ರೇವಗ್ಗಿ ಗೋ ಶಾಲೆಯಲ್ಲಿ ಗೋವುಗಳ ಸಾವು | ತಪ್ಪಿತಸ್ತರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

0
199

ಚಿಂಚೋಳಿ: ರೇವಣಸಿದ್ದೇಶ್ವರರು ತುಂಬ ಶಕ್ತಿಯುಳ್ಳ ದೇವರಾಗಿದ್ದು ದೇವಸ್ಥಾನದ ಹಣವನ್ನು ಲೂಟಿ ಹೊಡೆವುತ್ತಿರುವವರಿಗೆ ದೇವರ ಶಾಪ ತಟ್ಟದೇ ಬಿಡುವುದಿಲ್ಲ. ಗೋಶಾಲೆಯಲ್ಲಿ ಸಾವನ್ನಪ್ಪಿದ ಗೋವುಗಳ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆ ಮಾಡಿ ಕರ್ತವ್ಯ ಲೋಪ ಮಾಡಿ ನಿರ್ಲಕ್ಷ್ಯ ತೋರಿದ ತಪ್ಪಿತಸ್ತ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿದ ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ತಾಲೂಕಿನ ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಮೂರು ತಿಂಗಳಲ್ಲಿ 40 ಕ್ಕೂ ಹೆಚ್ಚು ಗೋವುಗಳು ಸಾವನ್ನಪ್ಪಿವೆ. ದೇವಸ್ಥಾನಕ್ಕೆ ಭಕ್ತರು ತಮ್ಮ ಹರಕೆ ತೀರಿಸಲು ಚಿಕ್ಕ ಕರುಗಳನ್ನು ಮತ್ತು ಅನಾರೋಗ್ಯದ ಗೋವುಗಳನ್ನು ತಂದು ಬಿಡುತ್ತಾರೆ ಎಂದು ಉಡಾಫೆ ಹೇಳಿಕೆ ನೀಡಿರುವ ದೇವಸ್ಥಾನದ ಆಡಳಿತ ಅಧಿಕಾರಿಗಳು ರೇವಣಸಿದ್ದೇಶ್ವರರ ಭಕ್ತರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಗೋಶಾಲೆ ಹೊಂದಿರುವ ಆಡಳಿತ ಮಂಡಳಿಯು ಗೋಶಾಲೆಗೆ ನಿರಂತರವಾಗಿ ವೈದ್ಯರಿಂದ ಗೋವುಗಳ ತಪಾಸಣೆ ಮಾಡಿಸಿ ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ದೇವಸ್ತಾನ ಸಂಭಂದಪಟ್ಟ ಅಧಿಕಾರಿಗಳು ಚಿಂಚೋಳಿ ಕ್ಷೇತ್ರದ ಮತ್ತು ಜಿಲ್ಲೆಯ ಬಿಜೆಪಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಅವರ ಅಣತಿಯಂತೆ ದೇವಸ್ಥಾನದಲ್ಲಿ ಮನಸೋ ಇಚ್ಚೆ ಆಡಳಿತ ನಡೆಸುತ್ತಿದ್ದಾರೆ ಎನ್ನುವ ವಿಷಯ ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ, ತಮ್ಮ ಅಧಿಕಾರದ ದಾಹದಲ್ಲಿ ದೇವಸ್ಥಾನದ ಹಸುಗಳ ಸಂರಕ್ಷಣೆ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸರಕಾರವು ಗೋ ಪೂಜೆ ಮಾಡಬೇಕೆಂದು ಸರಕಾರಿ ಆದೇಶ ಹೊರಡಿಸಿ ಕೇವಲ ಒಂದು ದಿನ ಗೋಪೂಜೆ ಮಾಡಿದರೆ ಸಲ್ಲದು, ಗೋವುಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸರಕಾರ ಹಾಗೂ ಅಧಿಕಾರಿಗಳು ಈ ತರಹ ಗೋವುಗಳ ಸಾವು ಆಗಲು ಬಿಡುತ್ತಿರಲಿಲ್ಲ. ಶಾಸಕರೇ ಎಲ್ಲಿದ್ದೀರಿ ನಿಮ್ಮ ಸರಕಾರವೇ ಗೋರಕ್ಷಣೆ ಗೋಪೂಜೆ ಕುರಿತು ಕಾನೂನು ಮಾಡುತ್ತಿದೆ ಕ್ಷೇತ್ರದಲ್ಲಿ ಈ ತರಹ ಗೋವುಗಳ ಸಾಯುತ್ತಿವೆ, ಏನು ಹೇಳುತ್ತೀರಿ? ಕೊನೆಗೆ ಮಾನವೀಯತೆ ಇಂದಾದರೂ ಈ ಘಟನೆ ಬಗ್ಗೆ ಸ್ಪಂದಿಸಿ ಎಂದು ಶಾಸಕ ಅವಿನಾಶ ಜಾಧವಗೆ ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here