ಕಲಬುರಗಿ: ಇಂಡಿಯನ್ ಅರ್ಥೋಪೆಡಿಕ್ ಅಸೋಶಿಯೇಷನ್ ವತಿಯಿಂದ ನಗರದ ಶಹಾಬಜಾರದಲ್ಲಿನ ಆರಾಧನಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಎಲುಬು ಮತ್ತು ಕೀಳುಗಳ ರಾಷ್ಟ್ರೀಯ ದಿನಾಚರಣೆ ನಿಮಿತ್ತ ಆಯೋಜಿಸಿದ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಬಿ.ಕಾಮರೆಡ್ಡಿ ಚಾಲನೆ ನೀಡಿದರು.
ಅರ್ಥೋಪೆಡಿಕ್ ವೈದ್ಯ ಡಾ.ಮಾರ್ಥಂಡ ಕುಲಕರ್ಣಿ, ಕಾಲೇಜಿನ ಪ್ರಿನ್ಸಿಪಾಲ್ ಚೇತನಕುಮಾರ ಗಾಂಗಜೀ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿ ಅನೇಕರು ಉಪಸ್ಥಿತರಿದ್ದರು.
ಡಾ.ಎಸ್.ಬಿ.ಕಾಮರೆಡ್ಡಿ ಮಾತನಾಡಿ, ನಮ್ಮ ಆರೋಗ್ಯವಂತ ದೇಹಕ್ಕೆ ಮಿತ ಮತ್ತು ಹಿತವಾದ ಆಹಾರ ಮುಖ್ಯ. ನಮ್ಮ ದೇಹದ ಎಲುಬು ಬಲಿಷ್ಠವಾಗಿ ಇಟ್ಟುಕೊಳ್ಳಬೇಕಾದರೆ, ಸಮರ್ಪಕವಾದ ವ್ಯಾಯಾಮವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ. ನಾವೆಲ್ಲರೂ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದುದು ಇಂದು ಹೆಚ್ಚಿನ ಅಗತ್ಯವಿದೆ.
ಅರಿವಿನ ಕೊರತೆಯಿಂದ ನಾವು ಇಂದು ಆರೋಗ್ಯವನ್ನು ನಮ್ಮ ಕೈಯಿಂದಲೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ, ಪ್ರತಿಯೊಬ್ಬರೂ ಆರೋಗ್ಯಪೂರ್ಣ ಎಲುಬು ಇದ್ದರೆ, ಆರೋಗ್ಯವಂತ ದೇಹವಿಟ್ಟುಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಆರೋಗ್ಯ ಕುರಿತಾದ ಟಿಪ್ಸಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು..