗೆ ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ತಂತ್ರಜ್ಞಾನಕ್ಕೆ ಮಾನವ ಸ್ಪರ್ಶ ನೀಡುವುದು ಹೇಗೆ ಎಂಬುದನ್ನು ಭಾರತವೂ ತೋರಿಸಿಕೊಟ್ಟಿದೆ. ಭಾರತದಲ್ಲಿ, ತಂತ್ರಜ್ಞಾನವು ಸಮಾನತೆ ಮತ್ತು ಸಬಲೀಕರಣದ ಶಕ್ತಿಯಾಗಿದೆ ಎಂದು ಅವರು ಬಣ್ಣಿಸಿದರು.

ತಂತ್ರಜ್ಞಾನ ಬಳಸಿಕೊಂಡು 200ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ನೀಡಿರುವುದು. 200 ಮಿಲಿಯನ್ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ ಎಂದರು.

ಈ ವರ್ಷ ಜಾಗತಿಕ ಆವಿμÁ್ಕರ ಸೂಚ್ಯಂಕದಲ್ಲಿ ಭಾರತ 40 ನೇ ಸ್ಥಾನಕ್ಕೆ ಜಿಗಿದಿದೆ. 2015 ರಲ್ಲಿ ನಾವು 81 ನೇ ಸ್ಥಾನದಲ್ಲಿದ್ದೆವು! 2021 ರಿಂದ ಭಾರತದಲ್ಲಿ ಯುನಿಕಾರ್ನ್ ಸ್ಟಾರ್ಟ್-ಅಪ್‍ಗಳ ಸಂಖ್ಯೆ ದ್ವಿಗುಣಗೊಂಡಿದೆ! ನಾವು ಈಗ ವಿಶ್ವದ 3 ನೇ ಅತಿದೊಡ್ಡ ಸ್ಟಾರ್ಟ್ ಅಪ್ ಹಬ್ ಆಗಿದ್ದೇವೆ. ನಾವು 81ಸಾವಿರಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್‍ಅಪ್‍ಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಆರ್ & ಡಿ ಕೇಂದ್ರಗಳನ್ನು ಹೊಂದಿರುವ ನೂರಾರು ಅಂತಾರಾಷ್ಟ್ರೀಯ ಕಂಪನಿಗಳಿವೆ; ಇದಕ್ಕೆ ಕಾರಣ ಭಾರತದ ಪ್ರತಿಭೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಪ್ರವೇಶವನ್ನು ಹೆಚ್ಚಿಸುವ ಮೂಲಕ ಭಾರತೀಯ ಯುವಕರನ್ನು ಸಬಲೀಕರಣಗೊಳಿಸಲಾಗುತ್ತಿದೆ. ದೇಶದಲ್ಲಿ ಮೊಬೈಲ್ ಮತ್ತು ಡೇಟಾ ಕ್ರಾಂತಿಯಾಗುತ್ತಿದೆ. ಕಳೆದ 8 ವರ್ಷಗಳಲ್ಲಿ ಬ್ರಾಡ್‍ಬ್ಯಾಂಡ್ ಸಂಪರ್ಕಗಳು 60 ಮಿಲಿಯನ್‍ನಿಂದ 810 ಮಿಲಿಯನ್‍ಗೆ ಏರಿದೆ. ಸ್ಮಾರ್ಟ್‍ಫೆÇೀನ್ ಬಳಕೆದಾರರು 150 ಮಿಲಿಯನ್‍ನಿಂದ 750 ಮಿಲಿಯನ್‍ಗೆ ಏರಿದೆ. ಅಂತರ್ಜಾಲದ ಬೆಳವಣಿಗೆಯು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವೇಗವಾಗಿದೆ ಎಂದರು.

ಬಡತನದ ವಿರುದ್ಧದ ಯುದ್ಧದಲ್ಲಿ ಭಾರತ ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸುತ್ತಿದೆ. ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಜಮೀನುಗಳನ್ನು ನಕ್ಷೆ ಮಾಡಲು ಡ್ರೋನ್‍ಗಳನ್ನು ಬಳಸುತ್ತಿದ್ದೇವೆ. ನಂತರ, ಆಸ್ತಿ ಕಾರ್ಡ್‍ಗಳನ್ನು ಜನರಿಗೆ ನೀಡಲಾಗುತ್ತದೆ. ಇದು ಭೂ ವಿವಾದಗಳನ್ನು ಕಡಿಮೆ ಮಾಡುವುದರ ಜೊತೆಗೆ ಬಡವರಿಗೆ ಹಣಕಾಸು ಸೇವೆಗಳು ಮತ್ತು ಸಾಲವನ್ನು ಪಡೆಯಲು ಸಹಾಯ ಮಾಡಲಿದೆ ಎಂದು ಅವರು ಹೇಳಿದರು.

ಬಂಡವಾಳ ಹೂಡಿಕೆದಾರರ ಪಾಲಿಗೆ ಭಾರತ ಈಗ ಕೆಂಪು ಪಟ್ಟಿಗೆ ಹೆಸರುವಾಸಿಯಾದ ಸ್ಥಳವಲ್ಲ. ಈಗ ಹೂಡಿಕೆದಾರರಿಗೆ ರತ್ನಗಂಬಳಿಯ ಸ್ವಾಗತವಿದೆ ಎಂದರು.

ಬೆಂಗಳೂರು ಕೊಂಡಾಡಿದ ಪ್ರಧಾನಮಂತ್ರಿ: ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಎಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ, ನಮ್ಮ ಕನ್ನಡ ನಾಡಿಗೆ ಸ್ವಾಗತ, ನಮ್ಮ ಬೆಂಗಳೂರಿಗೆ ಸ್ವಾಗತ ಎಂದು ಕನ್ನಡದಲ್ಲಿಯೇ ಭಾಷಣ ಶುರು ಮಾಡಿ ಗಮನಸೆಳೆದರು.

ತಮ್ಮ ಭಾಷಣದುದ್ದಕ್ಕೂ ಬೆಂಗಳೂರು ಮೇಲಿನ ಪ್ರೀತಿ,ಬೆಂಗಳೂರು ದೇಶದ ತಂತ್ರಜ್ಞಾನದಲ್ಲಿ ವಹಿಸುತ್ತಿರುವ ಪಾತ್ರವನ್ನು ಕೊಂಡಾಡಿದರು.
ಬೆಂಗಳೂರು ಎಲ್ಲರನ್ನು ಒಳಗೊಳ್ಳುವ ನಾವಿನ್ಯತೆಯ ಸಂಸ್ಕøತಿಯ ನಗರವಾಗಿದೆ. ಬೆಂಗಳೂರು ತಂತ್ರಜ್ಞಾನ ಮತ್ತು ಸ್ಟಾರ್ಟಪ್‍ಗಳ ತವರು. ಬೆಂಗಳೂರು ಸಂಶೋಧನೆಯ ತಾಣವಾಗಿದ್ದು,ಇಲ್ಲಿ ತಂತ್ರಜ್ಞಾನದ ಕ್ರಾಂತಿ ನಡೆಯುತ್ತಿದೆ ಎಂದರು.

ಹಲವು ವರ್ಷಗಳಿಂದ ಬೆಂಗಳೂರು ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ತಂತ್ರಜ್ಞಾನ ನಗರಿಯಿಂದ ನಮ್ಮೆಲ್ಲರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಆಶಿಸಿದರು. ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ ಮೂರು ದಿನಗಳ ಕಾಲ ಜರುಗಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here