ಬಿಸಿಯೂಟ ನೌಕರರ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

0
15

ಸುರಪುರ: ತಾಲೂಕಿನಲ್ಲಿಯ ಎಲ್ಲಾ ಮದ್ಹ್ಯಾನದ ಬಿಸಿಯೂಟದ ನೌಕರರ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ನಗರದ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮದ್ಹ್ಯಾನದ ಬಿಸಿಯೂಟ ತಯಾರಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕು ಇಂದು ಬೀದಿಗೆ ಬೀಳುವ ಸ್ಥಿತಿಗೆ ಬಂದಿದೆ.ನಮ್ಮ ಸಂಘಟನೆಯಿಂದ ಈಗಾಗಲೇ ಜುಲೈ,ಅಗಷ್ಟ್,ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನ ಬಿಡುಗಡೆಗಾಗಿ ಇದೇ ನವೆಂಬರ್ 4 ರಂದು ಮನವಿ ಸಲ್ಲಿಸಲಾಗಿದೆ,ಮುಖ್ಯ ಅಡುಗಡೆ ಸಹಾಯಕಿಯರು ಮೊಟ್ಟೆ,ಹಾಲು,ಹಣ್ಣು ವಿತರಣೆಗೆ ಹಾಕಿದ ಹಣವನ್ನು ಪಾವತಿಸಿಲ್ಲ ಇದರಿಂದ ಬಿಸಿಯೂಟ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು,ಇಂತಹ ಪರಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಆದ್ದರಿಂದ ಎಲ್ಲರ ವೇತನ ನೀಡಬೇಕು ಮತ್ತು ಬಿಸಿಯೂಟದ ಜಿಲ್ಲಾಧಿಕಾರಿಗಳು ಮುಖ್ಯ ಅಡುಗೆಯವರ ಮೇಲೆ ನಡೆಸುತ್ತಿರುವ ದೌರ್ಜನ್ಯ,ದಬ್ಬಾಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಅಲ್ಲದೆ ತಾಲೂಕಿನ ಬಿಸಿಯೂಟದ ಸಹಾಯಕ ನಿರ್ದೇಶಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೆಲವರು ವಿನಾಃಕಾರಣ ಅವರ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯವಾಗಿದೆ.ಸಣ್ಣ ಪುಟ್ಟ ದೋಷಗಳಿದ್ದರು ಅವುಗಳಿಗೆ ಸೂಕ್ತ ಸಲಹೆ ನೀಡಿ ಸರಿಪಡಿಸುತ್ತಾರೆ.ಅಂತಹ ದಕ್ಷ ಅಧಿಕಾರಿಯ ವಿರುಧ್ಧ ದೇವಾಪುರ ಹರಿಜನ್ ವಾರ್ಡ್ ಶಾಲೆಯ ಘಟನೆಯ ಕುರಿತು ಅವರನ್ನು ಅಮಾನತ್ತುಗೊಳಿಸಬೇಕೆಂದು ಕೆಲವರು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಆರೋಪ ಮಾಡುತ್ತಿರುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು.

ನಂತರ ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಚಂದ್ರಶೇಖರ ಪವರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೇವಿಂದ್ರಪ್ಪ ಪತ್ತಾರ,ಜಿಲ್ಲಾಧ್ಯಕ್ಷ ಕಲ್ಪನಾ ಗುರಸುಣಗಿ,ತಾಲೂಕು ಅಧ್ಯಕ್ಷ ಶ್ರೀದೇವಿ ಕೂಡಲಗಿ,ಪ್ರಧಾನ ಕಾರ್ಯದರ್ಶಿ ಯಮುನಾ ಕಕ್ಕೇರಾ,ಬಸಮ್ಮ ತಡಬಿಡಿ,ಸುಧಾ ಯಕ್ತಾಪುರ,ನೀಲಮ್ಮ ವಜ್ಜಲ್,ಮಲ್ಲಯ್ಯ ವಗ್ಗಾ,ತಿಮ್ಮಯ್ಯ ತಳವಾರ,ರಾಮಲಿಂಗಮ್ಮ ದೇವಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here