ಭಾಲ್ಕಿ: ಸಾಣೇಹಳ್ಳಿಯ ಶಿವಸಂಚಾರ ಕಲಾ ಸಂಘ ಮತ್ತು ಗುರುಚನ್ನಬಸವ ಪಟ್ಟದ್ದೇವರ ಕಲಾ ಮತ್ತು ಸಾಂಸ್ಕøತಿಕ ಕ್ರೀಡಾ ವೇದಿಕೆ ಸಂಯುಕ್ತಾಶ್ರಮಯದಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶಿಸಲಾಯಿತು.
ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು, ಸಾಣೇಹಳ್ಳಿಯ ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ನಮ್ಮ ನಾಡು ಕಂಡ ಅಪರೂಪದ ರಂಗಜಂಗಮರು ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಿವಸಂಚಾರ ಕಲಾಬಳಗಕ್ಕೆ 25 ವರ್ಷ ಪೂರೈಸುತ್ತಿರುವ ಕಾರಣಕ್ಕಾಗಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬಸವಾದಿ ಶರಣರ ದರ್ಶನ ಶೀರ್ಷಿಕೆ ಅಡಿಯಲ್ಲಿ ನಾಟಕಗಳ ಪ್ರದರ್ಶನ ನಡೆದಿರುವುದು ಈ ದಿನಮಾನದ ಬಹುದೊಡ್ಡ ಸಾಧನೆಯೆಂದೇ ಹೇಳಬೇಕು.
ಪೂಜ್ಯರು ಪ್ರತಿವರ್ಷ ಶಿವಸಂಚಾರ ಕಲಾಬಳಗದಿಂದ ನಾಡಿನ ಉದ್ದಗಲಕ್ಕೂ ಶರಣರ ಚಿಂತನೆಗಳನ್ನು ನಾಟಕಗಳ ಮೂಲಕ ಬಿತ್ತುತ್ತಿರುವುದು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ. ವಿಶೇಷವಾಗಿ ಈ ವರ್ಷ ರೌಪ್ಯ ಮಹೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡಿರುವ ಈ ನಾಟಕ ಪ್ರದರ್ಶನ ನಮ್ಮ ಚನ್ನಬಸವೇಶ್ವರ ಗುರುಕುಲದ ಮಕ್ಕಳಿಂದ ಅರ್ಥಪೂರ್ಣವಾಗಿ ಜರುಗಿದೆ ಎಂದು ಹೇಳಲಿಕ್ಕೆ ಸಂತೋಷವಾಗುತ್ತದೆ.
ನಮ್ಮ ಗುರುಕುಲದ ಮಕ್ಕಳು ನಮ್ಮ ಭಾಗದ ಹಿರಿಯ ಸಾಹಿತಿಗಳಾದ ಡಾ.ಬಸವರಾಜ ಸಬರದ ರಚಿಸಿರುವ ಶಿವಯೋಗಿ ಸಿದ್ಧರಾಮೇಶ್ವರ ಎಂಬ ನಾಟಕವನ್ನು ಅರ್ಥಪೂರ್ಣವಾಗಿ ಅಭಿನಯಿಸಿದ್ದಾರೆ. ಅವರಿಗೆ ನಿರ್ದೇಶಕರಾಗಿ ಮಂಜುನಾಥ ಶಿಕಾರಿ ಅವರು ಮಾರ್ಗದರ್ಶನ ಮಾಡಿದ್ದಾರೆ ಎಂದು ನುಡಿದರು.
ಈ ಸಮಾರಂಭದ ಉದ್ಘಾಟನೆಯನ್ನು ಪ್ರೊ.ಚಂದ್ರಶೇಖರ ಬಿರಾದಾರ ಅವರು ನೆರವೇರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನರಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜು ಜುಬರೆ ಮುಂತಾದವರು ಉಪಸ್ಥಿತರಿದ್ದರು.