ನವರಾತ್ರಿ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ

0
34

ಕಲಬುರಗಿ: ನಗರದ ರಾಜ ಮಹಲ ಲೇಔಟ್‍ನ ಲಕ್ಷ್ಮಿ ಮಂದಿರದ ಹತ್ತಿರ ಆವರಣದಲ್ಲಿ ಜನಪ್ರಿಯ ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿಗಳಾದ ಶಾಂತಾ ಭೀಮಸೇನ್‍ರಾವ ಉದ್ಘಾಟಿಸಿ ಮಾತನಾಡುತ್ತಾ ಬಡಾವಣೆಗಳನ್ನು ಸಾಂಸ್ಕøತಿಕವಾಗಿ ಶ್ರೀಮಂತಗೊಳ್ಳುವದು ಉತ್ತಮ ಸಮಾಜಕ್ಕೆ ಮುನ್ನುಡಿ ಬರೆದಂತೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ಸಂಗೀತ ಶಿಕ್ಷಕರ ಸಂಘದ ಕಾರ್ಯದರ್ಶಿ ವಿರೇಶ್ ಹೂಗಾರ ಮಾತನಾಡಿ, ಮಕ್ಕಳು ಪಾಠದ ಜೊತೆಗೆ ಪಠೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ನುಡಿದರು. ಅತಿಥಿಗಳಾಗಿ ಚಂದ್ರಶೇಖರ ದೊಡ್ಡಮನಿ ಮಾತನಾಡಿ ಮನೋವಿಕಾಶನಕ್ಕಾಗಿ ಕಲೆಗಳು ನಮಗೆ ಬೇಕೆಬೇಕು ಎಂದರು. ಶಾಂತಲಿಂಗಯ್ಯ ಎಸ್ ಮಠಪತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಮೊದಲಿಗೆ ಕು. ಶಾಂಭವಿ ಭರತನಾಟ್ಯವನ್ನು ಪ್ರಧರ್ಶನ ಮಾಡಿದರು. ನಂತರ ದಯಾನಂದ ಹಿರೇಮಠ ತಂಡದವರಿಂದ ಜಾನಪದ ನೃತ್ಯ, ಮಹಾಂತೇಶ ಹರವಾಳ ತಬಲಾ ಸೊಲೊ ವಾದನ, ಅರುಣಕುಮಾರ ಸುಗಮ ಸಂಗೀತ, ಶ್ರೀಧರ ಹೊಸಮನಿ ಅವರಿಂದ ಶಾಸ್ತ್ರೀಯ ಸಂಗೀತ ನೆರೆವೇರಿದವು.

ಕಾಂiÀರ್iಕ್ರಮದ ಕೊನೆಯಲ್ಲಿ ಈಶಮ್ಮಾ ವಿಶ್ವನಾಥ ತಂಡದವರಿಂದ ಇವನಾರವ ಎಂಬ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಾಡುವಂತೆ ಮಾಡಿತು. ಗೊಂಗೋತ್ರಿ ಮಠಪತಿ ನಿರೂಪಿಸಿದರು. ಸಂಘದ ಅಧ್ಯಕ್ಷ ಶಾಂತಲಿಂಗಯ್ಯ ಮಠಪತಿ ವಂದಿಸಿದರು. ಅಪಾರ ಪ್ರೇಕ್ಷಕರು ಕಾರ್ಯಕ್ರಮವನ್ನು ವಿಕ್ಷೀಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here