ಮತದಾನದ ಹಕ್ಕನ್ನು ಕೊಟ್ಟ ಮಹಾ ನಾಯಕ ಡಾ. ಬಿ.ಆರ್. ಅಂಬೇಡ್ಕರ

0
76

ಕಲಬುರಗಿ: ನಗರದ ಕೆಪಿಇ ಶಿಕ್ಷಣ ಸಂಸ್ಥೆಯ ಡಾ. ಅಂಬೇಡ್ಕರ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಡಾ. ಅಂಬೇಡ್ಕರ ವಿಚಾರ ವೇದಿಕೆಯ ಕಾರ್ಯಕ್ರಮವನ್ನು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ ಪೋತೆ ಅವರು ಉದ್ಘಾಟಿಸಿದರು.

ಅವರು ಮಾತನಾಡುತ್ತಾ ಡಾ. ಬಿ.ಆರ್. ಅಂಬೇಡ್ಕರ ರವರು ಜಗತ್ತಿನಲ್ಲಿ ಅತಿ ಹೆಚ್ಚು ಜ್ಞಾನ ಪಡೆದ ವ್ಯಕ್ತಿ ಭಾರತ ದೇಶಕ್ಕೆ ರಾಜಕೀಯ ಸ್ವಾತಂತ್ರಕ್ಕಿಂತ ಸಾಮಾಜಿಕ ಸ್ವಾತಂತ್ರ ಬೇಕೆಂದು ಡಾ. ಅಂಬೇಡ್ಕರರು ಪ್ರತಿಪಾದಿಸಿದರು. ಲಂಡನನಲ್ಲಿ ಜರುಗಿದ 3 ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಭಾರತ ದೇಶದ ಏಕೈಕ ವ್ಯಕ್ತಿ ಡಾ. ಅಂಬೇಡ್ಕರರು ದೇಶದ ಹಿತಕ್ಕಾಗಿ ತನ್ನ ಕುಟುಂಬದ ಹಿತವನ್ನು ತ್ಯಾಗ ಮಾಡಿದ ಮಹಾನ ವ್ಯಕ್ತಿ. ಜಗತ್ತಿನ ಅತಿದೊಡ್ಡ ಅಹಿಂಸಾ ವಾದಿಯಾಗಿದ್ದಾರೆ.

Contact Your\'s Advertisement; 9902492681

ಡಾ. ಬಿ.ಆರ್. ಅಂಬೇಡ್ಕರ ಅವರ ತ್ಯಾಗ ಬಲಿದಾನದಿಂದ ದೇಶ ಇಂದು ಸಮೃದ್ಧವಾಗಿದೆ ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿದೆ. ತಳಸಮುದಾಯದವರಿಗೆ ಮಿಸಲಾತಿ ಹೆಚ್ಚಿಸಿದರೆ ಅμÉ್ಟ ಸಾಲದು ಅವರ ಹಕ್ಕುಗಳನ್ನು ಇಡೆರಿಸಬೇಕು. ಬಾಬಾ ಸಾಹೇಬರನ್ನು ಓದಿದರೆ ಭಾರತದ ನಿಜವಾದ ಇತಿಹಾಸ, ಸಂಸ್ಕøತಿ ಮತ್ತು ಪರಂಪರೆಯನ್ನು ಅರಿಯಬಹುದು. ವಿದ್ಯಾರ್ಥಿಗಳಾದ ನೀವು ಅಂಬೇಡ್ಕರರ ವಿಚಾರಗಳನ್ನು ಹೆಚ್ಚೆಚ್ಚು ಓದಬೇಕು ನಿಮಗಾಗಿ ನೀವು ವಿಚಾರವಂತರಾಗಿ ಭಾರತ ದೇಶವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ಮಾಡಬೇಕು ಎಂದರು.

ಈ ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಇಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ ಮಾತನಾಡುತ್ತಾ 1935 ರಲ್ಲಿ ಭಾರತೀಯ ರಿಜರ್ವ ಬ್ಯಾಂಕ ಸ್ಥಾಪನೆಗೆ ಡಾ. ಅಂಬೇಡ್ಕರವರು ಕಾರಣರು. ಬಹುದೊಡ್ಡ ಆರ್ಥಿಕ ತಜ್ಞರು ಅವರ ವಿಚಾರಗಳು ಜಗತ್ತನ್ನು ಆಳುತ್ತಿವೆ. ವಿದ್ಯಾರ್ಥಿಗಳಾದ ನೀವು ಅಂತಹ ವಿಚಾರವಂತರಾಗಬೇಕೆಂದರು. ಮುಖ್ಯ ಅತಿಥಿಗಳಾದ ಕೆಪಿಇ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಚಂದ್ರಶೇಖರ ಶೀಲವಂತ ಮಾತನಾಡುತ್ತಾ ಡಾ. ಅಂಬೇಡ್ಕರÀರು ತಮ್ಮ ಜ್ಞಾನದಿಂದ ಇಡಿ ಜಗತ್ತಿಗೆ ಪರಿಚಯವಾಗಿದ್ದಾರೆ. ಮಹಿಳಾ ಸಬಲೀಕರಣ ಆರ್ಥಿಕ, ನೀರಾವರಿ, ರಾಜಕೀಯ ತತ್ವಜ್ಞಾನಿಯಾಗಿ, ನಮ್ಮ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದೆವೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿಜಯಕುಮಾರ ಡಿ. ಅವರು ಸ್ವಾಗತ ಮತ್ತು ಪ್ರಾಸ್ಥಾವಿಕ ಮಾತನಾಡುತ್ತ ವಿಚಾರಗಳು ಜಗತ್ತನ್ನು ಆಳುತ್ತವೆ. ಅದಕ್ಕಾಗಿ ಡಾ. ಅಂಬೇಡ್ಕರರ ವಿಚಾರಗಳನ್ನು ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ ವಿಚಾರ ವೇದಿಕೆಯ ಸಂಯೋಜಕರಾದ ಡಾ. ಗಾಂಧೀಜಿ ಮೋಳಕೆರೆ ವಂದಿಸಿದರು, ಡಾ. ರಾಜಕುಮಾರ ಮಾಳಗೆ ನಿರೂಪಿಸಿದರು, ಉಪನ್ಯಾಸಕರಾದ ಪ್ರೊ. ಸಿದ್ದಪ್ಪ ಕಾಂತಾ, ಡಾ. ಹರ್ಷವರ್ಧನ ಬಿ, ಡಾ. ಪೀರಪ್ಪ ಸಜ್ಜನ ಹಾಗೂ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here